ಮೊಮ್ಮಗನನ್ನು ಅಪ್ಪಿ ಜಗ್ಗೇಶ್ ಆಡಿದ ಮರೆಯದ ಮಾತುಗಳು !

ಹಣ ..ಹೆಸರು.. ಕೆಲಸ .. ಕೆಲಸ.. ಅನ್ನೋ ಧಾವಂತದಲ್ಲಿ ಮನೆಮಂದಿಗೆ ಸಮಯ ಕೊಡೋದು ಸ್ವಲ್ಪ ಕಷ್ಟದ ಕೆಲಸವೇ . ಅದರಲ್ಲೂ ಕಲಾವಿದರೆಂದರೆ ತಮ್ಮದೇ ಭಾವನೆಗಳು, ಪಾತ್ರಗಳ ಪ್ರಪಂಚದಲ್ಲಿ ಮುಳುಗಿ ಸಂಬಂಧಗಳಿಗೆ ಸಮಯ ನೀಡದೆ ನಂತರದ ದಿನಗಳಲ್ಲಿ ಒದ್ದಾಡಿಕೊಳ್ಳುವುದು ಸಹಜವೇ. ಅಂಥದೊಂದು ಗುನುಗು ನವರಸ ನಾಯಕ ಜಗ್ಗೇಶ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ವ್ಯಕ್ತವಾಗಿದೆ.

“ಯಾಂತ್ರಿಕವಾಗಿ ಬದುಕುವಾಗ ಮಕ್ಕಳ ಬೆಳವಣಿಗೆ ಗಮನಿಸದ ತಂದೆಗೆ..ಯಾಂತ್ರಿಕ ಬದುಕಿಗಿಂತ ಶ್ರೇಷ್ಠ ಭಾವನಾತ್ಮಕ ಬದುಕು ಅಂತ ಪಾಠ ಹೇಳಲು ದೇವರು ಕಳಿಸುವ ರೂಪವೇ ಮೊಮ್ಮಕ್ಕಳು..ನನ್ನ ಆವರಿಸಿಕೊಂಡು ಮೆತ್ತಗಾಗಿಸಿತು ಅರ್ಜುನನ ಅಪ್ಪುಗೆ” -ಜಗ್ಗೇಶ್ 

ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಎನ್ನಿಸಿಕೊಳ್ಳಬೇಕಾದರೆ ಕಲ್ಲು  ಮುಳ್ಳಿನ  ದಾರಿಯನ್ನು ಸವೆಸಿದವರೇ. ಒಂದೊಂದೇ ಕಡಿದಾದ ಮೆಟ್ಟಿಲುಗಳನ್ನ ಏರುವಾಗಿನ ಪ್ರಯಾಸದ ಕಾಲದಲ್ಲಿ ಕರುಳಿನ ಕುಡಿಯೊಂದಿಗೆ ಕಾಲಕಳೆಯಲಾಗದ ಯಾತನೆ ಅವರನ್ನು ಕಾಡದೆ ಇದ್ದಿರಲಾರದು. ಅಂಥಾ  ಸಣ್ಣದೊಂದು ನೋವನ್ನು ನೀಗಿಕೊಳ್ಳಲು ಮೊಮ್ಮಗ ಅರ್ಜುನನ ಅಪ್ಪುಗೆ ಜಗ್ಗೇಶ್ ಅವರಿಗೆ ಆಸರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಬಹಳ ಪ್ರಬುದ್ದ ಸಂದೇಶಗಳನ್ನು ನೀಡುವ ಅಪರೂಪದ ನಟ ಜಗ್ಗೇಶ್ . ಮೊಮ್ಮೊಗನನ್ನು ಎತ್ತಿ ಮುದ್ದಾಡುತ್ತಿರುವ ಪೋಸ್ಟ್ ನಲ್ಲಿ ಎಲ್ಲರಿಗೂ ಅನ್ವಯಿಸುವಂಥಾ ಸಂದೇಶ ಅಡಗಿದೆ

-Ad-

Leave Your Comments