ಜಗ್ಗೇಶ್ ಗಿಂತ ಪರಿಮಳಾ ಜಗ್ಗೇಶ್ ಧೈರ್ಯವಂತರಾ?

 

ಹೀಗೊಂದು ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣವಿದೆ. ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅಮೆರಿಕಾ ಟೂರ್ ನಲ್ಲಿದ್ದಾರೆ. ಅಲ್ಲಿ ಊರೂರು ಸುತ್ತಿಕೊಂಡು ಅಡ್ವೆಂಚರ್ ಆಟಗಳನ್ನು ಆಡಿಕೊಂಡು ಖುಷಿಯಾಗಿದ್ದಾರೆ. ಹೀಗಿರುವಾಗಲೇ ಸ್ಕೈ ಡೈವಿಂಗ್ ಮಾಡಬೇಕು ಅಂತ ಯಾರಿಗನ್ನಿಸಿತೋ ಏನೋ ವರ್ಜಿನೀಯಾ ಸ್ಕೈ ಡೈವಿಂಗ್ ಸೆಂಟರ್ ಗೆ ಹೋಗಿದ್ದಾರೆ.

ಆದರೆ ಅಲ್ಲಿ ಜಗ್ಗೇಶ್ ಸ್ಕೈ ಡೈವಿಂಗ್ ಮಾಡುವುದಕ್ಕೆ ಸುತಾರಾಂ ಒಪ್ಪಲಿಲ್ಲ. ಪರಿಮಳಾ ಜಗ್ಗೇಶ್ ಮಾತ್ರ ಉತ್ಸಾಹದಿಂದ ಸ್ಕೈ ಡೈವಿಂಗ್ ಮಾಡುವುದಕ್ಕೆ ನಿಂತರು. ಅವರಿಗೆ ಕಿರಿಯ ಮಗ ಯತಿರಾಜ್ ಜೊತೆಯಾದರು. ಇಬ್ಬರೂ ಹೆಲಿಕಾಪ್ಟರ್ ಹತ್ತಿ 1600 ಅಡಿ ಮೇಲಕ್ಕೆ ಹೋದರು. ಅಲ್ಲಿಂದ ಜಿಗಿದೇ ಬಿಟ್ಟರು. ಜಗ್ಗೇಶ್ ಮಾತ್ರ ಕೆಳಗಡೆ ನಿಂತು ನೋಡುತ್ತಿದ್ದರು.

ಕಡೆಗೊಂದು ಟ್ವೀಟ್ ಒಗಾಯಿಸಿಬಿಟ್ಟರು.

ಅಮ್ಮ, ಮಗ 16000 ಅಡಿಯಿಂದ ಜಿಗಿದರು. ಅದನ್ನು ನೋಡಿದ ನನ್ನ ನರ ನಾಡಿಗಳೆಲ್ಲಾ ಶೇಕ್ ಅಬ್ದುಲ್ಲಾ.

ಕೆಲಹೊತ್ತಲ್ಲಿ ಈ ಟ್ವೀಟ್ ವೈರಲ್ ಆಯಿತು. ಒಬ್ಬ ಕೇಳಿಯೇ ಬಿಟ್ಟ. ನೀವು ಯಾಕೆ ಹಾರಿಲ್ಲ, ಭಯಾನಾ ಅಂತ. ಅದಕ್ಕೆ ಜಗ್ಗೇಶು ನಾಲ್ಕು ಸ್ಮೈಲಿ ಹಾಕಿ ಸುಮ್ಮನಾಗಿಬಿಟ್ಟರು. ಹಾಗಾಗಿ ಜಗ್ಗೇಶ್ ಗಿಂತ ಪರಿಮಳಾ ಧೈರ್ಯವಂತೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತು.

ಉತ್ತರ ಜಗ್ಗೇಶ್ ಅವರೇ ಹೇಳಬೇಕಷ್ಟೇ.

-Ad-

Leave Your Comments