ಸ್ಯಾಂಡಲ್ ವುಡ್ ನಲ್ಲಿ ಭಯಾನಕ ದಂಧೆ ?

ಇದು ಸಾಮಾನ್ಯ ದಂಧೆಯಲ್ಲ. ಚಿತ್ರರಂಗವನ್ನೇ ಬೆಚ್ಚಿಬೀಳಿಸುವ ಮಹಾ ದಂಧೆ. ನೆಲಮಂಗಲದ ದಾಬಾಸ್ ಪೇಟೆಯ ಬಳಿ ಸಹನಟಿ ಜಯಮ್ಮ ನಕಲಿ ನೋಟು  ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದು ಇಂಥಾ ಖತರ್ನಾಕ್ ಕೆಲಸ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದ್ದಾಳೆ.

ದೇಶದಲ್ಲಿ ಹಳೆಯ ಐನೂರು, ಸಾವಿರ ರೂಪಾಯಿ ನೋಟು ನಿಷೇಧವಾದ ಮೇಲೆ ಕನ್ನಡ  ಚಿತ್ರರಂಗದಲ್ಲಿ ಜೊಳ್ಳುಗಳು ಕಡಿಮೆಯಾಗಿ ಎಲ್ಲವು ಸರಿ ಲೆಕ್ಕಕ್ಕೆ ಬರಬಹುದು ಅನ್ನೋ ಲೆಕ್ಕಾಚಾರವೇ ಬದಲಾಗಿದೆ. ಎರಡು ಸಾವಿರ ಮುಖಬೆಲೆಯ ನಕಲಿ ನೋಟನ್ನ ಚಲಾಯಿಸುವಾಗಲೇ ಜನರ ಕೈಗೆ ಸಿಕ್ಕಿಬಿದ್ದಿದ್ದಾಳೆ.ಆಕೆಯ ಬಳಿ ೨೪ ನಕಲಿ ನೋಟುಗಳಿದ್ದವು. ಸಾರ್ವಜನಿಕರೇ ಜಯಮ್ಮನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನನ್ನನ್ನ ನಿಮ್ಮ ಅಕ್ಕ ಅಂದ್ಕೊಂಡು ಬಿಟ್ ಬಿಡಿ ಅಂದವಳನ್ನ ಬಾರವ್ವ ಸರಿಯಾದ ಜಾಗ ಸೇರಿಸ್ತೀವಿ ಅಂತ ಸರಿಯಾಗಿ ಉಗಿದು ಸೇರಬೇಕಾದ ಜಾಗವನ್ನೇ ಸೇರಿಸಿದ್ದಾರೆ. ದಂಧೆಯ ಪಾಲುದಾರ ಆಟೋ ಡ್ರೈವರ್ ಗೋವಿಂದರಾಜು ಕೂಡ ಪೊಲೀಸರ ವಶವಾಗಿದ್ದಾನೆ.

ಕೆಲವು ನಟ, ನಟಿಯರು, ನಿರ್ಮಾಪಕರು ಇಂಥಾ ನೋಟು ಕೊಟ್ಟು ಚಲಾವಣೆ ಮಾಡಿಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಅವರ್ಯಾರು ಎನ್ನುವುದು ಬಯಲಾಗಬೇಕಿದೆ. ಜಯಮ್ಮನ ಫೋನ್ ನಲ್ಲಿ ಇದ್ದ ನಂಬರ್ ಗಳನ್ನ ತೆಗೆದು ದಂಧೆಯಲ್ಲಿ ಇರೋವ್ರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಪೊಲೀಸರು.

ವಿಚಾರಣೆಯ ವೇಳೆ ಸುದೀಪ್, ಉಪೇಂದ್ರ, ಸಾಧುಕೋಕಿಲ ಹೀಗೆ ಇನ್ನೂ ಹಲವಾರು ಹೆಸರಾಂತ ನಟರು  ಅಭಿನಯಿಸಿರುವ ಚಿತ್ರದಲ್ಲಿ  ಸಹನಟಿಯಾಗಿ  ಅಭಿನಯಿಸಿದ್ದ್ದೇನೆ. ನಾನು ಚಿತ್ರನಟಿ ಮುಕುಂದ ಮುರಾರಿ ಸಿನಿಮಾ ,ಅಂಜಲಿ ಧಾರಾವಾಹಿಯಲ್ಲಿ ನಟಿಸಿದ್ದೇನೆ ಎಂದಿದ್ದಾಳೆ. ಈ ದಂಧೆಯ ಹಿಂದೆ ಯಾರ್ಯಾರು ಅಡಗಿದ್ದಾರೆ ? ಚಿತ್ರರಂಗಕ್ಕೂ ಈಕೆಗೂ ನಿಜಕ್ಕೂ ಕನೆಕ್ಷನ್ ಇದೆಯಾ ? ಅಥವಾ ಸಮಯಕ್ಕೊಂದು ಸುಳ್ಳು ಸುತ್ತುತ್ತಿದ್ದಾಳಾ ಎನ್ನುವ ಮಾಹಿತಿ ಹೊರಬೀಳಬೇಕಿದೆ.

-Ad-

Leave Your Comments