“ಕಥೆ-ಚಿತ್ರಕಥೆ-ಸಂಭಾಷಣೆ” ಪ್ರೊಮೊಗೆ ಬಂದ್ರು ಪ್ರಕಾಶ್ ರೈ !!

ಕೆಲವರಿಗೆ ತಾವು ಕೇಳಿದ, ಓದಿದ ಅಥವಾ ತಮ್ಮೊಳಗಿನ ಕಥೆಯನ್ನ ಚಿತ್ರಕಥೆ ಮಾಡುವುದು ಹೇಗೆಂಬ ಚಿಂತೆಯಾದರೆ ಮತ್ತೆ ಕೆಲವರಿಗೆ ಸಂಭಾಷಣೆ ಬರೆಯುವುದು ಸವಾಲು. ಇಂಥವರಿಗಾಗಿ "ಕಥೆ-ಚಿತ್ರಕಥೆ-ಸಂಭಾಷಣೆ " ಎಂಬ ಪುಸ್ತಕ ಸಿದ್ಧವಾಗಿದೆ.

ಸಿನಿಮಾದ ಸೆಳೆತ ಯಾರನ್ನೂ ಬಿಟ್ಟಿಲ್ಲ. ನೋಡ್ತಾ ನೋಡ್ತಾ ನಾನು ಒಂದು ಸಿನಿಮಾ ಮಾಡಬೇಕು ಅನ್ನುವಂತ ಕನಸು  ಕಾಡಿ ಊರು ಬಿಟ್ಟು ಬೆಂಗಳೂರು , ಬಾಂಬೆ ,ಮದ್ರಾಸಿನ ಹಾದಿ ಹಿಡಿದವರೆಷ್ಟೋ !? ಚಿತ್ರ ಕಟ್ಟಲು ಮೊದಲು ಬೇಕಿರುವದು ಕಥೆಯಲ್ಲವೆ ? ಕೆಲವರಿಗೆ  ತಾವು ಕೇಳಿದ, ಓದಿದ ಅಥವಾ ತಮ್ಮೊಳಗಿನ ಕಥೆಯನ್ನ ಚಿತ್ರಕಥೆ ಮಾಡುವುದು ಹೇಗೆಂಬ ಚಿಂತೆಯಾದರೆ ಮತ್ತೆ ಕೆಲವರಿಗೆ ಸಂಭಾಷಣೆ ಬರೆಯುವುದು ಸವಾಲು. ಇಂಥವರಿಗಾಗಿ “ಕಥೆ-ಚಿತ್ರಕಥೆ-ಸಂಭಾಷಣೆ ” ಎಂಬ ಪುಸ್ತಕ ಸಿದ್ಧವಾಗಿದೆ.jogi-kathe

ಸುಲಭವಾಗಿ ಓದಿಸಿಕೊಳ್ಳುವ ಕಥೆ-ಚಿತ್ರಕಥೆ -ಸಂಭಾಷಣೆಯ ಒಳಹೋಗುವ ಮುನ್ನ ಮೇರು ನಟ ,ನಿರ್ದೇಶಕ ಪ್ರಕಾಶ್ ರೈ ಕೆಲ ಪ್ರಶ್ನೆಗಳಿಗೆ ತಮ್ಮ ಒಳನೋಟ ಬೀರಿದ್ದಾರೆ.   ಒಳ ಬನ್ನಿ  ಕನಸುಗಾರರೇ .. ನನಸು ಮಾಡಿಕೊಳ್ಳುವ ಕಲಿಕೆಯ ಕಡೆ ನೋಡಿ  ಎನ್ನುವಂತಿರುವ ಪ್ರೋಮೋದ ಅಕ್ಷರ ರೂಪವಿದು.

prakash-raj-12454

ಒಂದೊಳ್ಳೆ ಸಿನಿಮಾ ಮಾಡೋದು ಹ್ಯಾಗೆ ?

ಒಂದೇ ಕಥೆಯನ್ನ ಬೇರೆ ಬೇರೆ ಪ್ರಕಾರಗಳ ಮೂಲಕ ಹೇಳುತ್ತಾ ಒಂದು ಆಶಯ ಅನುಭವವಾಗುವಂತೆ ಮೂಡಿಸಬೇಕು. 

ಚಿತ್ರಕಥೆಯೇ ಸಿನಿಮಾದ ಜೀವಾಳ ಅಂತಾರೆ ಹೌದಾ ?

 ಒಂದು ಸಂದರ್ಶನದಲ್ಲಿ ಸಚಿನ್ ತೆಂಡೂಲ್ಕರ್ ನ ಕೇಳ್ತಾರೆ . 22 ಅಡಿಗಳ ಅಂತರದಿಂದ 140 ಕಿಲೋಮೀಟರ್ ವೇಗದಲ್ಲಿ ಬರುವ  ಚೆಂಡು ನಿಮ್ಮ ಬಳಿ  ಕ್ಷಣದಲ್ಲಿ ಬರುತ್ತೆ. ಅದನ್ನ ಕವರ್ ಡ್ರೈವ್ ಮಾಡ್ತೀರಾ ? ಸ್ಟ್ರೇಟ್ ಡ್ರೈವ್ ಮಾಡ್ತೀರಾ ? ಹುಕ್ ಮಾಡ್ತೀರಾ ? ಆ ಕ್ಷಣದಲ್ಲಿ ನಿರ್ಧಾರ ಹೇಗೆ ತೆಗೆದುಕೊಳ್ತೀರಾ ? ಆಗ ಸಚಿನ್ it is my  reflex ಅಂತಾರೆ.  .ಅಂದ್ರೆ ಅದೆಲ್ಲವನ್ನ ನಾನು ಪ್ರಾಕ್ಟೀಸ್ ಮಾಡಿರ್ತೀನಿ ಅದೆಲ್ಲ ನನ್ನೊಳಗೆ ರಿಫ್ಲೆಕ್ಸ್ ಆಗಿರತ್ತೆ. ಹಾಗಾಗಿ ಬಾಲ್ ಬರುವ ಕ್ಷಣ ಅದನ್ನ ಗಮನಿಸೋದಷ್ಟೇ ನನ್ನ ಕೆಲಸ . ಯಾವ ಸ್ಟ್ರೋಕ್ ಹೊಡೆಯುತ್ತೇನೆ ಅನ್ನುವುದು ಅಭ್ಯಾಸದಿಂದ ಬಂದ ಪ್ರತಿಕ್ರಿಯೆ ಅಷ್ಟೇ ಅಂದ್ರು . ಹಾಗೆ ಸಿನಿಮಾ ಮಾಡಬೇಕಾದ್ರೆ ಓದುಗನಾಗಿರಬೇಕು,ಜೀವನವನ್ನ ತೀವ್ರವಾಗಿ ನೋಡಿರಬೇಕು , ನೆನಪುಗಳಿರಬೇಕು , ಯಾವುದನ್ನಾದರೂ ನೋಡಿದಾಗ ಅದು ತೀವ್ರವಾಗಿ ತಟ್ಟಿರಬೇಕು. ಕಥೆ ನಿಮ್ಮನ್ನ ತಟ್ಟದಿದ್ದರೆ ಜನರನ್ನ ತಟ್ಟುವುದಿಲ್ಲ. 

ನಾನು ಚಿತ್ರಕಥೆ ಬರೆಯಬಹುದಾ ?

ಯಾವ ಕಲೆಯು ವ್ಯಾಪಾರವಲ್ಲ . ಅದೊಂದು ಅಭಿವ್ಯಕ್ತಿ.ಅದನ್ನ್ನ ಮನರಂಜನೆ ಮಾಡಿ ತೋರಿಸ್ತೀರಾ ? ನಗಿಸುವ ಸಿನಿಮಾ ಮಾಡ್ತೀರಾ ? ಕಥೆಯನ್ನೇ ಮುಖ್ಯವಾಗಿ ಹೇಳ್ತೀರಾ ? ನೀವೇನ್ ಮಾಡೋದಿಕ್ಕೆ ಹೊರಟಿದ್ದೀರಾ ಅನ್ನುವಂತ ಸ್ಪಷ್ಟ ಕಲ್ಪನೆ ನಿಮಗಿರಬೇಕು. 

ಹೀಗೆ ಇನ್ನು ಅನೇಕರ ಅನುಭವದ ಪಾಕ ತುಂಬಿದ ಜೋಗಿಯವರ “ಕಥೆ -ಚಿತ್ರಕಥೆ -ಸಂಭಾಷಣೆ” ಡಿಸೆಂಬರ್ ಎರಡಕ್ಕೆ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಕನಸುಗಾರರ ಕೈ ಸೇರಲು ಕಾಯುತ್ತಿರುತ್ತದೆ .

“ಕಥೆ-ಚಿತ್ರಕಥೆ -ಸಂಭಾಷಣೆ “ಪ್ರಕಾಶ್ ರೈ ಮಾತುಗಳಲ್ಲೇ ಕೇಳುವುದು ಒಂದು ಸುಖ ಅಂತೀರಾ ಅದಕ್ಕೂ ದಾರಿ ಇಲ್ಲೇ ಇದೆ ನೋಡಿ . ಪುಸ್ತಕ ಬಂದ ಮೇಲೆ ಓದಿ ಒಂದೊಳ್ಳೆ ಸಿನಿಮಾ ಮಾಡಿ.

 

-Ad-

Leave Your Comments