ಸಾವಿರಾರು ಜನರ ಮುಂದೆ ಕನ್ನಡದಲ್ಲಿ ಮಾತನಾಡಿದ ಸೂಪರ್ ಸ್ಟಾರ್ !!

ನನ್ನ ಅಮ್ಮ ಕನ್ನಡದವರು. ಅವರು ಹುಟ್ಟಿದ್ದು ಕುಂದಾಪುರದಲ್ಲಿ.
ಹೈದಾರಬಾದಿನಲ್ಲಿ ತೆಲುಗಿನ ಸೂಪರ್ ಸ್ಟಾರ್ ಒಬ್ಬ ನೆರೆದ ಸಾವಿರಾರು ಅಭಿಮಾನಿಗಳ ಎದುರಿಗೆ ಹೀಗೆ ಹೇಳಿದರೆ ಅಲ್ಲಿದ್ದ ಕನ್ನಡಿಗರಿಗೆ ಹೇಗನ್ನಿಸಬೇಡ?
ಎಸ್. ಎಲ್ಲರಿಗೂ ರೋಮಾಂಚನ. ಆನಂದವೋ ಆನಂದ. ಯಾಕೆಂದರೆ ಹಾಗೆ ಹೇಳಿದ್ದು ಬೇರಾರೂ ಅಲ್ಲ. ಕೋಟ್ಯಂತರ  ಜನರ ಆರಾಧ್ಯ ದೈವ ಜೂನಿಯರ್ ಎನ್ ಟಿ ಆರ್.
ಕನ್ನಡದಲ್ಲೇ ಮಾತು
ಅದು ಐಫಾ ಪ್ರಶಸ್ತಿ ವಿತರಣಾ ಸಮಾರಂಭ. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದರು. ಪ್ರಶಸ್ತಿ ಪ್ರದಾನ ಮಾಡಬೇಕಿದ್ದದ್ದು ರಕ್ಷಿತ್ ಶೆಟ್ಟಿಗೆ. ಪ್ರಶಸ್ತಿ ಕೊಡಲಿಕ್ಕೆ ನಿಂತಿದ್ದು ಜೂನಿಯರ್ ಎನ್ ಟಿ ಆರ್. ಇಬ್ಬರನ್ನೂ ನೋಡಿ ಎಲ್ಲರಿಗೂ ಪುಳಕ . ಆಗಲೇ ಅಕುಲ್ ಅವರು ರಕ್ಷಿತ್ ಶೆಟ್ಟಿಯವರ ಕರಾವಳಿ ನಂಟನ್ನು ಪ್ರಸ್ತಾಪಿಸಿದ್ದು. ತಕ್ಷಣ ಜೂನಿಯರ್ ಎನ್ ಟಿ ಆರ್ ತನ್ನ ಅಮ್ಮ ಕನ್ನಡದವರು. ಅವರ ಹುಟ್ಟೂರು ಕುಂದಾಪುರ. ನಾನೂ ಅಲ್ಲಿಗೆ ಭೇಟಿ ನೀಡಿದ್ದೇನೆ. ಹೀಗೆ ನನಗೆ ಕನ್ನಡ,ಕರ್ನಾಟಕ ಬೆಸೆದುಕೊಂಡಿದೆ ಅಂದ್ರು .
ಆಗ ನೋಡಬೇಕು. ಅಲ್ಲಿದ್ದ ಕನ್ನಡಿಗರಿಗೆ ಖುಷಿಯೋ ಖುಷಿ. ಯಾಕೆಂದರೆ ಅವರು  ನಮ್ಮ ಕನ್ನಡದಲ್ಲಿ ಮಾತನಾಡಿದ್ದರು. ಅಷ್ಟೇ ಅಲ್ಲ. ಚಕ್ರವ್ಯೂಹ  ಚಿತ್ರದ ಗೆಳೆಯ ಗೆಳೆಯ ಹಾಡು ಹೇಳಿ ಅಲ್ಲಿದ್ದವರನ್ನು ಭಾವಪರವಶವಗೊಳಿಸಿದರು.
ಹರಿಕೃಷ್ಣರ ಎರಡನೇ ಪತ್ನಿ
ಜೂನಿಯರ್ ಎನ್ ಟಿ ಆರ್ ಅಮ್ಮ ಶಾಲಿನಿಯವರ ಮೂಲ ಕುಂದಾಪುರ. ನಂತರ ಅವರು ಹೈದರಾಬಾದಿನಲ್ಲಿ ನೆಲೆಸಿದ್ದರು. ಅಂದಹಾಗೆ ಎನ್ ಟಿ ಆರ್ ಹಿರಿಯ ಮಗ  ಹರಿಕೃಷ್ಣರ ಎರಡನೇ ಪತ್ನಿ.
Click here to Reply or Forward
8.81 GB (58%) of 15 GB used
Last account activity: 2 minutes ago

Details

-Ad-

Leave Your Comments