ತೆಲುಗಿನ ‘ರಾಜಕುಮಾರ’ನಾಗುತ್ತಾರಾ ಜೂ.ಎನ್ಟಿಆರ್?

ಶತದಿನೋತ್ಸವ ಆಚರಿಸಿಕೊಂಡ ಸಂಭ್ರಮದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಈಗ ತೆಲುಗಿನಲ್ಲಿ ರಿಮೇಕ್ ಆಗಲಿದೆ. ತೆಲುಗಿನ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ಪುನೀತ್ ಪಾತ್ರವನ್ನು ನಿರ್ಬಹಿಸಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಿಂದ ಬಂದಿದೆ.

ರಾಜಕುಮಾರ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಲು ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೆ ಸದ್ಯ ಜೂನಿಯರ್ ಎನ್ಟಿಆರ್ ತೆಲುಗಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಾಗೂ ಮುಂದಿನ ಚಿತ್ರ ಜೈ ಲಾವಾ ಕುಶ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರದಲ್ಲಿ ಪುನೀತ್ ಪಾತ್ರವನ್ನು ನಿರ್ವಹಿಸುವ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ. ಎಲ್ಲವು ಅಂದುಕೊಂಡಂತಾದರೆ ಜೂನಿಯರ್ ಎನ್ಟಿಆರ್ ತೆಲುಗಿನ ರಾಜಕುಮಾರ ಆಗುವುದು ಪಕ್ಕಾ.

-Ad-

Leave Your Comments