ನಟಿ ಕಾಜೋಲ್ ಮಠಕ್ಕೆ ಬಂದಿದ್ದು ಯಾಕೆ..?

ಬಾಲಿವುಡ್ ನಟಿ ಕಾಜೋಲ್ ಇಂದು ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ. ತಾಯಿ ತನುಜ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದ ಕಾಜೋಲ್ ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು.

ಬಾಲ್ಯದಿಂದಲೂ ಸಿದ್ಧಾರೂಢರ ಭಕ್ತರಾಗಿರುವ ಕಾಜೋಲ್. ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದ ಕಾಜೋಲ್ ಕುಟುಂಬಸ್ಥರು ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ಬಳಿ ಧ್ಯಾನ ಮಾಡಿದರು.

-Ad-

Leave Your Comments