ಮೋದಿಗೆ ಹಾಕಿದ್ದ ನಮಸ್ಕಾರ ವಾಪಸ್ ಪಡೆದ ನಟ ಕಮಲ್ ಹಾಸನ್

ಖ್ಯಾತ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲ್ಯೂಟ್ ಹೊಡೆದು, ಅವರನ್ನು ಗೌರವಿಸಿದ್ರು. ಆದ್ರೆ ಇದೀಗ ಆ ಸೆಲ್ಯೂಟ್ ಹೊಡೆದಿದ್ದು ತಪ್ಪಾಗಿದೆ. ನನ್ನನ್ನು ಕ್ಷಮಿಸಿಬಿಡಿ. ಆ ಗೌರವವನ್ನು ವಾಪಸ್ ಪಡೆದುಕೊಳ್ತಿದ್ದೇನೆ ಅಂತ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಇಟ್ಟ ಹೆಜ್ಜೆ ತಪ್ಪಾಗಿದೆ ಅನ್ನೋದನ್ನ ಸೂಚಿಸಿದ್ದಾರೆ. ಉತ್ತಮ ಕೆಲಸ ಮಾಡಿದವರಿಗೆ ಗೌರವ ಸೂಚಿಸೋದು ಉತ್ತಮ ನಿರ್ಧಾರ. ಆದರೆ ಕೊಟ್ಟ ಗೌರವ ಸರಿಯಿಲ್ಲ ಅಂತ ಗೊತ್ತಾದ ಬಳಿಕ ವಾಪಸ್ ಪಡೆಯುತ್ತಿರೋದು ಮೊದಲು ಎನಿಸುತ್ತದೆ.

ಸೆಲ್ಯೂಟ್ ಹಾಕಿದ್ದು ಯಾಕೆ..? ವಾಪಸ್ ಯಾಕೆ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ವಿಭಿನ್ನ ಕಾರ್ಯಶೈಲಿಯಿಂದ ಗಮನಸೆಳೆಸಿದ್ದು ಸತ್ಯ. ಅದೇ ರೀತಿ ಪ್ರಧಾನಿ ಮೋದಿ 2016 ನವೆಂಬರ್ 8 ರ ರಾತ್ರಿ 8 ಗಂಟೆಗೆ ದಿಢೀರ್ ಭಾಷಣ ಶುರು ಮಾಡಿ 1,000 ಹಾಗೂ 500 ರುಪಾಯಿ ನೋಟು ನಿಷೇಧ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಈ ನಿರ್ಧಾರಕ್ಕೆ ಅವರು ಕೊಟ್ಟಿದ್ದ ಕಾರಣ ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನಾ ಚಟುವಟಿಕೆಗೆ ನಿಯಂತ್ರಣ.. ಆ ವೇಳೆ ಎಷ್ಟೊಂದು ಸಮಸ್ಯೆ ಆದರೂ ಜನರು ಸಹಿಸಿಕೊಂಡ್ರು, ಯಾಕಂದ್ರೆ ದೇಶಕ್ಕೆ ಒಳಿತಾಗುವ ನಿರ್ಧಾರವನ್ನು ನಾವು ಸ್ವಾಗತಿಸಬೇಕು ಅನ್ನೋದು ಆಗಿತ್ತು.. ಆದ್ರೆ ಅದರಿಂದ ಯಾವುದೇ ಲಾಭ ಆಗಲಿಲ್ಲ ಕೇವಲ 2,000 ರುಪಾಯಿ ನೋಟು ಬಂತು ಅಷ್ಟೆ ಅಂತ ಗೊತ್ತಾದ ಮೇಲೆ ಜನರೂ ಕೂಡ ಮುಗಿಬೀಳ್ತಿದ್ದಾರೆ. ಅದರ ಭಾಗವೇ ಕಮಲ್ ಹಾಸನ್ ನಿರ್ಧಾರ..

ಹೌದು ಸಾಮಾನ್ಯ ಜನರಂತೆಯೇ ಮೋದಿ‌ ನಿರ್ಧಾರ ಬೆಂಬಲಿಸಿ ಗೌರವಿಸಿದ್ದ ನಟ ಕಮಲ್ ಹಾಸನ್ ಇದೀಗ ಅದರ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೋಟ್ ಬ್ಯಾನ್ ನಿಂದ ಏನೂ ಆಗಿಲ್ಲ, ಅದೊಂದು ತಪ್ಪು ನಿರ್ಧಾವಾಗಿದೆ. ಹಾಗಾಗಿ ನಾನು ಕೊಟ್ಟ ಗೌರವ ವಾಪಸ್ ಪಡೆಯುತ್ತಿದ್ದೇನೆ. ಒಂದು ವೇಳೆ‌ ಪ್ರಧಾನಿ ನಮೋ ತಮ್ಮ ತಪ್ಪನ್ನು ಒಪ್ಪಿಕೊಂಡರೆ ನನ್ನ ಗೌರವ ಸದಾ ಅವರ ಜೊತೆ ಇರಲಿದೆ ಎಂದಿದ್ದಾರೆ.

ರಾಜಕೀಯ ದಾಳ ಉರುಳಿಸಿದ್ರಾ ಕಮಲ್..?

ನಟ ಕಮಲ್ ಹಾಸನ್ ಚಿತ್ರರಂಗದಲ್ಲಿ ಖ್ಯಾತ ನಾಮರಾಗಿದ್ದು ತಮಿಳುನಾಡಲ್ಲಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಅದರ ಭಾಗವಾಗಿ ರಾಜ್ಯ ಸರ್ಕಾರದ ಹಲವು ಕೆಲಸ ಕಾರ್ಯಗಳನ್ನು ಟೀಕಿಸುತ್ತಿದ್ದಾರೆ. ಹಾಗೆಯೇ ಪ್ರಧಾನಿ ಕೆಲಸದ ಬಗ್ಗೆ ಟಾಂಗ್ ಕೊಟ್ಟಿರಬಹುದು. ಅಥವಾ ಮತ್ತೋರ್ವ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ರಾಜಕಾರಣಕ್ಕೆ ಬರ‌್ತಿತಿದ್ದು, ಹೊಸ ಪಕ್ಷ ಸ್ಥಾಪನೆಯೋ ಇಲ್ಲಾ ಬಿಜೆಪಿ ಮೂಲಕವೋ ಅನ್ನೋದು ಬಹಿರಂಗವಾಗಿಲ್ಲ.. ಬಿಜೆಪಿ ಸೇರುವ ಸಾಧ್ಯತೆಗಳು ಇದೇ ಅನ್ನೋ ಮುನ್ಸೂಚನೆಯಲ್ಲಿ ಈ ರೀತಿ ಅಸ್ತ್ರ ಪ್ರಯೋಗ ಮಾಡಿದ್ದರೂ ಅಚ್ಚರಿಯಿಲ್ಲ..

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments