ರಜಿನಿಕಾಂತ್ ಗೆ ಪರೋಕ್ಷವಾಗಿ ಕಮಲ್ ಚಾಟಿ ಏಟು..!

ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕೆ ಆರಂಭವಾಗುವ ಲಕ್ಷಣಗಳು ಕಂಡು ಬರ್ತಿವೆ. ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ಅಭಿಮಾನಿಗಳ ಸಭೆ ಬಳಿಕ ಮಾತನಾಡಿದ ರಜಿನಿ ನಾನು ತಮಿಳಿಗ, ಸಂಪೂರ್ಣ ರಾಜಕೀಯ ವ್ಯವಸ್ಥೆ ಬದಲಿಸಬೇಕಿದೆ. ಯುದ್ಧಕ್ಕೆ ಸಿದ್ಧರಾಗಿ ಎನ್ನುವ ಮೂಲಕ ರಾಜಕೀಯ ಕಹಳೆ ಮೊಳಗಿಸಿದ್ದಾರೆ. ಆಗಸ್ಟ್ 15ರಂದು ರಜನಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದು, ಬಿಜೆಪಿ ಅವರ ಬೆನ್ನಿಗೆ ನಿಲ್ಲಲಿದೆ ಎನ್ನಲಾಗಿದೆ..

ಆದರೆ, ಶುಕ್ರವಾರ ತಮಿಳಿನಿನ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ಕೊಟ್ಟಿರುಬ ನಟ ಕಮಲ್ ಹಾಸನ್, ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಿಂಡಲ್ ಮಾಡಿದ್ದಾರೆ. ತಮಿಳಿನಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ನಟ ಕಮಲ್ ಹಾಸನ್, ಪರೋಕ್ಷವಾಗಿ ತಲೈವಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಇದು ಸೂಕ್ತ ಸಮಯವಲ್ಲ. ರಜನಿಕಾಂತ್ ಅಲ್ಲದೆ ಬೇರೆಯಾರಾದರೂ ವೈಚಾರಿಕ ಹಿನ್ನೆಲೆ ಇರುವ ವ್ಯಕ್ತಿಯಾದರೂ ಕೂಡ ಇಂಥಾ ನಿರ್ಧಾರ ಕೈಗೊಳ್ಳುವುದಿಲ್ಲ ಎಂದಿದ್ದಾರೆ. ಪತ್ರಕರ್ತರು ಮತ್ತೊಂದು ಪ್ರಶ್ನೆ ಎಸೆದಾಗ, ನಟ ಕಮಲ್ ಹಾಸನ್ ಗರಂ ಆಗಿದ್ದಾರೆ. ನಿಮ್ಮ ಸ್ನೇಹಿತರಿಗೆ ರಾಜಕೀಯ ಪ್ರವೇಶದ ಬಗ್ಗೆ ಸಲಹೆ ನೀಡ್ತೀರಾ ಎಂದಾಗ. ಇದು ಸೂಕ್ತ ವೇದಿಕೆಯಲ್ಲ ಎಂದು ಸಿಡುಕಿದ್ದಾರೆ.

-ರಂಗಸ್ವಾಮಿ

-Ad-

Leave Your Comments