ಮುಂಬೈ ಕನ್ನಿಕೆಯರ ಜೊತೆ ಚಂದನವನದ ‘ಕನಕ’.

‘ಕನಕ’ನ ಎಂಟ್ರಿ ಸಾಂಗ್ ಗೆ ಬರೋಬ್ಬರಿ 80 ಲಕ್ಷ ವೆಚ್ಚ.!

ಮಾಸ್ತಿಗುಡಿ ಸಿನಿಮಾದ ಮಾಸ್ತಿ ಜನರ ಮುಂದೆ ಬರಲು ತುದಿಗಾಲಲ್ಲಿ ನಿಂತಿದ್ದಾನೆ. ಅದರ ನಡುವೆ ಮಾಸ್ತಿ ಕನಕನಾಗಿ ಕನ್ನಡಿಗರ ಮುಂದೆ ಬರಲು ಸಜ್ಜಾಗಿದ್ದಾನೆ. ಆರ್. ಚಂದ್ರು ನಿರ್ಮಾಣದ ಚಿತ್ರದಲ್ಲಿ ಸ್ಯಾಂಡಲ್ ವುಡ್ ಕರಿ ಚಿರತೆ ಎಂಟ್ರಿಗೆ ಅದ್ದೂರಿ ಸೆಟ್ ಹಾಕಿ ಸಾಂಗ್ ಶೂಟಿಂಗ್ ಮಾಡಲಾಗಿದೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮುಂಬೈ ಹುಡ್ಗೀರು.. 100 ಲೋಕಲ್ ಬಾಯ್ಸ್..!

ಅದ್ಧೂರಿ ಸೆಟ್ ನಲ್ಲಿ ಧೂಳೆಬ್ಬಿಸಲು ಮುಂಬೈನಿಂದ 20 ಜನ ಡ್ಯಾನ್ಸರ್ಸ್ ಬಂದಿದ್ದರು. ಅವರ ಜೊತೆ ನಮ್ಮ 100 ಜನ ಪಡ್ಡೆಹೈಕ್ಳು ಸೇರಿ ಕುಣಿಯೋದಿಕ್ಕೆ ಶುರು ಮಾಡಿದ್ರು. ಇವರ ಸ್ಟೆಪ್ಸ್ ಗೆ 10 ವೆರೈಟಿ ಜೀಪುಗಳು ಶೂಟ್‌ಗೆ ಮೆರಗು ತಂದು ಕೊಟ್ವು. ಈ ಸಾಂಗ್ ನಲ್ಲಿ ದುನಿಯಾ ವಿಜಿ 4  ಡಿಫರೆಂಟ್ ಲುಕ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಅದ್ಧೂರಿ ಸಾಂಗ್ ಗಾಗಿ ಬಾಬು ಸೂಪರ್ ಆಗಿ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.

ಕವಿರಾಜ್ ಕ್ಯಾಚಿ ಸಾಹಿತ್ಯಕ್ಕೆ ನವೀನ ಟ್ಯೂನ್..!

ಈ ಸಾಂಗ್  ಕವಿರಾಜ್ ಬರೆದಿದ್ದು. ಕ್ಯಾಚಿ ಸಾಹಿತ್ಯಕ್ಕೆ ನವೀನ್ ಸಜ್ಜು ಟ್ಯೂನ್ ಕಂಪೋಸ್ ಮಾಡಿದ್ದಾರೆ. ಗಾಯಕನಾಗಿದ್ದ ನವೀನ್ ಸಜ್ಜು ಕನಕ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಪ್ರಮೋಷನ್ ಪಡೆದಿರುವುದು ಮತ್ತೊಂದು ವಿಶೇಷ. ಸತ್ಯಹೆಗ್ಡೆ ಕ್ಯಾಮೆರಾ ವರ್ಕ್ ನಲ್ಲಿ ಕೈಚಳಕ ತೋರಿಸಿದ್ದಾರೆ.

ಅಣ್ಣಾವ್ರ ಅಭಿಮಾನಿ ಈ ಕನಕ

ಕರಿ ಚಿರತೆ ವಿಜಿ ಈ ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಶೇಕಡ 50 ರಷ್ಟು ಚಿತ್ರೀಕರಣ ಮುಕ್ತಾಯ ಆಗಿದ್ದು ಇನ್ನರ್ಧ ಸಿನಿಮಾ ಚಿತ್ರೀಕರಣ ಬಾಕಿ ಇದೆ. ಈ ವರ್ಷಾಂತ್ಯಕ್ಕೆ ತೆರೆ ಮೇಲೆ ಕಾಣಿಸಿಕೊಳ್ಳೋದು ಕನಕದಷ್ಟೇ ಗ್ಯಾರಂಟಿ..

-Ad-

Leave Your Comments