ಸಂಬಳ ಕೊಡದೆ ಅವಾಜ್ ಹಾಕಿದ ಸ್ಟಾರ್ ಕಥೆ.

ಕನ್ನಡದ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಈ  ಸ್ಯಾಂಡಲ್‌ವುಡ್ ನಟ ಮಾಡಬಾರದ ಕೆಲಸ ಮಾಡಿದ್ದಾರೆ.. ಜೊತೆಗೆ ಧಮ್ಕಿ ಕೂಡ ಹಾಕಿದ್ದಾರೆ. ನೋಡಲು ಸಭ್ಯರಂತೆ ಕಾಣಿಸುವ ಈ ನಟ, ತನ್ನ ಬಳಿ ದುಡಿಸಿಕೊಂಡ ನೌಕರರಿಗೆ ಸಂಬಳ ಕೊಡದೆ ಅದೇನು ಮಾಡ್ಕೊಳ್ತೀಯಾ ಮಾಡ್ಕೊ ಅಂತ ದರ್ಪ ಮೆರೆದಿದ್ದಾರೆ.  ಧಮ್ಕಿ ಹಾಕಿದ ನಟನ ಹೆಸರಲ್ಲಿ ಸ್ನೇಹಜೀವಿ ಅನ್ನೋ ಅರ್ಥ ಬರುವ ಹಾಗೆ ಹೆಸರಿಟ್ಟುಕೊಂಡಿದ್ದು ನಿಜ  ಜೀವನದಲ್ಲಿ ಭಂಡಜೀವಿ ಅನ್ನೋದನ್ನು ಪ್ರೂವ್ ಮಾಡಿದ್ದಾರೆ..
ಒಂದೇ ಲಕ್ಷಕ್ಕೆ ಮರ್ಯಾದೆ ಬಿಟ್ಟ ನಟನ್ಯಾರು..?
ಸಿನಿಮಾ ನಟ ನಟಿಯರು ದೊಡ್ಡ ಮಟ್ಟದ ಹಣಕಾಸು ವ್ಯವಹಾರ ನಡೆಸಿ ಕೈ ಸುಟ್ಟುಕೊಂಡಾಗ ಅಸಹಾಯಕತೆ ವ್ಯಕ್ತಪಡಿಸಿ ಏನು ಬೇಕಾದ್ರು ಮಾಡಿಕೋ ಅನ್ನೋದು ಸಾಮಾನ್ಯ.. ಆದ್ರೆ ಈ ನಟ ಸಿಬ್ಬಂದಿಗೆ ಕೊಡಬೇಕಿರೋದು ಪುಡಿಗಾಸು.. ಅಂದ್ರೆ ಕೇವಲ ಒಂದು ಲಕ್ಷದ ಮೂವತ್ತು ಸಾವಿರ ಮಾತ್ರ.. ಇಷ್ಟು ಹಣವನ್ನು ಕೊಟ್ಟು ಸಮಾಜದಲ್ಲಿ ಗೌರವದಿಂದ ಬದುಕಬೇಕಿದ್ದ ನಟ ಅದೇನು ಮಾಡ್ಕೊಳ್ತೀಯಾ ಮಾಡ್ಕೊ ಅಂದಿರೋದು ಮಿತ್ರನ ವರ್ಚಸ್ಸಿಗೆ ಧಕ್ಕೆ ತರೋದಂತು ಪಕ್ಕಾ.
ಸೀಸನ್ 3 ರಲ್ಲಿ ಬಿಗ್ ಬಾಸ್ ಸ್ಪರ್ಧಿ..
ನಟ ಮಿತ್ರ ಕಳೆದ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟಿ ಗೌತಮಿ ಗೌಡ ಜೊತೆ ಮಧ್ಯಭಾಗದಲ್ಲಿ  ಎಂಟ್ರಿಕೊಟ್ಟಿದ್ರು. ಸಿಲ್ಲಿಲಲ್ಲಿ ಜ್ಞಾನೇಶ ಅಜ್ಞಾನದ ಕೆಲಸ ಮಾಡಿಕೊಂಡಿದ್ದಾರೆ. ಮಿತ್ರ ಹಾಲಿಡೇಸ್‌ನಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಮಿತ್ರ ಹಾಲಿಡೇಸ್‌ನಲ್ಲಿ ಹಲವು ಗೇಮ್ಸ್, ಅಡ್ವೆಂಚರ್ ಚಟುವಟಿಕೆಗಳಿದ್ದು, ಅಡ್ವೆಂಚರ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಯೋಗೇಶ್ ಎಂಬುವರಿಗೆ ಸಂಬಳ ಕೊಟ್ಟಿಲ್ಲ. ಯೋಗೇಶ್ ಅಂಡ್ ಟೀಂ ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡುವಂತೆ ಮಿತ್ರ ಅಲಿಯಾಸ್ ಶೀನು ಜಾರ್ಜ್ ಬಳಿ ಕೇಳಿದ್ರೆ, ಮಿತ್ರನ ಹೊಸ ‘ರಾಗಾ’ ಶುರುವಾಗಿದೆ. ಸಂಬಳದ ಕೊಡದ ಬಗ್ಗೆ ಮಾದ್ಯಮದವರ ಬಳಿ  ಹೇಳ್ತೀನಿ ಅಂತಾ ಯೋಗೇಶ್ ಹೇಳಿದ್ದೇ ತಡ ಪಿತ್ತ ನೆತ್ತಿಗೇರಿಸಿಕೊಂಡು, ಅದೇನ್ ಮಾಡ್ಕೊತಿಯಾ ಮಾಡ್ಕೊ ಗುರು ಎಂದು ಅವಾಜ್ ಹಾಲಿದ್ದಾರೆ. ಇದೀಗ ಯೋಗೇಶ್ ನ್ಯಾಯಕ್ಕಾಗಿ ಕನ್ನಡ ಸಂಘಟನೆಗಳ ಒಕ್ಕೂಟದ ಸಹಾಯ ಕೇಳುತ್ತಿದ್ದಾರೆ. ಹಲವು ರೆಸಾರ್ಟ್‌ಗಳಲ್ಲಿ ಟೈ ಅಪ್ ಮಾಡಿಕೊಂಡಿರುವ ಮಿತ್ರ ಹಾಲಿಡೇಸ್ ನಲ್ಲಿ ಮಿತ್ರನಿಗೆ ಲಾಸ್ ಆಗಿದ್ಯಾ ಕೇವಲ ಒಂದು‌ಲಕ್ಷಕ್ಕೆ ಇಷ್ಟೆಲ್ಲಾ ಫಜೀತಿ ಬೇಕಿತ್ತಾ ಎನ್ನುತ್ತಿದೆ ಗಾಂಧಿನಗರ.
ಜ್ಯೋತಿ ಗೌಡ ನಾಗಮಂಗಲ
-Ad-

Leave Your Comments