ಬ್ರಿಟನ್ ಪಾರ್ಲಿಮೆಂಟ್ ಗೌರವಕ್ಕೆ ಪಾತ್ರನಾದ ಪ್ರಪ್ರಥಮ ಕನ್ನಡಿಗ ದರ್ಶನ್ !!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನೇಕ ಸವಾಲುಗಳನ್ನು ಎದುರಿಸಿ ಬೆಳೆದ ನಾಯಕ ನಟ. ಅಭಿಮಾನಿಗಳ ನೆಚ್ಚಿನ ದಚ್ಚು . ಕನ್ನಡಿಗರು ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಹೆಮ್ಮೆ ಪಡುವಂಥ ಗೌರವಕ್ಕೆ ಪಾತ್ರರಾಗಿದ್ದಾರೆ . ಅದುವೇ ಬ್ರಿಟನ್ ಪಾರ್ಲಿಮೆಂಟ್ ಪ್ರತೀ ವರುಷ  ಕಲಾವಿದರಿಗೆ ಕೊಡಮಾಡುವ ಗ್ಲೋಬಲ್ ಡೈವರ್ಸಿಟಿ ಪುರಸ್ಕಾರ! ಇಷ್ಟು ಕಾಲ ಕನ್ನಡದ ಕಡೆಗೆ ಕಣ್ಣೆತ್ತಿಯೂ ನೋಡದ ಜನರನ್ನ ದಚ್ಚು ಸೆಳೆದಿದ್ದಾರೆ .

 

ಬಾಲಿವುಡ್ ನ ಅಮಿತಾಬ್ ,ಐಶ್ವರ್ಯ ರೈ ,ಸಲ್ಮಾನ್ ಖಾನ್ ,ಶಾರುಖ್ ಖಾನ್ ಗೆ ಮಾತ್ರ ಒಲಿದಿದ್ದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಇದೀಗ ಕನ್ನಡದ ಚಾಲೆಂಜಿಂಗ್ ಸ್ಟಾರ್ ಗೆ ಒಲಿದು ಬಂದಿದೆ.

ದಕ್ಷಿಣ ಭಾರತದಲ್ಲಿ ಎಂಥೆಂಥ ಘಟಾನುಘಟಿಗಳಿದ್ದಾರೆ ಎಂಬುದು ಎಲ್ಲರಿಗು ತಿಳಿದಿರುವ ವಿಚಾರ . ಅವರೆಲ್ಲರನ್ನು ಹಿಮ್ಮೆಟ್ಟಿಸಿ ಕನ್ನಡದ ಕುವರ ದರ್ಶನ್ ಬೆಳಗಿರುವುದು ಕನ್ನಡದ ಸೌಭಾಗ್ಯ.

ಕನ್ನಡದ  ಅನೇಕ ಪ್ರತಿಭಾವಂತ ನಟರು ಬೇರೆ ಭಾಷೆಯಲ್ಲಿ ನಟಿಸಿ ಹೆಸರು ಮಾಡಿದ್ದಾರೆ .ಆದ್ರೆ ದರ್ಶನ್ ಮಾತ್ರ ಸಿರಿಗನ್ನಡ ಮಂದಿಯ ಅಭಿಮಾನವನ್ನೇ ನೆಚ್ಚಿ ಇಲ್ಲಿಯವರೆಗೂ ಕನ್ನಡನಾಡಿಗೇ ಅಂಟಿಕೊಂಡಿದ್ದಾರೆ. ಅದರ ಫಲವೋ ಎಂಬಂತೆ ತನ್ನ ಸಿನಿಮಾಗಳ ಮೂಲಕ  ಕಲೆ , ಸಂಸ್ಕೃತಿಯನ್ನು ಪಸರಿಸಿದ ಕೀರ್ತಿ ದಚ್ಚುವನ್ನು ಅರಸಿ ಬಂದಿದೆ.

ಇತ್ತೀಚಿಗಷ್ಟೇ ತೆರೆ ಕಂಡ ತಾರಕ್ ಚಿತ್ರದಲ್ಲಿ ತನ್ನ ಹಳೆಯ ಇಮೇಜ್ ಕಳಚಿ ಹೊಸ ರೀತಿಯ ಅರಚಾಟಗಳಿಲ್ಲದ ಪಾತ್ರಗಳಿಗೆ ತೆರೆದುಕೊಳ್ಳುವ ಪ್ರಯತ್ನ ದರ್ಶನ್ ರಿಂದ ರಿಂದ ಕಂಡಿತ್ತು . ಈ ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಸದ್ಯ ಬಿಗ್ ಬಜೆಟ್ ಚಿತ್ರ ಬಹುನೀರೀಕ್ಷಿತ ಕುರುಕ್ಷೇತ್ರದಲ್ಲಿ ಬ್ಯುಸಿ  ಆಗಿರುವ ದರ್ಶನ್ ರಾಮೋಜಿ ಸಿಟಿ ಹೈದರಾಬಾದ್ ನಿಂದ ನೇರವಾಗಿ ಅಕ್ಟೊಬರ್ ಹದಿನೆಂಟರಂದು  ಬ್ರಿಟನ್ ಗೆ ಹಾರಲಿದ್ದಾರೆ .

ಅಕ್ಟೊಬರ್ ಹತ್ತೊಂಬತ್ತು ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ದರ್ಶನ್  ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಸ್ವೀಕರಿಸಲಿದ್ದಾರೆ . ಇದು ಕನ್ನಡ ಚಿತ್ರರಂಗದಲ್ಲಿ  ಸುಮಾರು ಎರಡು ದಶಕಗಳ ದೃತಿಗೆಡದ ದರ್ಶನ್ ಪಯಣಕ್ಕೆ  ಸಿಕ್ಕ ಬಹುದೊಡ್ಡ ಫಲಶ್ರುತಿ ಎನ್ನಬಹುದೇನೋ .

ciniAdda.com ಬಳಗದ ಶುಭಾಶಯಗಳು ದರ್ಶನ್ !!

 

-Ad-

Leave Your Comments