ಹಿರಿಯ ನಟ ದೊಡ್ಡಣ್ಣ ಅಸ್ವಸ್ಥ

ತನ್ನ ಗಟ್ಟಿ ಧ್ವನಿ , ದೊಡ್ಡ ದೇಹ, ಸಹಜ ಅಭಿನಯದಿಂದ ಮನೆಮಾತಾಗಿರುವ ಹಿರಿಯ ನಟ ದೊಡ್ಡಣ್ಣ ಚಿತ್ರೀಕರಣದ ಸಮಯದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ .

ಅಂಥಾದ್ದು ಏನಾಯಿತು ?

ರಾಕ್ ಲೈನ್ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸಲು ವಿಜಯಪುರಕ್ಕೆ ಬಂದಿದ್ದ ದೊಡ್ಡಣ್ಣ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಬಳಲಿ ಬಿದ್ದಿದ್ದಾರೆ. ಚಿತ್ರತಂಡ ಅವರನ್ನು ಹತ್ತಿರದ ಆಯುಷ್ ಆಸ್ಪತ್ರೆಗೆ ದಾಖಲಿಸಿದೆ. ಚಿಕಿತ್ಸೆ ನೀಡುತ್ತಿರುವ ಡಾ.ನಿತಿನ್ ಅಗರ್ವಾಲ್ ಇದು ಡಿಹೈಡ್ರೇಶನ್ ಸಮಸ್ಯೆ, ಬಗೆಹರಿಸುತ್ತಿದ್ದೇವೆ. ದೊಡ್ಡಣ್ಣ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.

ಕುಟುಂಬದ ಒತ್ತಾಯ 

ದೊಡ್ಡಣ್ಣ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿ ಎನ್ನುವುದು ಕುಟುಂಬಸ್ಥರ ಮನವಿ. ಅದರಂತೆ ಆಂಬ್ಯುಲೆನ್ಸ್‌ ಮೂಲಕ ಶಿಫ್ಟ್ ಮಾಡುತ್ತಿದ್ದೇವೆ ಎಂದಿದ್ದಾರೆ ಡಾ ಅಗರ್ವಾಲ್ .

ದೊಡ್ಡಣ್ಣ ಬೇಗನೆ ಗುಣಮುಖರಾಗಿ ಬರಲಿ ಎನ್ನುವುದು ciniadda.com ಬಳಗದ ಹಾರೈಕೆ

 

-Ad-

Leave Your Comments