ಚೆಲುವಿನ ಚಿತ್ತಾರದ ಬಾಲನಟ ರಾಕೇಶ್ ಸಾವಿಗೆ ಕಾರಣವೇನು ?

ಹಿರಿಯ ನಟಿ ಆಶಾರಾಣಿ ಪುತ್ರ , ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಚಿತ್ರದಲ್ಲಿ ಬುಲ್ಲಿ ಆಗಿ ಪ್ರೇಕ್ಷಕರನ್ನು ಮುಟ್ಟಿದ್ದ ಬಾಲನಟ ರಾಕೇಶ್ ಇನ್ನಿಲ್ಲ.  ಬೆಂಗಳೂರಿನ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಂದು ಸಂಜೆ ೭.೩೦ಕ್ಕೆ ವಿಧಿವಶರಾಗಿದ್ದಾರೆ .
ಪಪ್ಪುಸಿ ಎಂಬ ಹೆಸರಿನಿಂದ ಖ್ಯಾತಿ ಪಡೆದಿದ್ದ ನಟ ನಟಿಸಿದ ಸಿನಿಮಾಗಳು
ಎಸ್ . ನಾರಾಯಣ್, ಗೋಲ್ಡನ್ ಸ್ಟಾರ್ ಗಣೇಶ್ – ( ಚೆಲಿವಿನ ಚಿತ್ತಾರ )  ಶಿವಣ್ಣ ( ಭಜರಂಗಿ , ಬಂಧು – ಬಳಗ ) ಅಪ್ಪು ಸರ್ ( ಹುಡುಗರು ) ದರ್ಶನ್ ( ಅರ್ಜುನ್ , ಅಭಯ್ , ಬಾಸ್ ) , ಯಶ್ ( ಮೊದಲಾ ಸಲ ) ,  ದುನಿಯಾ ವಿಜಯ್ – ( ಚಂಡ , ಅವ್ವ , ಜಾನಿ ಮೇರಾ ನಾಮ್ ) …. ( ಅಕ್ಕ – ತಂಗಿ , ಪ್ರೇಮ್ ಕಹಾನಿ , ಕೃಷ್ಣನ್ ಲವ್ ಸ್ಟೋರಿ , ಜಿಂಕೆ ಮರಿ , ದೂದ್ ಸಾಗರ್ , ) ಮುಂತಾದ 45 ಸಿನೆಮಾಗಳಿಗೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯ …..
ಸದ್ಯ ಧೂಮಪಾನ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು.
ಏನಾಗಿತ್ತು ?
ಗ್ಯಾಂಗ್ ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಆಪರೇಷನ್ ಮಾಡಲಾಗಿತ್ತು. ಅದಾದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೊನೆಗೂ ಬೆಂಬಿಡದೆ ಕಾಡಿದ ಲಿವರ್ ಕ್ಯಾನ್ಸರ್   ರಾಕೇಶ್ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.
ಅಭಿಮಾನಿಗಳ ಗಮನಕ್ಕೆ 
ರಾಕೇಶ್ ವಿಳಾಸ ಇಂತಿದೆ 
# 95 , 7ನೇ ಅಡ್ಡ ರಸ್ತೆ , ಶಿವಾನಂದನಗರ ,   ಮೂಡಲಪಾಳ್ಯ , ನಾಗರಭಾವಿ ಮುಖ್ಯರಸ್ತೆ , ಬೆಂ – 72
-Ad-

Leave Your Comments