ಶ್ರೀ ಮುರಳಿ ಫ್ರೀ ಟೈಮ್ ಹೇಗೆ ಕಳೆಯುತ್ತಾರೆ ?

ಶ್ರೀಮುರಳಿ ಒಳ್ಳೆ ಗುಣ ಏನು ಗೊತ್ತಾ?
ಶ್ರೀಮುರಳಿ ಒಳ್ಳೆಯ ನಟ. ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ಫ್ಯಾಮಿಲಿ ಮ್ಯಾನ್. ಸ್ವಲ್ಪ ಪುರ್ಸೊತ್ತು ಸಿಕ್ಕಿದರೂ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ. ಅದಕ್ಕೆ ಸಾಕ್ಷಿ ಇಲ್ಲೊಂದಿಷ್ಟು ಫೋಟೋಗಳಿವೆ.
ಅವರಿಗೆ ಮಗಳು ಅತೀವ ಅಂದ್ರೆ ಮುದ್ದು. ಶ್ರೀಮುರಳಿಯನ್ನು ಸುಮ್ಮನೆ ಕೂರಲು ಅವಳು ಬಿಡಲ್ಲವಂತೆ. ಹಾಗಂತ ಶ್ರೀಮುರಳಿಯವರೇ ಹೇಳಿಕೊಳ್ಳುತ್ತಾರೆ.
ಸಾಮಾನ್ಯವಾಗಿ ಹೀರೋಗಳು ಶೂಟಿಂಗಲ್ಲಿ ನಿರತರಾಗಿರುವುದೇ ಹೆಚ್ಚು. ಕುಟುಂಬದವರು ತಮಗೆ ಸಮಯ ಕೊಡಲ್ಲ ಅಂತ ಬೇಜಾರು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಶ್ರೀಮುರಳಿ ಮಾತ್ರ ಎಲ್ಲರಿಗಿಂತ ಭಿನ್ನ. ತಮ್ಮ ಜಾಸ್ತಿ ಸಮಯವನ್ನು ತಮ್ಮ ಕುಟುಂಬಕ್ಕೆ ನೀಡುತ್ತಾರೆ. ಅಷ್ಟೇ ಅಲ್ಲ ತಾವು ಅನುಭವಿಸಿದ ಖುಷಿಯ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಅಂದಹಾಗೆ ಶ್ರೀಮುರಳಿಯವರ ಪತ್ನಿಯ ಹೆಸರು ವಿದ್ಯಾ.
ಉಗ್ರಂ ಮೂಲಕ ತನ್ನನ್ನು ತಾನು ರಿಲಾಂಚ್ ಮಾಡಿಕೊಂಡ ಮುರಳಿ ಆಮೇಲೆ ರಥಾವರ ಸಿನಿಮಾ ಮಾಡಿದರು. ಅನಂತರ ಈಗ ಮಫ್ತಿ ಸಿನಿಮಾ ಶೂಟಿಂಗಲ್ಲಿ ನಿರತರಾಗಿದ್ದಾರೆ
-Ad-

Leave Your Comments