“ರಾಗ ” ಸಿನಿಮಾಗೆ ಸಿಕ್ತು ನಾಲ್ಕು ಪ್ರದರ್ಶನ! ಇದು ನಿಮ್ಮದೇ ಗೆಲುವು!!ಸ್ವಾಭಿಮಾನಿ ಕನ್ನಡಿಗರೇ ಕನ್ನಡ ಸಿನಿಮಾ ಗೆಲ್ಲಿಸಿ

ಕನ್ನಡದ ಮಟ್ಟಿಗೆ ವಿಶಿಷ್ಟ ಸಿನಿಮಾ “ರಾಗ” .ಎಲ್ಲರೂ ನೋಡಬಹುದಾದ ನೋಡಲೇಬೇಕಾದ ಚಿತ್ರ ಅಂತ ನಾವು ಸಿನಿಮಾ ನೋಡಿ ನಿಮಗೆಲ್ಲ ಹೇಳಿದ್ದೆವು. ಇದುವರೆಗೂ ನಾವು ನೋಡಿ ಹೇಳಿದ ಎಲ್ಲ ಸಿನಿಮಾಗಳನ್ನು ನೀವೂ ಕೂಡ ಬೆಂಬಲಿಸಿದ್ದೀರಿ. ನಿಮ್ಮ ನಂಬಿಕೆಗೆ ciniadda.com ಋಣಿ.

ಪರಭಾಷೆಯ ಅದ್ದೂರಿ ಚಿತ್ರ ಬಾಹುಬಲಿಯ ಹೊಡೆತಕ್ಕೆ ನಮ್ಮ ಕನ್ನಡ ಪ್ರತಿಭೆಗಳು ಶ್ರದ್ಧೆಯಿಂದ ಕಟ್ಟಿದ ರಾಗ ಚಿತ್ರ ಅಳಿಸಿ ಹೋಗಬಾರದೆಂಬ ಕರ್ತವ್ಯ ಪ್ರಜ್ಞೆಯಿಂದ  ನಿಮ್ಮೆಲ್ಲರಲ್ಲಿ ಮನವಿಯನ್ನೂ ಮಾಡಿದ್ದೆವು. ನೀವೂ ಕೂಡ ನಮ್ಮೊಡನೆ ಕೈಜೋಡಿಸಿದ್ದೀರಿ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಜೊತೆಯಲ್ಲೂ ಮಾತನಾಡಿದ್ದೆವು. ಸಿನಿಮಾ ರಂಗದ ಪ್ರಮುಖರು ರಾಗ ಚಿತ್ರಕ್ಕೆ ನೆಲೆ ಕಲ್ಪಿಸಿಕೊಡಲು ಪ್ರಯತ್ನಿಸಿದ್ದರು. ಎಲ್ಲರ ಪ್ರಯತ್ನದ ಫಲವಾಗಿ ಕೊನೆಗೂ   ನಾಲ್ಕು  ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನಕ್ಕೆ ಅವಕಾಶ ದೊರೆತಿದೆ.

ಎಲ್ಲೆಲ್ಲಿ ?

ಗೋಪಾಲನ್ ಸಿನಿಮಾಸ್: ಆರ್ಕೆಡ್ ಮಾಲ್, ಮೈಸೂರು ರೋಡ್  ಸಮಯ : 4:15 ಸಂಜೆ 

ಪಿವಿಆರ್ :ಓರಿಯಾನ್ ,ರಾಜಾಜಿನಗರ ಸಮಯ :10:00 ರಾತ್ರಿ 

ಗೋಪಾಲನ್ ಮಿನಿಪ್ಲೆಕ್ಸ್ : ಸಿಗ್ನೇಚರ್ ಮಾಲ್ ,ಓಲ್ಡ್ ಮದ್ರಾಸ್  ರೋಡ್  

ಕಾರ್ನಿವಾಲ್:ರಾಕ್ ಲೈನ್ ಮಾಲ್ ಸಮಯ :1:10 ಮಧ್ಯಾಹ್ನ 

ಕನ್ನಡಿಗರು ಕೈ ಹಿಡಿಯಬೇಕಾದ ಸಿನಿಮಾವಿದು. ನಿಮಗೆ ಗೊತ್ತಿರಲಿ ನೀವು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡದೆ ಇದ್ದರೆ “ರಾಗ” ಕೇಳುವವರಿಲ್ಲದೆ ಮತ್ತೆ ನೆಲೆ ಕಳೆದುಕೊಳ್ಳುತ್ತದೆ. ಸ್ವಾಭಿಮಾನಿ ಕನ್ನಡಿಗರು ರಾಗ ಎಂಬ ಸದಭಿರುಚಿಯ ಸಿನಿಮಾ ನೋಡಿ ಒಳ್ಳೆಯ ಕನ್ನಡ ಚಿತ್ರಗಳನ್ನು ಉಳಿಸಿ .ಕನ್ನಡಿಗರನ್ನು ಬೆಳೆಸಿ 

-Ad-

Leave Your Comments