ಈ ವಾರ ತೆರೆಗೆ `ಜಿಲೇಬಿ’

ಈ ವಾರ ಶಿವ ಶಂಕರ್ ಫಿಲ್ಮ್ ಫ್ಯಾಕ್ಟರಿ ಅವರ `ಜಿಲೇಬಿ’ ಸವಿಯಲು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.. ಲಕ್ಕಿ ಶಂಕರ್ ಅವರ ಹಿಂದಿನ ಎರಡು ಸಿನಿಮಗಳು `90 ಹಾಗೂ ದೇವರಾಣೆ ಮನರಂಜನೆ ಜೊತೆಗೆ ಸಮಾಜಮುಖಿಯಾಗಿಯೂ ನೀಡಿದ್ದರು. ಈ `ಜಿಲೇಬಿ’ ಸಿನಿಮಾದಲ್ಲೂ ಸಹ ಮನರಂಜನೆಯ ಜೊತೆಗೆ ಮನಸ್ಸಿಗೆ ನಾಟುವ ವಿಷಯವನ್ನು ಅಡಕ ಮಾಡಿದ್ದಾರೆ.
`ಜಿಲೇಬಿ’… ಹಾಟ್ ಅಂಡ್ ಸ್ವೀಟ್ ಪೂಜಾ ಗಾಂಧಿ ಮತ್ತು ಯಶಸ್ ಸೂರ್ಯ,ನಾಗೇಂದ್ರ ಹಾಗೂ ವಿಜಯ್ ಚೆಂಡುರ್ ಸೇರಿದಂತೆ ಮೂವರು ಯುವಕರ ಸುತ್ತ ಜರುಗುವ ಕಥೆ. ಸುಧಾಕರ್ ಅವರ ಹಾಸ್ಯ ಸಹ ಈ ಚಿತ್ರಕ್ಕೆ ಸೇರಿಕೊಂಡಿದೆ.
ಲಕ್ಕಿ ಶಂಕರ್ ಅವರ ಜೊತೆ ಶಿವ ಕಬ್ಬಿನ್ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಎಂ ಆರ್ ಸೀನು ಛಾಯಾಗ್ರಾಹಣ, ಜೇಮ್ಸ್ ಆರ್ಕಿಟೆಕ್ಟ್ ಸಂಗೀತ ಚಿತ್ರಕ್ಕಿದೆ. ಮಾಲೂರ್ ಶ್ರೀನಿವಾಸ್ ನೃತ್ಯ, ರವಿ ಅವರ ಸಂಕಲನ ಜಿಲೇಬಿಗಿದೆ.

-Ad-

Leave Your Comments