ನೀರ್ದೋಸೆ ಕಾಂಟ್ರವರ್ಸಿ ! ಶಿವಣ್ಣ V/s ಹು.ವೆಂಕಟ್

ತಿಥಿ, ಯೂ ಟರ್ನ್, ಗೋಧಿ... ಹೀಗೆ ಬಣ್ಣ ಬಣ್ಣದ ಚಿತ್ರಗಳು ಒಂದು ಕಡೆಯಾದರೆ, ದಂಡು ಪಾಳ್ಯ, ಅಪೂರ್ವ, ಲವ್ ಯು ಆಲಿಯಾ... ಹೀಗೆ ಸದ್ದು ಗದ್ದಲು ಮಾಡುವ ಚಿತ್ರಗಳು ಮತ್ತೊಂದು ಕಡೆ. ಒಟ್ಟಿನಲ್ಲಿ ಇದು ಕನ್ನಡ ಚಿತ್ರರಂಗದ ವೈವಿಧ್ಯತೆಯ ಪರ್ವ. ಕನ್ನಡ ಚಿತ್ರಗಳು ಇಂದು ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಸಿಕರ ನಿದ್ದೆಗೆಡಿಸುತ್ತಲೇ ಇವೆ.

 

ಈಗ ಸದ್ದು ಮಾಡುತ್ತಿರುವ ಚಿತ್ರ ‘ನೀರ್ ದೋಸೆ’.

ನೀರ್ ದೋಸೆ ಟ್ರೈಲರ್ ಬಿಡುಗಡೆಯಾದ ದಿನದಿಂದ, ಕನ್ನಡ ಚಿತ್ರಜೀವಿಗಳ ಬಾಯಲ್ಲಿ ‘ನೀರ್ ದೋಸೆ ನೋಡಿದ್ಯಾ.? ಏನ್ ಅನ್ನಿಸ್ತು ? ಎನ್ನುವ ಪ್ರಶ್ನೆ ಸರ್ವೇ ಸಾಮಾನ್ಯವಾಗಿದೆ.

ಈ ಟ್ರೈಲರ್ ನಮ್ಮ ಮುಂದಿಟ್ಟಿರುವ ಬಹು ಮುಖ್ಯವಾದ ಪ್ರಶ್ನೆಗಳು :

“ಹರಿಪ್ರಿಯಾ ಥರದವರು ಇಂಥ ಪಾತ್ರ ಮಾಡುವಾಗ ಎಚ್ಚರ ಇರಬೇಕಾ??”

“ಒಂದು ಚಿತ್ರದಲ್ಲಿ ಸಂಭಾಷಣೆ ಮತ್ತು ಅದರ  ಬಗ್ಗೆ ಇಂತಹ ಚರ್ಚೆ / ಅವಶ್ಯಕತೆ ಇದಿಯಾ??” .

 

shivarajkumar

 

“ಪಾತ್ರದಲ್ಲಿ ಅಷ್ಟೋಂದು ಕಂಟೆಂಟ್ ಇರುವಾಗ ಹರಿಪ್ರಿಯಾ ಅವರ ಹಾಟ್ ಲುಕ್ ಲೆಕ್ಕಕ್ಕೆ ಬರುವುದಿಲ್ಲ.ಅದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ.” – ಡಾ. ಶಿವಣ್ಣ

 

ಹರಿಪ್ರಿಯಾ ಅವರೇ .. ನೀವು ಈ ಪಾತ್ರ ಮಾಡಿದ್ದೀರಾ.. ನಿಮಗೆ ನಾಚಿಕೆ ಆಗಲ್ವಾ? .. ನೀವು ಒಂದ್ ಹೆಣ್ಣಾಗಿ ಹಿಂಗೆ ..? ಏನಿಕ್ಕೆ?.. ಪಬ್ಲಿಸಿಟಿಗೋಸ್ಕರ ಮಾಡಿದ್ರ ?, ದುಡ್ಡಿಗೋಸ್ಕರ ಮಾಡಿದ್ರಾ?.. ನೀವು ಮಾಡಿದ್ದು ತಪ್ಪು.        ಹು . ವೆಂಕಟ್Venkat at Huccha Venkat Movie Press Meet _3_

ಈ ಬಗ್ಗೆ ಸಿನಿಅಡ್ಡ ಓದುಗರ ಅನಿಸಿಕೆ … .

ಕ್ರಿಶ್ ಜೋಷಿ

12009703_10207576891762075_5211195705314324495_nಜಗತ್ತಿನ ಎಲ್ಲಾ ಇಂಥಾ generalized ಪ್ರಶ್ನೆಗಳಿಗೆ ಉತ್ತರ ಇರುವುದು. “It depends on the context” ಅನ್ನುವುದು.

ಶಿವಣ್ಣ ಹೇಳಿರುವುದು diplomatically ಸರಿ ಇದೆ. ಮುಖ್ಯವಾಗಿ ಪಾತ್ರಗಳನ್ನು ನಿರ್ಧರಿಸುವವನು ನಿರ್ದೇಶಕ ಆಗಿರುತ್ತಾನೆ. ಹಾಗಾಗಿ ಪ್ರೇಕ್ಷಕ ಇಷ್ಟಪಡಲೂಬಹುದು ಅಥವಾ ತಿರಸ್ಕರಿಸಲೂಬಹುದು.

ಇನ್ನು ಸಂಪ್ರದಾಯದ ಪ್ರಶ್ನೆ ಎನ್ನುವುದಾದರೆ, ಭಾರತ ಅನುಸರಿಸುತ್ತಿವುದೇ ಪಾಶ್ಚಾತ್ಯ ಮಾದರಿಯನ್ನು ಹಾಗು ಅದಕ್ಕಿಂತಾ ಹೆಚ್ಚಾಗಿ ಪ್ರಾಚೀನ ಕಾಲದಲ್ಲಿ ಇಂದಿಗಿಂತಾ ಹೆಚ್ಚು ಮುಕ್ತವಾದ ಸಮಾಜ ಇತ್ತು.

ಇಲ್ಲಿ ಏಕಪತ್ನಿವೃತಸ್ಥನಾದ ರಾಮನನ್ನೂ ಪೂಜಿಸುತ್ತಾರೆ. ಗೋಪಿಕಾಸ್ತ್ರೀಯರ ಸಂಗದಲ್ಲಿರುವ ಕೃಷ್ಣನನ್ನು ಗೌರವಿಸುತ್ತಾರೆ. ಎಲ್ಲಾ  ತರಹದ ಸಂಬಂಧಗಳನ್ನೂ ಒಪಿಕೊಳ್ಳಲಾಗಿತ್ತು ಎನ್ನುವುದಕ್ಕೆ ಮಹಾಭಾರತವೇ ಸಾಕ್ಷಿ.

ಶೀಲಾ ಬಂಡಾರಕರ್

10527710_785565074808122_4670437153322405947_n

ಒಂದು ಒಳ್ಳೆಯ ಕಥೆಯನ್ನು ತೆಗೆದುಕೊಂಡು ಚಿತ್ರ ಮಾಡಿದರೆ ನೋಡುವ ಜನರು ಇದ್ದೇ ಇರುತ್ತಾರೆ. ಆದರೂ ಇಂಥಾ ಪೋಲಿ ಸಿನಿಮಾ ಯಾಕೆ ಮಾಡುತ್ತಾರೆ?. ನಾಟಕವಾಗಲೀ, ಸಿನಿಮಾ ಆಗಲಿ ಜನರಿಗೆ ಸಂದೇಶವನ್ನು ಕೊಡುವಂತಿರಬೇಕು.

ಈಗಿನ ನಟಿಯರು ಕಡಿಮೆ ಸಿನಿಮಾ ಮಾಡಿದರೂ ಸರಿಯೇ, ನಮ್ಮ ಸಂಸ್ಕೃತಿಗೆ ತಕ್ಕನಾದ ಸಿನಿಮಾ ಮಾಡಬಾರದೇಕೆ? ಖಂಡಿತಾ ಎಚ್ಚರ ಇರಬೇಕು. ನೀರ್ ದೋಸೆ  ನಮ್ಮೂರ ಜನಪ್ರಿಯ ತಿಂಡಿ. ಅದರ ಮರ್ಯಾದೆ ತೆಗೀತಿದ್ದಾರಲ್ಲ ಅನ್ನಿಸ್ತು.

ಪ್ರಕಾಶ್ ಶ್ರೀನಿವಾಸ್
1465311_741671725854072_171871687_n

 

 

 

ಹೇಳಬೇಕಾದ ವಿಷಯವನ್ನು ನೇರವಾಗಿಯೂ ಸುತ್ತಿ ಬಳಸಿಯೂ ಹೇಳಬಹುದು, ಅದು ನಿರ್ದೇಶಕನ ಸ್ವಾತಂತ್ರ್ಯ, ಈಗೀಗ ಅದನ್ನು ಧರ್ಮ, ಜಾತಿ, ಕಲ್ಚರ್ ಎಂದು, ಎಲ್ಲರೂ ತಮ್ಮ ತಮ್ಮ ದೃಷ್ಟಿಕೋನ ದಲ್ಲೇ ಚಿತ್ರಗಳು ಇರಬೇಕು ಅಂದ್ರೆ ಅದು ಚಿತ್ರದ ಬದಲು ಚಿತ್ರಾನ್ನವಾಗಿ ಬಿಡುತ್ತದೆ, ಒಂದೊಂದು ಸಿನಿಮಾಗೆ ಒಂದೊಂದು ರುಚಿ ಇದೆ ಅದನ್ನು ಒಗ್ಗದ್ದಿದ್ದರೆ ಅಲಕ್ಷ್ಯ ಮಾಡಿ, ಇನ್ನೊಬ್ಬರಿಗೂ ಮಾಡಿ ಅಥವಾ ಬೇಡಿ ಅನ್ನಬೇಡಿ.

ರೋಹಿತ್ ಹರಿಪ್ರಸಾದ್
12473818_10207621423671574_6535376718081485044_o

ಮೊದಲನೆಯದಾಗಿ, ಒಬ್ಬ ನಟಿಗೆ ಮಾತ್ರ ಈ ರೀತಿಯ ಎಚ್ಚರಿಕೆ ಇರಬೇಕು ಅನ್ನೋ ನಿರೀಕ್ಷೆ ಯಾಕೆ? ಒಬ್ಬ ನಟನಿಗೆ, ಒಬ್ಬ ನಿರ್ದೇಶಕನಿಗೆ, ಒಂದು ತಂಡಕ್ಕೇ ಈ ರೀತಿಯ ಎಚ್ಚರಿಕೆ ಇರಬೇಕು ಅಲ್ಲವಾ?

ನಟ/ನಟಿಯರು ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತಾ ತಮ್ಮ ತಮ್ಮ ಮಿತಿಯನ್ನು ಮೀರುವ, ಸಾಮರ್ಥ್ಯವನ್ನು ಅರಿಯುವ ಪ್ರಯತ್ನ ಮಾಡುವುದು ಸಹಜ.

ಆದರೆ ಇಲ್ಲಿ ನಿಜವಾಗಿ ಎಲ್ಲರ ಹುಬ್ಬೇರುವಂತೆ ಮಾಡಿರುವುದು, ಟ್ರೈಲರ್  ಸಂಭಾಷಣೆ!. ಈ ರೀತಿಯ ಸಂಭಾಷಣೆ ಮುಜುಗರ ತರಿಸುವಂತದ್ದು ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಆ ರೀತಿಯ ಮಾತುಗಳನ್ನಾಡುವ ವರ್ಗ ಇದ್ದೇ ಇರುತ್ತವೆ ಎನ್ನುವುದು.

ಬಹುಮುಖ್ಯವಾಗಿ..ಕಾಲಕ್ಕೆ ಕಾಲಕ್ಕೆ ಈ ರೀತಿಯ ಸಂಭಾಷಣೆ (ಸಣ್ಣ ಪ್ರಮಾಣದಲ್ಲೇ ಇರಬಹುದು) ಇರುವ ಸಿನಿಮಾಗಳು ಯಶಸ್ವಿಯಾಗಿವೆ ಕೂಡ!!  ಇದು ಅದರ ಮುಂದುವರೆದ, ಬೆಳೆದ ಪರಿಣಾಮ ಇರಬಹುದ?

ಜೊತೆಗೆ, “ಬೇರೆ ಭಾಷೆಗಳಲ್ಲಿ ಸಂಭಾಷಣೆಗಳು ಇನ್ನೂ ಕೆಟ್ಟದಾಗಿರುತ್ತವೆ ” ಎಂದು ಹೋಲಿಸಿಕೊಂಡು ಈ ಟ್ರೈಲರ್ ನ ಸಂಭಾಷಣೆಯನ್ನು ಸಮರ್ಥಿಸಿಕೊಳ್ಳಬೇಕಿಲ್ಲ.

ಅರುಣ್ ಗೌಡ ಮಲ್ಲಪ್ಪನಹಳ್ಳಿ

ನಟನೆ ಅನ್ನೋದು ಸುಲಭದ ಮಾತಲ್ಲ, ಒಬ್ಬ ಜನಪ್ರಿಯ ನಟಿ ಒಂದು ಪಾತ್ರ ಅದರಲ್ಲೂ ನೀರ್ ದೋಸೆ ಸಿನಿಮಾ ದಂತಹ ಕಾಲ್ ಗರ್ಲ್ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆಂದರೆ ಅವರು ಅವರ ಭವಿಷ್ಯವನ್ನು ಯೋಚಿಸಿಯೇ ಇರುತ್ತಾರೆ.

ಹಾಗು ನಟನೆ ಎಂದ ಮೇಲೆ ಇಂತದ್ದೇ ಎಂದು ಯಾವ ಪಾತ್ರಕ್ಕೂ ಸೀಮಿತ ಆಗೋದು ಸರಿ ಅಲ್ಲ. ನಿಜಕ್ಕೂ ಹರಿಪ್ರಿಯಾ ಧೈರ್ಯ ಹಾಗು ಅವರ ಪಾತ್ರ ಪ್ರಶಂಸನೀಯ.

ಆನಂದ್ ಕುಮಾರ್ ಮತಿಘಟ್ಟ

ನಿರ್ದೇಶಕ ಹಾಗು ನಾಯಕ ಇಬ್ಬರು ಅಸಂಸ್ಕೃತರಂತೆ ಕಾಣುತ್ತಾರೆ.ಅವರು ಹೇಳುತ್ತಿರುವುದು ವಾಸ್ತವ ಅಂದು ಸಮರ್ಥಿಸಿಕೊಳ್ಳಬಹುದು.

1173702_856899027660905_4225413571429009937_nಆದರೆ, ಸಿನಿಮಾದಂತಹಾ ಗುಣಮಟ್ಟದ ಮಾಧ್ಯಮವನ್ನು ಇನ್ನು ಹಲವು ವಾಸ್ತವಗಳನ್ನು ಹೇಳಲು ಬಳಸಿಕೊಳ್ಳಬಹುದು. ಹರಿಪ್ರಿಯಾ ಒಂದು ಗ್ಲಾಮರಸ್ ನಟಿಯಾಗಿ ಮಾತ್ರ ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಅಷ್ಟೇ. ಅದಕ್ಕೆ ಪ್ರಯೋಗ ಎನ್ನುವ ಬೆಣ್ಣೆ ಹಚ್ಚುವ ಅವಶ್ಯಕತೆ ಇಲ್ಲ.

ಇಲ್ಲಿ ಶಿವಣ್ಣ ಹಾಗು ಹುಚ್ಚ ವೆಂಕಟ್ ಸಂಪೂರ್ಣ ವೈರುಧ್ಯದ ದಿಕ್ಕಿನಲ್ಲಿ ಮಾತಾಡುತ್ತಿದ್ದಾರೆ. ಹಾಗೆಯೇ ವಿಜಯ್ ಪ್ರಸಾದ್ ಹಾಗು ಗುರುಪ್ರಸಾದ್ ಅವರಿಬ್ಬರ ಅಭಿರುಚಿಯಲ್ಲಿ ನನಗೆ ಅಂತರ ಕಾಣುವುದಿಲ್ಲ. ಇಬ್ಬರೂ ಮನೋರಂಜನೆ ಹಾಗು ಹಾಸ್ಯದ ನೆಪದಲ್ಲಿ ಸಿನಿಮಾ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಮಂಜೇಗೌಡ ಮಲ್ಲೇನಹಳ್ಳಿ

10007442_425776804225137_5262121494554798832_n

ಚಿತ್ರದಲ್ಲಿ ಮನರಂಜನೆಗೆ ಒತ್ತು ಕೊಟ್ಟಿದ್ದಾರೆ.

ಅದಕ್ಕಾಗಿಯೇ ಕೆಲಸ ಮಾಡಿರುವ ಚಿತ್ರತಂಡ ಕೆಲಸ ಮಾಡಿರೋದು ಗೊತ್ತಾಗುತ್ತೆ.  ಚಿತ್ರದಲ್ಲಿ ದ್ವಂದ್ವಾರ್ಥ ಪದಬಳಕೆ ಹೆಚ್ಚಾಗಿದ್ದು ಸಂಸಾರ ಸಮೇತ ಕುಳಿತು ಚಿತ್ರವೀಕ್ಷಣೆ ಕಷ್ಟ ಆಗಬಹುದು.

ಚಿತ್ರದ ಟ್ರೇಲರ್ ನೋಡಿದಾಗ ಅಶ್ಲೀಲ ದೃಶ್ಯಗಳ ಹಾವಳ ಇಲ್ಲ.. ಆದರೆ ಮಾತಿನಲ್ಲಿ ಮೋಡಿಯಿದೆ.  ಅವುಗಳನ್ನು ಅಶ್ಲೀಲ ಅಂತಾ ಹೇಳಲು ಆಗಲ್ಲ.

ಓರ್ವ ನಟ, ನಟಿಗೆ ಭಿನ್ನ ಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುವ ಅವಕಾಶ ಸಿಗುವುದೇ ಕಡಿಮೆ. ಹರಿಪ್ರಿಯಾ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.. ಪಾತ್ರ ಅಭಿನಯದಲ್ಲಿ ಇಂತಹದೇ ಪಾತ್ರ ಬೇಕು ಎಂದಾಗ ಚಿತ್ರಕ್ಕೆ ಬೆಲೆ ಇರಲ್ಲ.

ಚಿತ್ಕಲಾ ಬಿರಾದರ್

ಹೌದು ಖಂಡಿತಾ ಎಚ್ಚರಿಕೆ ಇರಬೇಕು. ಮಾತು ಅಷ್ಟರಮಟ್ಟಿಗೆ ಕಳಪೆ ಆಡುತ್ತೆವೆಯಾ ನಾವು ಜೀವನದಲ್ಲಿ? ಸಿನೆಮಾ ಮನರಂಜನೆಗೆ ನಿಜ ಹಾಗಂತ ಬೇಕಾದ್ದನ್ನೆಲ್ಲ ತೋರಿಸುವುದು, ಹೇಳಿಸುವುದು ಮಾಡಿದರೆ ಅದು ಮನರಂಜನೆ ಅಲ್ಲ ಮನನಿಂದನೆ ಆಗುತ್ತೆ.

 

 

ಹೇಮಲತಾ ಪುಟ್ಟನರಸಯ್ಯ

12079147_999305113467113_8721644605211367315_n

ಎಲ್ಲ ತರಹದ ಜನರು ಇರುತ್ತಾರೆ ಎಂದ ಮೇಲೆ, ಎಲ್ಲಾ ತರಹದ ಪಾತ್ರಗಳೂ ಇರುತ್ತವೆ. ಟ್ರೈಲರ್ ನನಗೆ ಇಷ್ಟ ಆಗಲಿಲ್ಲ. ಆದರೆ ಹರಿಪ್ರಿಯಾ ಪ್ರಯತ್ನ ಇಷ್ಟ ಆಯ್ತು.

 

ಗಣೇಶ್ ರಾವ್

10891770_581672155301359_8402119587175368632_n

ಎಲ್ಲರೂ ಮಾಡುವುದು ದುಡ್ಡಿಗಾಗಿ ಪಬ್ಲಿಸಿಟಿಗಾಗಿನೇ ಯಾರೂ ಫ್ರೀ ಆಗಿ ಮಾಡಲು ಸಾಧ್ಯವೇ. ಹಾಟ್ ಹಾಟ್ ಇದ್ರೆನೇ ಎಲ್ಲಾ ಸವಲತ್ತುಗಳು ಎಂದು ಅವರಿಗೆ ಗೊತ್ತು. ಆದರೂ ಇಂಥಾ ಪ್ರಯತ್ನಗಳಿಂದ ನಮ್ಮ ಮುಂದಿನ ಪೀಳಿಗೆಗೆ ಇಂಥಾ ಕೊಳಕು ನೀಡಿದಂತೆ ಆಗುತ್ತದೆ. ದತ್ತಣ್ಣ ಅಂತಾ ಹಿರಿಯ ಕಲಾವಿದರ ಬಾಯಲ್ಲಿ ಮಾತ್ರೆ ತಗೋತೀನಿ ಅಂತಾ ಹೇಳಿಸಿರೋದು ಎಷ್ಟು ಸಮಂಜಸ?

 

—–

ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ತಂಡ, ಪ್ರತಿಯೊಂದು ಪೀಳಿಗೆಯು ಚಲನಚಿತ್ರವನ್ನು ತನ್ನದೇ ಆದ ವಿಶಿಷ್ಟ ಮಾದ್ಯಮವನ್ನಾಗಿ ನೋಡಿವೆ.
ಒಂದು ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಬೇಕಾಗಿ ಬಂದಾಗ ಶಿವಣ್ಣರಿಗೆ ಇರೋ ಪ್ರಬುದ್ಧತೆ ವೆಂಕಟ್ ರಲ್ಲಿ ಇರೋದು ಒಂದು doubt.
ಮತ್ತೆ ಈ ರೀತಿ ಅನಗತ್ಯ ಕಾಂಟ್ರವರ್ಸಿ ಹುಟ್ಟುಹಾಕಿ, ಸಿಗುವ ಪಬ್ಲಿಸಿಟಿಯಿಂದ ಸಿನಿಮಾ ಮಾಡಿದವರು ದುಡ್ಡು ಮಾಡಿಕೊಳ್ಳತಾ ಇದ್ದಾರ? ಅನ್ನೋದು ಇನ್ನೊಂದು ಡೌಟ್.

 

ಒಟ್ಟಿನಲ್ಲಿ Freedom of Expression, Social Concern, Cultural Responsibility …   ಹೀಗೆ ಹತ್ತಾರು ದ್ವಂದ್ವಗಳು ಚಿತ್ರ ಕಥೆಗಳೊಳಗೆ ನುಗ್ಗಿ ರಂಪ ಮಾಡುತ್ತಿರುವುದಂತು ಸತ್ಯ.

 ನೀವೇನಂತೀರಾ…………………??

 ಅಂದಹಾಗೆ ಚಿತ್ರದ Making ಟ್ರೈಲರ್ ಮಿಸ್ ಮಾಡ್ಕೊಂಡಿದ್ರೆ, ಇಲ್ಲೇ ಇದೆ ನೋಡಿ 🙂

-Ad-

Leave Your Comments