ಈ ವಾರದ ಚಿತ್ರ “ಒನ್ ಟೈಮ್ ” ಮಿಸ್ ಮಾಡ್ಕೋಬೇಡಿ

ಈ ವಾರ ತೆರೆಗೆ ಬರುತ್ತಿರುವ ಚಿತ್ರ “ಒನ್ ಟೈಮ್ “. ಪ್ರೀತಿ ಗಳಿಸಿದ ಪ್ರೇಮಿಗಳು ತಮಗೆ ಸಿಕ್ಕಿದ ಹಿರಿಯರ ನಿಷ್ಕಲ್ಮಷ ಪ್ರೇಮದ ಬಗ್ಗೆ ಸಹ ಎಚ್ಚರ ವಹಿಸಬೇಕು. ಪ್ರೀತಿ ಮಾಡಿ ಓಡಿ ಹೋಗ್ಬೇಡಿ. ಹಿರಿಯರನ್ನು ಒಪ್ಪಿಸಿ ಮದುವೆ ಆಗಿ ಅನ್ನುವ ಸಂದೇಶ ಒನ್ ಟೈಮ್ ಚಿತ್ರದ್ದು.

ಡಿಯೋಕ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಮೂಡಿಬಂದಿರುವ ಒನ್ ಟೈಮ್ ಗೆ ರಾಜ್ ನಿರ್ದೇಶನವಿದೆ. ಕಿರಣ್ ವಾಸುದೇವನ್ ಚಿತ್ರದ ನಿರ್ಮಾಪಕರು.

“ಒನ್ ಟೈಮ್ ” ಆಕರ್ಷಣೆ!

ಪೂನಾದಲ್ಲಿ ನಡೆಯುವ ಡರ್ಟ್ ರೇಸ್ ಒನ್ ಟೈಮ್ ನ ಬಹುಮುಖ್ಯ ಆಕರ್ಷಣೆ. ಕನ್ನಡ ಚಿತ್ರರಂಗದ ಹೆಸರಾಂತ 14 ನಿರ್ದೇಶಕರುಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಣ್ಣಾವ್ರ ಅನೇಕ ಚಿತ್ರಗಳನ್ನು ನಿರ್ದೇಶಿಸಿದ ಕೆ ಎಸ್ ಭಗವಾನ್, ನಟ, ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ, ಪಿ ಎನ್ ಸತ್ಯ, “ಓ ಗುಣವಂತ .. ಓ ಗುಣವಂತ .. ನಿನ್ನಾ ಗುಣಗಾನ ಮಾಡಲು ಪದಗಳೆ ಸಿಗುತ್ತಿಲ್ಲ” ಹಾಡಿನಿಂದ ಇಂದಿಗೂ ನೆನಪಲ್ಲಿ ಉಳಿದಿರುವ ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ,  ವಿಕ್ಟರಿ ವಾಸು, ಗಡ್ಡ ವಿಜಯ್ ಮತ್ತಿತರರು..

ತೇಜಸ್ ಹಾಗು ನೇಹಾ ಸಕ್ಸೆನಾ ಮುಖ್ಯ ತಾರಾಗಣದಲ್ಲಿದ್ದಾರೆ.neha-saxena-amp  ಅಭಿಮನ್ ರಾಯ್ ಸಂಗೀತದ ಮಾಧುರ್ಯ ತುಂಬಿದ ಹಾಡುಗಳು ಜನಮೆಚ್ಚುಗೆ ಪಡೆದಿವೆ. ಸೂರ್ಯಕಾಂತ್ ಹೊನ್ನಳ್ಳಿ ಛಾಯಾಗ್ರಹಣ, ರಘು ಎಸ್ ಸಂಕಲನ, ತ್ರಿಭುವನ್ ಮಹೇಶ್ ಕುಮಾರ್ ಹಾಗು ರಾಜ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಕಲಾ ನಿರ್ದೇಶನ ಮೋಹನ್ ಬಿ ಕೆರೆ .

ಗೀತ ಸಾಹಿತ್ಯ

nagendra-prasad ಡಾ. ವಿ ನಾಗೇಂದ್ರ ಪ್ರಸಾದ್, ಅಭಿಮಾನ್ ರಾಯ್,ರೋಷನ್ ರಾಯ್ ಹಾಗು ರಾಜ್

ಪ್ರೀತಿ ಮಾಡಿ ಆದ್ರೆ ನಿಮ್ಮನ್ನು ಹೆತ್ತು ಹೊತ್ತು ಸಾಕಿ ಬೆಳೆಸಿದ ಮನೆಯವರನ್ನು ಬಿಟ್ಟು ಓಡಬೇಡಿ ಒಪ್ಪಿಸಿ ಮದುವೆ ಆಗಿ ಅನ್ನುವಂಥ ಒಳ್ಳೆ ಚಿತ್ರ ಮಾಡಿದ್ದೇವೆ. “ಒನ್ ಟೈಮ್” ಮಿಸ್ ಮಾಡ್ಕೋ ಬೇಡಿ . ತಪ್ಪದೆ ನೋಡಿ ಅಂತಿದೆ ಚಿತ್ರ ತಂಡ.

 

-Ad-

Leave Your Comments