ಕನ್ನಡಕ್ಕೆ ಬರ್ತಾರಾ ಕರೀನಾ ಕಪೂರ್ ?!

ಬೆಂಗಳೂರು ಹತ್ತನೇ ಅಂತರಾಷ್ಟ್ರೀಯ ‌ಸಿನಿಮೋತ್ಸವ ಆರಂಭವಾಗಿದ್ದು, ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಅದ್ಬುತ ಕಾರ್ಯಕ್ರಮದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಸಿಎಂ ಸಿದ್ದರಾಮಯ್ಯ ಸಿನಿಮೋತ್ಸವಕ್ಕೆ  ಚಾಲನೆ ನೀಡಬೇಕಿತ್ತು. ಆದರೆ ವಿಧಾನ‌ಸಭೆಯ ಕಾರ್ಯಕಲಾಪದ ನಿಮಿತ್ತ ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೈರಾದರು. ಹೀಗಾಗಿ ಬಾಲಿವುಡ್ ನಟಿ ಕರೀನಾ ಕಪೂರ್, ದೀಪ ಬೆಳಗಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು..
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ
ಕರೀನಾ ಕಪೂರ್, ಇವತ್ತಿನ ಸಂಜೆ ನನ್ನ ಪಾಲಿಗೆ ಮ್ಯಾಜಿಕಲ್ ಇವ್ನಿಂಗ್  ಅಂದ್ರು. ಬೆಂಗಳೂರು ಡೈನಾಮಿಕ್ ಸಿಟಿ, ಇಲ್ಲಿ ಕೇವಲ ‌ಕನ್ನಡ ಸಿನಿಮಾ ಮಾತ್ರವಲ್ಲದೆ ಇಡೀ ವಿಶ್ವದ ಸಿನಿಮಾಗಳನ್ನು ನೋಡುವ ಮೂಲಕ ಸೆಲೆಬ್ರೇಟ್ ಮಾಡಲಾಗುತ್ತಿದೆ ಅಂತ ಹರ್ಷ ವ್ಯಕ್ತಪಡಿಸಿದ್ರು.  ಬಳಿಕ ನನಗೆ ನಿಮ್ಮ ಭಾಷೆ ಬರೋದಿಲ್ಲ ಮುಂದಿನ ದಿನಗಳಲ್ಲಿ ಕನ್ನಡ‌ ಸಿನಿಮಾಗಳಲ್ಲಿ‌ ನಟಿಸುವ ‌ಮೂಲಕ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುವ ಕೆಲಸ ಮಾಡಲು ಬಯಸುತ್ತೇನೆ ಅಂತ ಕನ್ನಡಿಗರ ಹೃದಯಕ್ಕೆ ಹತ್ತಿರವಾದರು. ಕರ್ನಾಟಕ ಯಾವಾಗಲೂ ಕಪೂರ್ ಫ್ಯಾಮಿಲಿಗೆ ತುಂಬಾ ಸ್ಫೆಷಲ್ ಪ್ಲೇಸ್ ಅದರಲ್ಲೂ ಬೆಂಗಳೂರು ಬ್ಯೂಟಿಫುಲ್ ಸಿಟಿ. ನಾನು ಹಲವಾರು ಸಿನಿಮೋತ್ಸವಕ್ಕೆ ಹೋಗಿದ್ದೇನೆ. ಆದ್ರೆ ಬೆಂಗಳೂರಿನ ಈ ‌ಸಿನಿಮೋತ್ಸವ ಕಾರ್ಯಕ್ರಮ ನನಗೆ ತುಂಬಾ ವಿಶೇಷ ಅಂತಾನೂ ತಿಳಿಸಿದ್ರು.
ಡಾ‌.ರಾಜೇಂದ್ರ ಸಿಂಗ್ ಬಾಬು ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ 10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಮಾರ್ಚ್ 1 ರ ವರೆಗೆ ನಡೆಯಲಿದ್ದು, ಸುಮಾರು 200 ದೇಶಗಳಿಂದ ಆಯ್ಕೆಯಾದ 50ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಬೆಂಗಳೂರು ಚಲನ ಚಿತ್ರೋತ್ಸವ ಕಾರ್ಯಕ್ರಮ ದಲ್ಲಿ ಚಿತ್ರೋದ್ಯಮದ ಬಹುತೇಕ ಕಲಾವಿದರು, ಗಣ್ಯರು, ತಂತ್ರಜ್ಞರು ಭಾಗಿಯಾಗಿದ್ದರು. ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶದಿಂದಲೂ ಸಿನಿಮಾ ನಿರ್ದೆಶಕರು, ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ‌ ಅವರಿಗೆ ಜೀವ ಮಾನ ಶ್ರೇಷ್ಠ ಪ್ರಶಸ್ತಿ ಜೊತೆಗೆ ₹10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯ್ತು..
-Ad-

Leave Your Comments