ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಅಂದ್ರೆ ಮೇ ೧ ರಂದು ಮಧ್ಯಾಹ್ನ ಬಾಹುಬಲಿ- 2 ನೋಡಿ ಸಂಜೆ ಭಾವನಾ ಅಭಿನಯದ ನಿರುತ್ತರ ನೋಡಿದ್ರು. ಬಾಹುಬಲಿ ನೋಡಿ ಚಿತ್ರಮಂದಿರದಿಂದ ಹೊರ ಬಂದಾಗ ಎದುರಿಗೇ ಪ್ರಶ್ನೆ ಕೇಳಲು ಕಾದುಕುಳಿತಿದ್ದ ಮಾಧ್ಯಮದವರಿಗೆ ಮುಖ ಕೂಡ ತೋರಿಸದೆ ಹೊರಟುಬಿಟ್ಟಿದ್ದರು. ciniadda.com ಮುಖ್ಯಮಂತ್ರಿಯವರ ಈ ನಡೆಯ ಬಗ್ಗೆ, ಕಾರ್ಯಗತವಾಗದ ಏಕರೂಪ ದರದ ಆದೇಶದ ಬಗ್ಗೆ ಕನ್ನಡಿಗರ ಧ್ವನಿಯಾಗಿ ನಿಂತು ವರದಿ ಪ್ರಕಟಿಸಿತ್ತು .
ಇದೀಗ ಬಾಹುಬಲಿ ಕರ್ನಾಟಕದಿಂದ ಹಣ ಬಾಚಿಕೊಂಡ ಮೇಲೆ ಸಿದ್ದರಾಮಯ್ಯನವರ ಆದೇಶ ಜಾರಿಯಾಗಿದೆ. ಇನ್ನು ಮುಂದೆ ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಯಾವುದೇ ಇರಲಿ ಇನ್ನೂರು ರೂಪಾಯಿ ಫಿಕ್ಸ್ !
ಆದೇಶ ಜಾರಿಯ ಹೈ ಲೈಟ್ಸ್ !
- ಎಲ್ಲಾ ಮಲ್ಟಿಫ್ಲೆಕ್ಸ್ಗಳಲ್ಲಿ ಇನ್ಮುಂದೆ ಏಕರೂಪ ಟಿಕೆಟ್ ದರ ಜಾರಿ
- ಎಲ್ಲಾ ಭಾಷೆಗಳ ಸಿನಿಮಾಗಳಿಗೂ ಏಕರೂಪ ದರ ಆದೇಶ ಅನ್ವಯ
- ೨೦೦ ರೂಪಾಯಿ ಟಿಕೆಟ್ಗೆ ತೆರಿಗೆಯನ್ನು ಸೇರಿಸಲು ಅವಕಾಶ
- ಗೋಲ್ಡ್ಕ್ಲಾಸ್ ಸ್ಕ್ರೀನ್ ಹಾಗೂ ಗೋಲ್ಡ್ಕ್ಲಾಸ್ ಸೀಟ್ಗಳಿಗೂ ಆದೇಶ ಅನ್ವಯ
- ಶೇಕಡ ೧೦ರಷ್ಟು ಸೀಟುಗಳಿಗೆ ಮಲ್ಟಿಫ್ಲೆಕ್ಸ್ನವರು ರೇಟ್ ಫಿಕ್ಸ್ ಮಾಡಬಹುದು
- ಐ-ಮ್ಯಾಕ್ಸ್ ಹಾಗೂ ೪ಡಿಎಕ್ಸ್ ಚಿತ್ರಮಂದಿರಗಳು ಆದೇಶಕ್ಕೆ ಒಳಪಡುವುದಿಲ್ಲ
- ಮಧ್ಯಾಹ್ನ ೧.೩೦ರಿಂದ ಸಂಜೆ ೭.೩೦ರ ಪ್ರಮುಖ ಅವಧಿಯಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ
- ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎನ್ ಜಯಶ್ರೀ ಅವರಿಂದ ಆದೇಶ
ಬಾಹುಬಲಿ -ಕಟ್ಟಪ್ಪ ವಿವಾದದ ಹೊತ್ತಿನಲ್ಲಿ ಕನ್ನಡ, ಮಾನ ಮರ್ಯಾದೆ ,ಅವಮಾನ ,ಸ್ವಾಭಿಮಾನ ಅಂತೆಲ್ಲ ಬಹುತೇಕರು ಬಾಹುಬಲಿ ಬಾವುಟ ಬೀಸಿದ್ದೇ ಬೀಸಿದ್ದು . ಬಾಹುಬಲಿ ಬಿಡುಗಡೆ ಆಗ್ತಿದ್ದ ಸ್ವಾಭಿಮಾನ ,ಕನ್ನಡ ಅಭಿಮಾನ ಸಿನಿಮಾ ವಿಷ್ಯದಲ್ಲಿ ಪಕ್ಕಕ್ಕೆ ಇಡ್ರಪ್ಪ. ಸಿನಿಮಾ ಚೆನ್ನಾಗಿದ್ರೆ ಯಾವ ಭಾಷೆ ಆದ್ರೇನು ನೋಡ್ಬೇಕಷ್ಟೆ ಅಂತ ಮುಗಿಬಿದ್ದು ಸಾವಿರದ ನಾಲ್ಕು ನೂರು ಕೊಟ್ಟು ನೋಡಿದ್ದೇ ನೋಡಿದ್ದು . ಅಂಥಾ ಶಿಖಾಮಣಿಗಳೆಲ್ಲ ಈಗ ಅಯ್ಯೋ ಕಾದಿದ್ರೆ ದುಡ್ಡು ಉಳಿತಿತ್ತಲ್ಲಪ್ಪ ಅಂತ ಕೈ ಕೈ ಹಿಸುಕಿಕೊಳ್ತಿರೋದಂತು ನಿಜ. ಒಟ್ಟಿನಲ್ಲಿ ಇಡೀ ಪ್ರಕರಣದ ಸುತ್ತ ಬೆಳೆದ ಅನುಮಾನದ ಹುತ್ತ ಮಾತ್ರ ಕರಗಲಿಲ್ಲ .
ಸಿದ್ದರಾಮಯ್ಯನವರು ಮಾಡಿದ ಆದೇಶ ಜಾರಿ ಆಗೋ ಹೊತ್ತಿಗೆ ಕನ್ನಡಿಗರ ಕಾಸು ಬಾಹುಬಲಿ ಭಂಡಾರ ತುಂಬಿಕೊಂಡಿದ್ದಕ್ಕೆ ಎದ್ದುಬಿದ್ದು ಸಿನಿಮಾ ನೋಡಿದ ಕನ್ನಡಿಗರೇ ಸಾಕ್ಷಿ . ಜೊತೆಗೆ ವಿವಾದದ ನಂತರ ದುಬೈನಿಂದ ಬಂದು ಮೊದಲು ಕನ್ನಡ ಸಿನಿಮಾಕ್ಕೆ ಬೆಂಬಲ ಕೊಡದೆ ಬಾಹುಬಲಿ ನೋಡಿ ಬಂದ ಮುಖ್ಯಮಂತ್ರಿಯವರ ಕನ್ನಡಪ್ರೇಮದ ಬಗ್ಗೆ ಕನ್ನಡಿಗರು ಖಡಕ್ ಆಗಿ ಧ್ವನಿ ಎತ್ತುವ ಮುನ್ನ ಆದೇಶ ಜಾರಿ ಮಾಡಿಸಿ ಸುಮ್ಮನಾಗಿಸುವ ತಂತ್ರಕ್ಕೂ ಕನ್ನಡಕಂದಮ್ಮಗಳೇ ಸಾಕ್ಷಿ.