ಕಾರುಣ್ಯರಾಮ್ ವಿರುದ್ಧ ದೂರು ನೀಡಲು ಮುಂದಾದ ಕಿರುತೆರೆ ನಟಿ ಅನಿಕಾ

ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ವಿರುದ್ಧ ಕಿರುತೆರೆ ನಟಿ ಕಿರುತೆರೆ ನಟಿ ಅನಿಕಾ ಅವರು ಕಿರುಕುಳದ ಆರೋಪ ಮಾಡಿದ್ದು, ದೂರು ನೀಡಲು ನಿರ್ಧರಿಸಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರವಾಹಿಯ ಕುಮುದ ಪಾತ್ರ ನಿರ್ವಹಿಸಿ ಜನಪ್ರಿಯತೆ ಗಳಿಸಿರುವ ಅನಿಕಾ ಅವರು ಇತ್ತೀಚೆಗೆ ಸಚಿನ್ ಎಂಬಾತನ ಜತೆ ನಿಶ್ಚಿತಾರ್ಥವಾಗಿದ್ದು, ಈಗ ಕಾರುಣ್ಯರಾಮ್ ಇವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಕಾರಣ, ಕಾರುಣ್ಯರಾಮ್ ಹಾಗೂ ಸಚಿನ್ ಎಂಬುವವರು ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದು, ಮೂರು ವರ್ಷಗಳ ಹಿಂದೆಯೇ ದೂರವಾಗಿದ್ದರಂತೆ. ಈಗ ಅನಿಕಾ ಹಾಗೂ ಸಚಿನ್ ನಿಶ್ಚಿತಾರ್ಥವಾದ ನಂತರ ಕಾರುಣ್ಯ ಈ ಇಬ್ಬರ ಮಧ್ಯೆ ಎಂಟ್ರಿ ಆಗಿದ್ದು, ತನಗೆ ಸಚಿನ್ ಬೇಕು ನನಗೆ ಕೊಟ್ಟು ಮದುವೆ ಮಾಡಿ ಎಂದು ಅವರ ಮನೆಯವರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಅನಿಕಾ ಅವರ ಆರೋಪ.

ಸಚಿನ್ ಹಾಗೂ ಕಾರುಣ್ಯ ಮಧ್ಯೆ ಈ ಹಿಂದೆ ಏನಿತ್ತು ಎಂಬುದು ನನಗೆ ಬೇಡ. ಈಗ ಸಚಿನ್ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನನ್ನನ್ನೇ ಮದುವೆಯಾಗಲು ಸಿದ್ಧರಾಗಿದ್ದಾರೆ. ನಿಶ್ಚಿತಾರ್ಥವಾದ ಮೇಲೆ ಬಂದು ಹೀಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ನನಗೂ ನನ್ನ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗುತ್ತದೆ. ಹೀಗಾಗಿ ಕಾರುಣ್ಯರಾಮ್ ತನ್ನ ಪಾಡಿಗೆ ತಾನು ಇರಬೇಕು. ಈ ರೀತಿಯ ಕಿರುಕುಳದಿಂದ ನಾನು ಹಾಗೂ ಸಚಿನ್ ಮತ್ತು ಮನೆಯವರೆಲ್ಲಾ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕಾರುಣ್ಯರಾಮ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾರುಣ್ಯ ಈ ವಿಚಾರವಾಗಿ ಏನು ಹೇಳುತ್ತಾರೆ ಎಂಬುದರ ಮೇಲೆ ಈ ಪ್ರಕರಣ ಎತ್ತ ಸಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

-Ad-

Leave Your Comments