ಐಶ್ವರ್ಯಾ ರೈ ಮನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ

Aishwarya Rai Bachchan at Aishwarya Rai Father's Prayer Meet on 30th March 2017 shown to user
ಐಶ್ವರ್ಯಾ ರೈ ಮಂಗಳೂರಿನ ಹುಡುಗಿ ಅನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾವಾಗಲೋ ಒಂದು ಸಲ ಕರ್ನಾಟಕಕ್ಕೆ ಬಂದಾಗ ತುಳುವಿನಲ್ಲಿ  ಮಾತನಾಡಿ ತುಳುನಾಡಿನ ಮಂದಿಯನ್ನು ಪುಳಕಿತರಾಗಿಸಿದ್ದೂ ಇದೆ. ಆದರೆ ಇಲ್ಲಿಂದ ಆಚೆ ಹೋದ ಮೇಲೆ ಹುಟ್ಟೂರಿನ ನೆನಪು ಇರುತ್ತದೋ ಇಲ್ಲವೋ ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಹುಟ್ಟೂರಿನ ನಂಟು ಯಾವತ್ತೂ ಬಿಟ್ಟು ಹೋಗುವುದಿಲ್ಲ. ಅದಕ್ಕೆ ಸಾಕ್ಷಿ ಈ ಫೋಟೋ.

ಐಶ್ವರ್ಯಾ ರೈಯವರ ತಂದೆ ಕೃಷ್ಣರಾಜ ರೈ ಇತ್ತೀಚೆಗೆ ತೀರಿಕೊಂಡಿದ್ದರು. ಅವರ ಫೋಟೋಗೆ ಐಶ್ವರ್ಯಾ ಮಗಳು ಆರಾಧ್ಯ ನಮಸ್ಕರಿಸುವ ಫೋಟೋ ಇತ್ತೀಚೆಗೆ ಆನೈ ಲೈನ್ ನಲ್ಲಿ ವೈರಲ್ ಆಗಿತ್ತು. ವಿಶೇಷ ಅಂದರೆ ಅದೇ ಮನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಿಯ ಫೋಟೋ ಇರುವುದು.

ತುಳುನಾಡಿನಿಂದ ಪರವೂರಿಗೆ ಹೋಗುವವರು ಕಟೀಲು ದೇವಿಯ ಫೋಟೋ ಹಿಡಿದುಕೊಂಡು ಹೋಗುತ್ತಾರೆ. ಜಗತ್ತಿನಲ್ಲಿ  ಎಲ್ಲೇ ಹೋದರೂ ಎಷ್ಟೇ ದೊಡ್ಡವರಾದರೂ ಕಟೀಲು ತಾಯಿಯ  ಫೋಟೋ ಜೊತೆಗಿಟ್ಟುಕೊಂಡಿರುತ್ತಾರೆ. ಐಶ್ವರ್ಯಾ ರೈ ಮನೆಯಲ್ಲಿ ಕೂಡ ದೇವಿಯ ಫೋಟೋ ಇರುವುದು ಅದಕ್ಕೆ ಸಾಕ್ಷಿ. ಹುಟ್ಟೂರಿನ ನಂಟು ಬಿಟ್ಟು ಹೋಗುವುದಿಲ್ಲ ಅನ್ನುವುದು ಸುಮ್ಮನೆ ಅಲ್ಲ.

-Ad-

Leave Your Comments