ಕೊನೆಗೂ ಕನ್ನಡಿಗರ ಮುಂದೆ ಮಂಡಿಯೂರಿದ ಕೊಲೆಗಾರ ಕಟ್ಟಪ್ಪ..!

ಕೊಲೆ ಮಾಡಿದ ಕಾರಣ ತಿಳಿಯಲು ಇಡೀ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ಆದರೆ ಕಾರಣ ಗೊತ್ತಾಗುವ ಮೊದಲೇ ಕೊಲೆಗಾರ ಕಟ್ಟಪ್ಪ ಕನ್ನಡಿಗರ ಮುಂದೆ ಮಂಡಿಯೂರಿ ತಪ್ಪಾಯ್ತು ಎಂದು ಕ್ಷಮಾಪಣೆ ಕೇಳಿಕೊಂಡಿದ್ದಾರೆ..
ಇದೆಲ್ಲಾ ನಡೆಯಲು ಬರೋಬ್ಬರಿ 9  ವರ್ಷಗಳೇ ಸವೆದು ಹೋಗಿವೆ.. ಆದ್ರೆ ಇದೀಗ ಕನ್ನಡಿಗರು ಸಿಡಿದ್ದೆದ್ದ ಕಾರಣಕ್ಕೆ ಕಟ್ಟಪ್ಪನಿಗೆ ಶಿಕ್ಷೆಯಾಗಿದೆ.. ಅಂಧಾಭಿನದಲ್ಲಿ ಮಾತನಾಡಿದ್ದಕ್ಕೆ ಇದೀಗ ಕ್ಷಮಾಪಣೆ ಕೇಳಿದ್ದಾರೆ.
ಇದೆಲ್ಲಾ ಏನು..? ಅಪರಾಧ ಯಾವುದು ಅಂತ ಚಿಂತೆ ಮಾಡ್ತಿದ್ದೀರಾ..? ಅದೇ ರೀ ತೆಲುಗಿನ ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿ ಹತ್ಯೆಮಾಡಿ ಕುತೂಹಲಕ್ಕೆ ಕಾರಣವಾಗಿದ್ದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ವಿಚಾರ.
ಕಾವೇರಿ ವಿಚಾರವಾಗಿ ಟೀಕೆ ಮಾಡಿ ಮರೆತು ಹೋಗಿದ್ದ ವಿಚಾರ ಇದೀಗ ಬಾಹುಬಲಿ 2 ರಿಲೀಸ್ ಟೈಮಲ್ಲಿ ಹೊಗೆಯಾಡುತ್ತಿತ್ತು. ಯಾವಾಗ ಸಿನಿಮಾ ಬಿಡುಗಡೆಗೆ ಬಿಡಲ್ಲ ಅಂತ ಕನ್ನಡ ಹೋರಾಟಗಾರರು ಪಟ್ಟು ಹಿಡಿದ್ರೋ ಆಗ ಸ್ವತಃ ರಾಜಮೌಳಿ ಕ್ಷಮಿಸಿಬಿಡಿ, ಸಿನಿಮಾಗೆ ತೊಂದರೆ ಮಾಡಬೇಡಿ ಎಂದಿದ್ರು.. ಅದಕ್ಕೂ ಕ್ಯಾರೆ ಎನ್ನದ  ಕನ್ನಡಿಗರು  ಕಟ್ಟಪ್ಪನ್ನಿಂದಲೇ ಕ್ಷಮೆಯಾಚಿಸಬೇಕು ಎಂದಾಗ ವಿಧಿಯಿಲ್ಲದೆ ಕಟ್ಟಪ್ಪನೇ ಕ್ಷಮೆಯಾಚಿಸಿದ್ದಾರೆ.. ಕೊನೆಗೂ ಬಾಹುಬಲಿ ಹಂತಕ ಕಟ್ಟಪ್ಪನಿಗೆ ಕನ್ನಡಿಗರ ಮುಂದೆ ಶಿಕ್ಷೆಯಾಗಿದೆ..
ನಾಗೇಶ್, ಸುಂಡಳ್ಳಿ
-Ad-

Leave Your Comments