ಮತ್ತೆ ಬಂದ .. ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ..?

ಬಾಹುಬಲಿ ದಿ ಕನ್‍ಕ್ಲೂಷನ್ ಸಿನಿಮಾ ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ… ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ..? ಅನ್ನೊ ಪ್ರಶ್ನೆಗುತ್ತರ ಕೂಡ ಅಂದೇ ರಿವೀಲ್ ಆಗುತ್ತೆ.. ಅಲ್ಲಿವರೆಗೂ ಈ ಪ್ರಶ್ನೆಗುತ್ತರ ಯಾರಿಗೂ ತಿಳಿಯದಂತೆ ನೋಡಿಕೊಳ್ತಿದೆ ರಾಜಮೌಳಿ ಅಂಡ್ ಟೀಮ್.. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಸೆಕ್ಯೂರಿಟಿ ತಗೊಂಡು ಚಿತ್ರದ ಶೂಟಿಂಗ್ ನಡೆಸಲಾಗ್ತಿದೆ… ನಿರ್ದೇಶಕರ ಅನುಮತಿ ಇಲ್ಲದೇ ಶೂಟಿಂಗ್ ಸೆಟ್ಟಿಗೆ ಯಾರೊಬ್ಬರಿಗೂ ಪ್ರವೇಶವಿಲ್ಲವಂತೆ…

ಕಳೆದ ವರ್ಷ ತೆರೆಕಂಡ ಬಾಹುಬಲಿ ದಿ ಬಿಗಿನಿಂಗ್ ಚಿತ್ರದ ಮುಂದುವರೆದ ಭಾಗ ಬಾಹುಬಲಿ ದಿ ಕನ್‍ಕ್ಲೂಷನ್.. ಪ್ರೀಕ್ವೆಲ್‍ಗಿಂತ ಸೀಕ್ವೆಲನ್ನ ಅದ್ದೂರಿಯಾಗಿ ತೆರೆಗೆ ತರೋ ಪ್ರಯತ್ನ ನಡೀತಿದೆ..ಈ ಚಿತ್ರದ ಕುರಿತು ಸಣ್ಣ ಮಾಹಿತಿ ಸೋರಿಕೆಯಾದ್ರೂ ಅದಕ್ಕೆ ರೆಕ್ಕೆಪುಕ್ಕ ಕಟ್ಟಿ ದೊಡ್ಡದಾಗಿ ಪ್ರಚಾರ ಮಾಡಲಾಗುತ್ತದೆ.. ಇದೇ ಕಾರಣಕ್ಕೆ ಭಾರಿ ಭದ್ರತೆ ನಡುವೆ ಚಿತ್ರದ ಶೂಟಿಂಗ್ ನಡೆಸಲಾಗ್ತಿದೆ.. ಅದ್ಯಾವ ಮಟ್ಟಿಗಂದ್ರೆ ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ ಅನ್ನೋ ಸೀನ್ ಶೂಟ್ ಮಾಡ್ಬೇಕಾದ್ರೆ ಕೇವಲ ಮೂರುಮಂದಿಯಷ್ಟೆ ಇದ್ರಂತೆ….

ಮೊದಲ ಪಾರ್ಟ್‍ಗಿಂತ ಬಾಹುಬಲಿ ಎರಡನೇ ಪಾರ್ಟ್ ಬಗ್ಗೆ ಕುತೂಹಲ ಜಾಸ್ತಿಯಿದೆ..ಆ ಕುತೂಹಲವನ್ನ ಕೊನೆವರೆಗೂ ಉಳಿಸಿಕೊಳ್ಳೊ ಪ್ರಯತ್ನದಲ್ಲಿದೆ ಚಿತ್ರತಂಡ.. ಬಾಹುಬಲಿ ದಿ ಕನ್‍ಕ್ಲೂಷನ್ ಪ್ರೀ ರಿಲೀಸ್ ಬಿಸಿನೆಸ್ 300ಕೋಟಿ ದಾಟೋ ಸಾಧ್ಯತೆಗಳಿವೆ.. ಈಗಾಗಲೇ ತಮಿಳು ರೈಟ್ಸ್ 50ಕೋಟಿ, ಓವರ್‍ಸೀಸ್ ಹಕ್ಕುಗಳು 37ಕೋಟಿಗೆ ಸೇಲಾಗಿದೆಯಂತೆ…. ಇನ್ನೂ ಆಂಧ್ರದಲ್ಲೂ ಭಾರಿ ಬೆಲೆಗೆ ಚಿತ್ರದ ಹಕ್ಕುಗಳು ಮಾರಾಟವಾಗೊ ಸಾಧ್ಯತೆಯಿದ್ದು, ಒಂದು ಅಂದಾಜಿನ ಪ್ರಕಾರ ಬಾಹುಬಲಿ 2000ಕೋಟಿ ಗಳಿಸುತ್ತೆ ಅನ್ನಲಾಗ್ತಿದೆ…

ಬಾಹುಬಲಿ 2 ಚಿತ್ರದ ಕೀ ಸೀಕ್ವೆನ್ಸ್‍ಗಳನ್ನ ಚಿತ್ರೀಕರಿಸೋವಾಗ ಯಾರೊಬ್ಬರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲವಂತೆ… ಕೆಲವೊಮ್ಮೆ ಬರೀ ಕ್ಯಾಮರಾಮನ್ ಸೆಂಥಿಲ್ ಕುಮಾರ್, ರಾಜಮೌಳಿ ಮತ್ತು ಆ ಸೀನ್‍ನಲ್ಲಿರೋ ಕಲಾವಿದರನ್ನ ಹೊರತುಪಡಿಸಿ ಮತ್ಯಾರಿಗೂ ಅಲ್ಲಿ ಕಾಲಿಡೋಕೆ ಬಿಡ್ತಿಲ್ಲವಂತೆ.. ಯಾಕಂದ್ರೆ ಚೂರು ಮಾಹಿತಿ ಲೀಕಾದ್ರೂ ಅದು ಚಿತ್ರದ ಕಲೆಕ್ಷ್ ಮೇಲೆ, ದಾಖಲೆಗಳ ಮೇಲೆ ಪ್ರಭಾವ ಬೀರಲಿದೆ…ಇದೇ ಕಾರಣಕ್ಕೆ ಇಷ್ಟೊಂದು ಸರ್ಕಸ್ ಮಾಡ್ತಿದ್ದಾರೆ ನಿರ್ದೇಶಕ ರಾಜಮೌಳಿ…

ಬಹಳ ಮುಖ್ಯವಾದ ಸೀಕ್ವೆನ್ಸ್‍ಗಳ ಶೂಟಿಂಗ್ ಟೈಮ್ನಲ್ಲಿ ನೀರು ತಂದುಕೊಡೊರನ್ನಾಗ್ಲಿ, ಟಚ್‍ಅಪ್ ಬಾಯ್ ಆಗ್ಲಿ, ಬೇಕಾಗಿರೋ ಟೆಕ್ನೀಷಿಯನ್ಸ್‍ಗಳೇ ಆಗ್ಲೀ ಹೀಗೆ ಯಾರೊಬ್ಬರನ್ನೂ ಹತ್ತಿರ ಬರದಂತೆ ತಾವೇ ಎಲ್ಲವನ್ನ ವ್ಯವಸ್ಥೆ ಮಾಡಿಕೊಂಡು ಶೂಟಿಂಗ್ ನಡೆಸ್ತಿದ್ದಾರಂತೆ… ಅಷ್ಟರಮಟ್ಟಿಗೆ ಮುತುವರ್ಜಿ ವಹಿಸಿ ಬಾಹುಬಲಿ ಚಿತ್ರದ ಒಂದೊಂದು ದೃಶ್ಯವನ್ನೂ ಸೆರೆಯಿಡಿಯಲಾಗ್ತಿದೆ.. ಥಿಯೇಟರ್‍ಗೆ ಬರೋವರ್ಗೂ ಸಿನಿಮಾದ ಯಾವುದೇ ವಿಚಾರ ಹೊರಬರಬಾರದು ಅನ್ನೋದಕ್ಕೆ ಇಷ್ಟೆಲ್ಲಾ ರಹಸ್ಯ ಕಾಪಾಡಿಕೊಳ್ಳಲಾಗ್ತಿದೆ….

ನಿರ್ದೇಶಕರ ಅನುಮತಿ ಇಲ್ಲದೇ ಚಿತ್ರೀಕರಣದ ಸ್ಥಳಕ್ಕೆ ಒಂದು ನೊಣ ಕೂಡ ಬರುವಂತಿಲ್ಲ..ಸಿನಿಮಾಗೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋಗಳು ಲೀಕ್ ಆಗಬಹುದು ಅನ್ನೋ ಕಾರಣಕ್ಕೆ ಮೊಬೈಲನ್ನ ಅಲೋ ಮಾಡ್ತಿಲ್ಲವಂತೆ.. ಚಿತ್ರದಲ್ಲಿ ನಟಿಸ್ತಿರೋ ಕಲಾವಿದರಿಗೂ, ತಂತ್ರಜ್ಞರಿಗೆ ಯಾವುದೇ ಮಾಹಿತಿ ಸೋರಿಕೆ ಮಾಡದಂತೆ ಎಚ್ಚರಿಸಿದ್ದಾರಂತೆ ರಾಜಮೌಳಿ.. ಇಷ್ಟೆಲ್ಲಾ ಸೆಕ್ಯೂರಿಟಿ ಮಧ್ಯೆ ತಯಾರಾಗ್ತಿರೋ ಸಿನಿಮಾ ಥಿಯೇಟರ್‍ಗೆ ಬರೋವರ್ಗೂ ಇದೇ ಕುತೂಹಲವನ್ನ ಉಳಿಸಿಕೊಳ್ಳತ್ತಾ ನೋಡ್ಬೇಕು….

-Ad-

Leave Your Comments