“ಕವಲು ದಾರಿ “ಯಿಂದ ಬಂತು ಪುಟಾಣಿ ಟೀಸರ್ !

ಕವಲುದಾರಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡ್ತಿರೋ ಹೊಸ ಸಿನಿಮಾ . ಗೋದಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ನಿರ್ದೇಶನವಿದೆ. ರಿಷಿ ನಾಯಕ . ರೋಶಿನಿ ಪ್ರಕಾಶ್ ನಾಯಕಿಯಾಗಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳನ್ನ ಮಾಡಿ ಹೆಚ್ಚು ಜನರ ಮನಸ್ಸನ್ನ  ಮುಟ್ಟೋ ಇರಾದೆಯಲ್ಲಿರೋ ಪುನೀತ್ ಪಿಆರ್ ಕೆ ಅಂದ್ರೆ ತನ್ನಮ್ಮ ಪಾರ್ವತಮ್ಮ ರಾಜಕುಮಾರ್ ಹೆಸರಲ್ಲಿ ಪ್ರೊಡಕ್ಷನ್ ಪ್ರಾರಂಭಿಸಿದ್ದಾರೆ. ಅದರ ಮೊದಲ ಕೂಸೇ “ಕವಲು ದಾರಿ “. ಈ ಸಿನಿಮಾದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಿಆರ್ ಕೆ ಪ್ರೊಡಕ್ಷನ್ ನಿಂದ ಬಿಡುಗಡೆಯಾಗಿರೋ ಕವಲು ದಾರಿಯ ಪುಟ್ಟ ಟೀಸರ್ ಗುಟ್ಟು ಬಿಡದೆ ಪ್ರತೀ ದೃಶ್ಯಕ್ಕೂ ಕೂತೂಹಲ ಕೆರಳಿಸುವಂತಿದೆ . ನೀವೂ ಒಮ್ಮೆ ನೋಡಿ .

ಲಿಂಕ್ ಇಲ್ಲಿದೆ . https://www.facebook.com/ciniadda1/

-Ad-

Leave Your Comments