ಕವಿತಾ ಲಂಕೇಶ್ ಹೊಸ ಚಿತ್ರಕ್ಕೆ ರಾಷ್ಟ್ರಪತಿ ಮೊಮ್ಮಗನ ಸಾಥ್ !

ಕರಿಯ ಕಣ್ಬಿಟ್ಟ ಚಿತ್ರದ ನಂತರ ಮತ್ತೊಂದು ಚಿತ್ರಕ್ಕೆ  ಕಣ್ಣು ನೆಟ್ಟಿದ್ದಾರೆ ನಿರ್ದೇಶಕಿ ಕವಿತಾ ಲಂಕೇಶ್ . ಕಥೆ -ಚಿತ್ರಕಥೆಯ ಹೊಣೆಯೂ ಕವಿತಾ ಲಂಕೇಶ್ ಮೇಲಿದೆ. ಇನ್ನೂ  ನಾಮಕರಣವಾಗದ ಸಿನಿಮಾವನ್ನ  ಸುಧೀಕ್ಷಾ ಮೂವೀಸ್ ಲಾಂಛನದ ಅಡಿಯಲ್ಲಿ ಸುಬ್ರಮಣ್ಯ ಶರ್ಮಾ ಜಿ ನಿರ್ಮಾಣ  ಮಾಡಲಿದ್ದಾರೆ.

ಕಲಾವಿದರು ?

ನಂ.18/7 ಚಿತ್ರದಲ್ಲಿ ನಟಿಸಿದ್ದ ನಿರಂಜನ್ ಕುಮಾರ್ ಶೆಟ್ಟಿ  ಚಿತ್ರದ ನಾಯಕ. ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಕಾರ್ಯ ಜಾರಿಯಲ್ಲಿದೆ.

ಚಿತ್ರೀಕರಣ ಎಲ್ಲಿ? ಯಾವಾಗಿಂದ ?

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿರಲಿದ್ದು,ಬೆಂಗಳೂರು,ಉತ್ತರ ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಯಲಿದೆ.

ಹೊಸ ಕನಸು

ನಿರ್ಮಾಪಕ ಸುಬ್ರಮಣ್ಯ ಶರ್ಮಾ ಜಿ.  ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ರ ಮೊಮ್ಮಗ. ಭಾರೀ ಸಿನಿಮಾ ಪ್ರೀತಿ ಹೊಂದಿರುವವರು. ವರ್ಷಕ್ಕೊಂದು ಒಳ್ಳೆಯ ಚಿತ್ರ ಮಾಡುವ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸದಭಿರುಚಿಯ ಸಿನಿಮಾಗಳನ್ನು  ಕೊಟ್ಟಿರುವ ಕವಿತಾ ಲಂಕೇಶ್  ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಕ್ರಾತಿಯ ಹೊತ್ತಲ್ಲಿ ಅವರಿಗೆ, ಚಿತ್ರಕ್ಕೆ ಶುಭ ಹಾರೈಸೋಣ.

 

-Ad-

Leave Your Comments