”ಲಕ್ಷ್ಮೀ ಬಾರಮ್ಮ” ಬಿಗ್ ಬಾಸ್ ಗೆ ಹೋಗುತ್ತಿಲ್ಲ ಎಂದಿದ್ದೇಕೆ?

ಬಿಗ್ ಬಾಸ್ ಸೀಸನ್ 5 ನಾಳೆಯಿಂದ ಪ್ರಾರಂಭವಾಗುತ್ತಿದೆ. ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಅನ್ನುವ ಸುದ್ದಿಗಳಿಗೇನು ಬರವಿಲ್ಲ. ಹಿರಿತೆರೆ-ಕಿರುತೆರೆಯೆನ್ನದೆ ಫೇಮಸ್ ಆಗಿರೊ ಹಲವು ಜನರ ಫೋಟೋ ಬಳಸಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಇವರು ಒಬ್ಬರು ಅಂತ ಬಿಂಬಿಸಲಾಗುತ್ತಿದೆ. ಹಾಗೆ ಸುಖಾಸುಮ್ಮನೆ ಬಿಂಬಿತವಾದವರ ಸಾಲಿಗೆ ಲಕ್ಶ್ಮೀ ಬಾರಮ್ಮ ಖ್ಯಾತಿಯ ಕವಿತ ಕೂಡ ಸೇರಿದ್ದಾರೆ.

ನಾನವಳಲ್ಲ

ಬಿಗ್ ಬಾಸ್ ಗೆ ಕವಿತ ಸುದ್ದಿ ವೈರಲ್ ಆಗಿದ್ದು ನೋಡಿ ಸ್ವತಃ ಕವಿತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಾನು ಈ ಬಾರಿಯ ಬಿಗ್ ಬಾಸ್ ಗೆ ಯಾಕೆ ಹೋಗುತ್ತಿಲ್ಲವೆಂದು ಹೇಳಿಕೊಂಡಿದ್ದಾರೆ.

”ನಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ. ಕಾರಣ ಅವರು ನನ್ನನ್ನು ಸ್ಪರ್ಧಿಯಾಗಿ ಬನ್ನಿ ಅನ್ನೋ ಆಹ್ವಾನವೇನು ಕೊಟ್ಟಿಲ್ಲ. ಈಗ ವೈರಲ್ ಆಗಿರುವ ಸುದ್ದಿಯಲ್ಲಿ ಹುರುಳಿಲ್ಲ. ಹಾಗಾಗಿ ಇಲ್ಲಿ ಸ್ಪóಷ್ಟೀಕರಣ ನೀಡುತ್ತಿದ್ದೇನೆ. ನಾನೀಗ ಝೀ ಕನ್ನಡದ ಹೊಸ ಪ್ರಾಜೆಕ್ಟ್ ವಿದ್ಯಾವಿನಾಯಕದಲ್ಲಿ ನಿರತಳಾಗಿದ್ದೇನೆ. ಒಂದು ಕಡೆ ಒಪ್ಪಿಕೊಂಡ ಮೇಲೆ ಮಾತು ಮುರಿದು ಮತ್ತೊಂದು ಕಡೆ ಹೋಗುವುದು ನೈತಿಕವಾಗಿ ಸರಿಯಲ್ಲ”

ಅಂದಹಾಗೆ ಕವಿತ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೊತೆಗೆ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲೂ ನಟಿಸಿದ್ದರು.

ಬಿಗ್ ಬಾಸ್ ವಿಚಾರ ಹೇಳೋದಾದರೆ ಬಿಗ್ ಮನೆಯ ಬಾಗಿಲು ತೆರೆಯುವ ಸಮಯ ಇದೇ ಅಕ್ಟೋಬರ್ ಸಂಜೆ 6.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತೀ ರಾತ್ರಿ ಎಂಟು ಗಂಟೆಗೆ ಸ್ಪರ್ಧಿಗಳ ಅಟ-ಹುಡುಗಾಟ-ಹುಡುಕಾಟಗಳನ್ನ ನೋಡಬಹುದು.

-Ad-

Leave Your Comments