ಕಿಚ್ಚ ಬಿಟ್ಟ ಕೆಂಪೇಗೌಡ -2 ಕಾಮಿಡಿ ಕಿಂಗ್ ಪಾಲಾಯ್ತು.

ಖಡಕ್ ಡೈಲಾಗ್ಸ್ ಮೂಲಕ ಹಿಟ್ ಸಿನಿಮಾ ಕೊಟ್ಟ ಕೆಂಪೇಗೌಡ ಅರ್ಥಾತ್ ಕಿಚ್ಚ ಸುದೀಪ್ ಮತ್ತೆ ಕೆಂಪೇಗೌಡ-2 ಮಾಡ್ತಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ  ಕೆಂಪೇಗೌಡ-2 ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ. ಹಾಗಾದ್ರೆ ಕಿಚ್ಚ ಎಲ್ಲಿ? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ

ಕೆಂಪೇಗೌಡ-2 ಸಿನಿಮಾ ಬರ್ತಿರೋದಂತು. ನಿಜ ಆದ್ರೆ ಇದರಲ್ಲಿ ಕಿಚ್ಚನ ಬದಲು ಕಾಮಿಡಿ ಕಿಂಗ್ ಕೋಮಲ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಂಪೇಗೌಡ – 2 ಸಿನಿಮಾದ ಹೀರೋ ಬೇರೆ ಯಾರೂ ಅಲ್ಲ .  ನಟ ಕೋಮಲ್ ಟ್ರೇಲರ್ ನಲ್ಲಿ ಪೊಲೀಸ್ ಲುಕ್ ನಿಂದ ಗುನ್ನ ಕೊಡ್ತಿರೋ ದೃಶ್ಯಗಳಿವೆ.  ಕೋಮಲ್ ಇದಕ್ಕಂತಲೇ ತೂಕ ಇಳಿಸಿಕೊಂಡು ಖದರ್ ಆಗಿಯೇ ಕಾಣಿಸ್ತಿದ್ದಾರೆ.

ಸುದೀಪ್ ಅಭಿಮಾನಿಗಳಿಗಂತೂ  ಇದು ಶಾಕಿಂಗ್ ನ್ಯೂಸ್ !  ಇಷ್ಟು ದಿನ ಕಿಚ್ಚ ಮಾಡಲ್ಲ ಅಂತಿದ್ದ ಸುದ್ದಿ ನಿಜವಾಗಿದೆ.  ಸಿನಿರಸಿಕರಿಗೆ ಸರ್ಪ್ರೈಸ್ ಎಂಬಂತೆ ‘ಕೆಂಪೇಗೌಡ-2’ ಚಿತ್ರಕ್ಕೆ ಕೋಮಲ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ‘ಕೆಂಪೇಗೌಡ’ನಾಗಿ ಕೋಮಲ್ ಅಬ್ಬರಿಸಿಲಿದ್ದಾರೆ.

ಮೀಸೆ ಬಿಟ್ಟಿರೋರೆಲ್ಲ ಗಂಡಸರಲ್ಲ, ಮೀಸೆ ತಿರುಗಿಸೋರೆಲ್ಲ ಕೆಂಪೇಗೌಡ ಅಲ್ಲ” ಎಂಬ ಖಡಕ್ ಡೈಲಾಗ್ ನಿಂದ ಕೋಮಲ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ತಮಿಳಿನ ಬ್ಲಾಕ್ ಬಾಸ್ಟರ್ ಮೂವಿ ಸಿಂಗಂ-2 ನ ರೀಮೇಕ್ ಕೆಂಪೇಗೌಡ-2 ಅಂತಿದ್ದಾರೆ ಸಿನಿಮಂದಿ. ಕೆಂಪೇಗೌಡ ನಿರ್ದೇಶಕ ಶಂಕರೇಗೌಡ ಅವರೇ ಇದಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ.

-Ad-

1 COMMENT

  1. ಎಲ್ಲಾ ಸರಿ… ಶಂಕರೇ ಗೌಡ ಕೆಂಪೇಗೌಡ ಚಿತ್ರಕ್ಕೆ ದುಡ್ಡು ಹಾಕಿದ್ದು ನಿಜ ಆದ್ರೆ ಆಕ್ಷನ್ ಕಟ್ ಹೇಳಿದ್ರು?

    ಆ ಸಿನಿಮಾಗೆ ಸುದೀಪ್ ಅವರೇ ನಿರ್ದೇಶಕರು…

    ತೀರಾ ನಿರ್ದೇಶಕರೇ ಯಾರೆಂದು ಗೊತ್ತಿಲ್ದೆ ಬರೆಯೋ ನಿಮಗೆ ಸಿನಿಮಾ ಬಗ್ಗೆಯೂ ಸರಿಯಾದ ಮಾಹಿತಿ ಗೊತ್ತಿರಲ್ಲ ಅಂದುಕೊಂಡುಬಿಡುತ್ತಾರೆ ಜನ, ಹುಷಾರು….

Leave Your Comments