ಪ್ರೀತಿಸು ಎಂದು ನಟಿ ಹಿಂದೆ ಬಿದ್ದವ ಈಗ ಅರೆಸ್ಟ್!

ಕೇರಳ ಮೂಲದ ಖ್ಯಾತ ನಟಿ ರೆಬಾ ಮೋನಿಕಾ ಜಾನ್ ಅವರ ಹಿಂದೆ ಬಿದ್ದು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

‘ಜಾಕೋಬಿಂತೆ ಸ್ವರ್ಗರಾಜ್ಯಂ’ ಎಂಬ ಚಿತ್ರದಲ್ಲಿ ನಟಿಸಿದ್ದ ರೆಬಾ ಮೋನಿಕಾ ಅವರು ಈ ಯುವಕನ ಕಿರುಕುಳ ತಾಳಲಾರದೇ ಕೋರಮಂಗಲದಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು 28 ವರ್ಷದ ಬಸವನಗುಡಿಯಲ್ಲಿರುವ ಖಾಸಗಿ ಕಂಪನಿ ಉದ್ಯೋಗಿ ಫ್ರಾಂಕ್ಲಿನ್ ವಿಸಿಲ್ ಎಂಬಾತನನ್ನು ಬಂಧಿಸಿದ್ದಾರೆ.

ಇದರಿಂದ ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಾ ಹುಡುಗಿಯರ ಹಿಂದೆ ಬೇತಾಳದಂತೆ ತಿರುಗುವವರಿಗೆ ಎಚ್ಚರಿಕೆ ಗಂಟೆಯಾಗಿದೆ ಈ ಪ್ರಕರಣ.

-Ad-

Leave Your Comments