ಬಾಹುಬಲಿಯನ್ನು ಮೀರಿಸಲಿದೆಯಾ ಕೆಜಿಎಫ್ !?

ರಾಕಿಂಗ್ ಸ್ಟಾರ್ ಯಶ್ ಕನ್ನಡದ ಬಹುಬೇಡಿಕೆಯ ನಟ. ಪಾತ್ರ ಯಾವುದೇ ಇರಲಿ ತೆರೆಯ ಚುರುಕಾಗಿ ಕಾಣುತ್ತಾ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಅಪ್ಪಟ ಪ್ರತಿಭೆ . ಇದೀಗ ಯಶ್ ಅಭಿನಯದ ಮಹತ್ವಾಕಾಂಕ್ಷಿ ಚಿತ್ರ ಕೆಜಿಎಫ್ ಐದು ಭಾಷೆಗಳಲ್ಲಿ ಎರಡು ಭಾಗಗಳಾಗಿ ಬರಲು ಸಿದ್ಧತೆ ನಡೆಯುತ್ತಿದೆ .

ಹೊಸ ಇತಿಹಾಸ !!

ಹೊಸ ವಿಷಯ ಏನೆಂದರೆ ಕೆಜಿಎಫ್ ಚಿತ್ರದ ಆಡಿಯೋ ಹಕ್ಕಿಗಾಗಿ ದೊಡ್ಡ ದೊಡ್ಡ ಕಂಪನಿಗಳು ತಾಮುಂದು ನಾಮುಂದು ಅಂತ ಮುಗಿಬೀಳುತ್ತಿವೆ . ಹಕ್ಕಿಗಾಗಿ ಹಿಂದೆಂದೂ ಕಾಣದ ಬೇಡಿಕೆ ಬಂದಿದೆ . ಕೆಜಿಎಫ್ ಬಾಹುಬಲಿಯಂತೆ ಪ್ರೇಕ್ಷಕರನ್ನು ಸೆಳೆದು , ಭರ್ಜರಿ ಸಕ್ಸಸ್ ಕಂಡು ಹಣ ಬಾಚುವುದು ದಿಟ ಎನ್ನುವುದು ಸಿನಿಮಾ ವ್ಯಾಪಾರಿಗಳ ಲೆಕ್ಕಾಚಾರ .ಕನ್ನಡ ಅಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಯಶ್ ಗೆ ಅಭಿಮಾನಿ ಬಳಗವಿದೆ . ಯಶ್ ರ ಕೆಲವು ಸಿನಿಮಾಗಳು ಬೋಜ್ ಪುರಿ ಹಾಯಾಗು ಹಿಂದಿಗೆ ಡಬ್ ಆಗಿ ಯಶ ಕಂಡಿವೆ. ಅಭಿಮಾನಿಗಳಿಗೂ ಹತ್ತಿರವಾಗಿವೆ .

ಅಂತಿಂಥ ಚಿತ್ರವಲ್ಲ 

ಈ ಹಿಂದೆ ಸ್ವತಃ ಯಶ್ ciniadda.com ಕೊಟ್ಟ ಮಾಹಿತಿ ಪ್ರಕಾರ ಕೆಜಿಎಫ್ ಇಡೀ ಭಾರತೀಯ ಚಿತ್ರರಂಗ ಅಚ್ಚರಿ ಪಡುವ ರೀತಿಯಲ್ಲಿ ಮೂಡಿಬರುತ್ತಿದೆಯಂತೆ . ಕಥೆ ಕೂಡ ಅದ್ಭುತವಾಗಿದೆ. ಯಶ್ ೭೦-೮೦ರ ದಶಕ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಪಾತ್ರದ ಹೆಸರು ರಾಕಿ.

ನಿರ್ಮಾಣ ಕೂಡ ಅದ್ದೂರಿಯಾಗಿದೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಕೆಜಿಎಫ್ಗೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನವಿದೆ. ಶ್ರೀನಿಧಿ ಶೆಟ್ಟಿ ನಾಯಕಿ .

 

-Ad-

Leave Your Comments