ಕೆ.ಜಿ.ಎಫ್ ಯಶ್ “ಚಿಂದಿ” ಲುಕ್

ಕೆಜಿಎಫ್ ಎಂದರೆ ಸಾಕು ಮೊದಲು ನೆನಪಿಗೆ ಬರುವುದು ಚಿನ್ನದ ಗಣಿ ಅನ್ನೋದು. ಆದರೆ ಆ ಚಿನ್ನದ ಗಣಿ ಹೇಗಿತ್ತು?  ಅಲ್ಲಿ ಕೆಲಸ ಮಾಡುವವರು ಹೇಗಿದ್ದರು ಅನ್ನುವ ಚಿತ್ರಣ ಬಹುತೇಕರಿಗೆ ಗೊತ್ತಿಲ್ಲ.ಬಹುಶಃ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ಚಿನ್ನದ ಗಣಿಯ ಕತೆಯನ್ನೇ ಹೇಳುತ್ತದೆ ಅನ್ನಿಸುತ್ತದೆ. ಅದಕ್ಕೆ ಸಾಕ್ಷಿಯೇ ಈ ಫಸ್ಟ್ ಲುಕ್!!

ಇಲ್ಲಿ ಹಿನ್ನೆಲೆಯಲ್ಲಿ ಖೈದಿಗಳಂತೆ ಸಾಲಾಗಿ ನೂರಾರು ಮಂದಿ ನಿಂತಿದ್ದಾರೆ. ಅವರ ಎದುರಿಗೆ ಅವರನ್ನು ಕಾಪಾಡಲು ಬಂದಂತೆ ಯಶ್ ನಿಂತಿದ್ದಾರೆ. ಯಶ್ ಕಣ್ಣಲ್ಲಿ ಗೆಲ್ಲುವ ವಿಶ್ವಾಸವಿದೆ. ಅವರ ಲುಕ್‌ನಲ್ಲಿ ಒಳಗೊಳಗೇ ಕುದಿವ  ಆಕ್ರೋಶ,ಗಟ್ಟಿತನದ ದಿಟ್ಟನಿಲುವು  ಎದ್ದುಕಾಣುತ್ತಿದೆ . ಒಟ್ಟಾರೆ ಕೆ.ಜಿ.ಎಫ್ ಚಿತ್ರದ ಫಸ್ಟ್ ಲುಕ್ಕೇ ಒಂದು ಕತೆ ಹೇಳುವಂತಿದೆ. ಹಾಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ಹೆಜ್ಜೆಯಲ್ಲೇ ಗೆಲುವಿನ ಸೂಚನೆ ಕೊಟ್ಟಿದ್ದಾರೆ ಅನ್ನಬಹುದು .

ಇದುವರೆಗೆ ಫಸ್ಟ್ ಲುಕ್ ಅಂದ್ರೆ ಹೀರೋನ ಖದರ್ ತೋರಿಸುವ ಹಾಗೆ ಇರುತ್ತಿತ್ತು. ಇಲ್ಲದಿದ್ದರೆ ಹೀರೋ, ಹೀರೋಯಿನ್ ಇಬ್ಬರ ಸ್ಟೈಲ್ ಅನ್ನು ತೋರಿಸುವ ಕೆಲಸ ಫಸ್ಟ್ ಲುಕ್ ಮಾಡುತ್ತಿತ್ತು. ಆದರೆ ಕೆ.ಜಿ.ಎಫ್ ಫಸ್ಟ್ ಲುಕ್ ಮಾತ್ರ ಅವೆಲ್ಲಕ್ಕಿಂತ ಭಿನ್ನವಾಗಿದೆ ಮತ್ತು ಇಂಟರೆಸ್ಟಿಂಗ್ ಆಗಿದೆ.

ನಿರ್ದೇಶಕ ಪ್ರಶಾಂತ್ ನೀಲ್ ತನ್ನ ಮೊದಲ ಸಿನಿಮಾ ಉಗ್ರಂನಿಂದಲೇ ಭರವಸೆ ಹುಟ್ಟಿಸಿದವರು. ಜನ ಅವರ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಅವರು ಸುಳ್ಳು ಮಾಡಲಿಕ್ಕಿಲ್ಲ ಅನ್ನುವುದನ್ನು ಈ ಫಸ್ಟ್ ಲುಕ್ ಸಾಬೀತು ಮಾಡಿದೆ.

-Ad-

Leave Your Comments