ಯಶ್ ಅಭಿಮಾನಿಗಳು ಕೆಜಿಎಫ್ ಗಾಗಿ ಇನ್ನೆಷ್ಟು ದಿನ ಕಾಯಬೇಕು ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಈ ವರುಷ ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿರುವ ಕೆಜಿಎಫ್ ವರುಷದ ಕೊನೆಯಲ್ಲಿ ಬರಲಿದೆ ಅನ್ನೋ ಸುದ್ದಿಯಿತ್ತು. ಅಭಿಮಾನಿಗಳು ಸೆಲೆಬ್ರೆಷನ್ಗೆ ಸಿದ್ಧವಾಗಿದ್ದರು. ಆದರೆ ಅವರಿಗೀಗ ನಿರಾಸೆಯಾಗಿದೆ.

ಬೇರೆ ಬೇರೆ ಭಾಷೆಗಳಲ್ಲಿ ಬರಲು ಬಹಳಷ್ಟು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಾರಣವಾದರೆ  ಚಿತ್ರೀಕರಣವಿನ್ನು ಬಾಕಿ ಇರುವುದು ಮತ್ತೊಂದು ಕಾರಣವಾಗಿದೆ . ಬಹುಕೋಟಿ ವೆಚ್ಚ ಇರುವುದರಿಂದ ತಯಾರಿಯೂ ಜೋರಾಗೆ ನಡೆದಿದೆ ಎನ್ನಲಾಗುತ್ತಿದೆ.

ಈ ವರುಷದಲ್ಲಿ  ಯಶ್ ಅಭಿನಯದ ಯಾವ ಚಿತ್ರವೂ ತೆರೆಕಾಣುತ್ತಿಲ್ಲ. ಜೊತೆಗೆ ಯಶ್ ಕೂಡ ಕೆಜಿಎಫ್ ನಲ್ಲೇ ಸಂಪೂರ್ಣ ಲೀನವಾಗಿರುವುದಂತೂ ನಿಜ. ಸದ್ಯದ ಮಾಹಿತಿ ಪ್ರಕಾರ ಮುಂದಿನ ಯುಗಾದಿ ಹೊತ್ತಿಗೆ ಕೆಜಿಎಫ್ ಖದರ್ ಏನೆಂಬುದು ಗೊತ್ತಾಗಲಿದೆ.

 

-Ad-

Leave Your Comments