ಹಿಂದಿಯ ಪೌರಾಣಿಕ ಚಿತ್ರದಲ್ಲಿ ಸುದೀಪ್, ಮತ್ತೊಮ್ಮೆ ಬಿಗ್ ಬಿ ಜತೆ ಕಾಣಿಸಿಕೊಳ್ತಾರ ಕಿಚ್ಚ?

ಅನೇಕ ವರ್ಷಗಳ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಹಾಲಿವುಡ್ ನಲ್ಲಿ ಪದಾರ್ಪಣೆ ಮಾಡುತ್ತಿರುವ ಸುದೀಪ್ ಅವರಿಗೆ ಬಾಲಿವುಡ್ ನಲ್ಲಿ ಎರಡೆರಡು ದೊಡ್ಡ ಪ್ರಾಜೆಕ್ಟ್ ಗಳು ಬಂದಿರೋದು ಗಮನಾರ್ಹ.

ಈ ಹಿಂದೆ ರಣ್, ಫೂಂಕ್, ರಕ್ತಚರಿತ್ರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುದೀಪ್, ಈಗ ಅಮಿತಾಬ್ ಬಡಚ್ಚನ್ ಅವರೊಟ್ಟಿಗೆ ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಇನ್ನು ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಚಿತ್ರಕ್ಕೂ ಸುದೀಪ್ ಗೆ ಆಫರ್ ಬಂದಿರುವ ಮಾಹಿತಿಗಳು ಇವೆ. ಸುದೀಪ್ ಅವರು ಬಚ್ಚನ್ ಜತೆ ನಟಿಸಲಿರುವ ಪೌರಾಣಿಕ ಚಿತ್ರಕ್ಕೆ ಕರ್ಣ ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ಹಿಂದಿ, ತಿಳು ಹಾಗೂ ಮಲೆಯಾಲಂ ಭಾಷೆಗಳಲ್ಲಿ ತಯಾರಸಲಾಗುವುದು. ಈ ಚಿತ್ರದಲ್ಲಿ ಬಿಗ್ ಬಿ ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ದುರ್ಯೋದನ ಅಥವಾ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಈಗಾಗಲೇ ದಿ ವಿಲನ್ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಹಾಲಿವುಡ್ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಪೈಲ್ವಾನ್ ಹಾಗೂ ಕೋಟಿಗೊಬ್ಬ-3 ಚಿತ್ರಗಳು ಚಿತ್ರೀಕರಣಕ್ಕೆ ಸಜ್ಜಾಗಿವೆ. ಇವುಗಳ ನಡುವೆ ಸುದೀಪ್ ಈ ಎರಡು ಹಿಂದಿ ಚಿತ್ರಗಳಿಗೆ ಸಮಯ ಒದಗಿಸಲು ಸಾಧ್ಯ ಇದೆಯೇ? ಸಮಯ ಮಾಡಿಕೊಂಡು ಈ ಎರಡು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದು ಸದ್ಯದ ಕುತೂಹಲ.

-Ad-

Leave Your Comments