ಅಂಬಿ ಚಿತ್ರಕ್ಕೆ ಸಾರಥಿಯಾಗ್ತಾರಾ ಕಿಚ್ಚ ?

“ಅಂಬಿಗೆ ವಯಸ್ಸಾಯ್ತು” ಹೀಗಂತ ಯಾರಾದ್ರು ಅಂಬರೀಶ್ ಮುಂದೆ ಹೇಳಿದ್ರೆ ಯಾವನ್ಲ ಅವ್ನು ನಂಗೆ ವಯಸ್ಸಾಯ್ತು ಅನ್ನೋವ್ನು, ಈಗ್ಲೂ ನಂಗೆ ಹುಡ್ಗೀರು ಲೈನ್ ಹೊಡಿತ್ತಾರೆ ಗೊತ್ತಾ ಅಂತ ಅವಾಜ್ ಹಾಕ್ತಾರೆ ನಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್.
ಮತ್ತೆ ಹೀರೋ ಆಗಿ ಮೆರೆಯಲಿರೋ ಅಂಬಿ..!
ಆದ್ರೆ ಇಲ್ಯಾಕೆ ಈ ರೀತಿ ಟೈಟಲ್ ಕೊಟ್ಟಿದ್ದಾರೆ ಅಂತ ತಲೆ ಕೆರ್ಕೊಳಕ್ಕೆ ಹೋಗ್ಬೇಡಿ, ವಿಷಯ ಹೇಳಿಬಿಡ್ತೀವಿ ಕೇಳಿ. ಅಂಬಿಗೆ ವಯಸ್ಸಾಯ್ತು ಅಂತ ಸಿನಿಮಾ ಬರ್ತಿದೆ. ಅದರ ಹೀರೋ ಸ್ವತಃ ಅಂಬರೀಶ್. ಈ ಸಿನಿಮಾ ಅಂಬರೀಶ್ ಅವರ ಜೀವನ ಕಥೆಯನ್ನೇ ಆಧರಿಸಿ ಮೂಡಿ ಬರಲಿರುವ ದೃಶ್ಯಕಾವ್ಯ.
ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಕಿಚ್ಚ..!
ಹೌದು, ನಟ ಅಂಬರೀಶ್ ಪಾಲಿಗೆ ಕಿಚ್ಚ ಸುದೀಪ್ ಮಗನಷ್ಟೇ ಪ್ರಮುಖ. ಈ ಮಾತನ್ನು ಸ್ವತಃ ಅಂಬಿ ದಂಪತಿ ವೇದಿಕೆ ಮೇಲೆ, ಸಾಕಷ್ಟು ಜನರ ಎದುರೇ ಹೇಳಿಕೊಂಡಿದ್ದಾರೆ. ಅಂಬಿಗೆ ವಯಸ್ಸಾಯ್ತು ಅನ್ನೋ ಚಿತ್ರದಲ್ಲಿ ಅಂಬಿ ಜೊತೆಗೆ ಸುದೀಪ್ ಕೂಡ ಬಣ್ಣ ಹಚ್ಚಲಿದ್ದು, ಯಾವ ಪಾತ್ರ, ಏನು ಕತೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಕಿಚ್ಚ ಬ್ಯಾನರ್ ನಲ್ಲೇ ಬರಲಿದೆ ಅಂಬಿ ಚಿತ್ರ..!
ಈಗಾಗಲೇ ನಿರ್ಮಾಣಕ್ಕೂ ಇಳಿದಿರುವ ಕಿಚ್ಚ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ ಬ್ಯಾನರ್ ನಲ್ಲೇ ಅಂಬಿಗೆ ವಯಸ್ಸಾಯ್ತು ಅಂತ ಸಿನಿಮಾ ಮಾಡುತಿದ್ದಾರೆ. ಬಂಡವಾಳ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶಕ್ಕಿಂತ ಮಂಡ್ಯದ ಗಂಡಿನ ಮೇಲಿನ ಅಭಿಮಾನ ಅಂದ್ರೆ ಅತಿಶಯೋಕ್ತಿ ಅನ್ನಿಸಲ್ಲ.
ಚಿತ್ರಕತೆ ಸಿದ್ಧ ಮಾಡ್ತಿದ್ದಾರೆ ನಂದಕಿಶೋರ್..!
ಈಗಾಗಲೇ ಸುದೀಪ್ ಜೊಯೆ ಸಾಕಷ್ಟು ಸಿನಿಮಾಗಳನ್ನು ಮಾಡಿ ಯಶಸ್ವಿ ನಿರ್ದೇಶಕ ಅನ್ನೋ ಖ್ಯಾತಿಗೆ ಪಾತ್ರವಾಗಿರುವ ನಟ ನಿರ್ದೇಶಕ ನಂದಕಿಶೋರ್ ಇಜ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಈಗಾಗಲೇ ಅಂಬಿಗೆ ತಕ್ಕಂತೆ ಚಿತ್ರಕತೆ ಬರೆಯುವ ಕೆಲಸ ಶುರು ಮಾಡಿದ್ದಾರೆ. ಇಷ್ಟೆಲ್ಲಾ ಮಾಹಿತಿಗಳು ಗಾಂಧಿನಗರ ಗಲ್ಲಿಯಲ್ಲಿ ಹರಿದಾಡ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರತಂಡ ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಆ ಸುದ್ದಿಯನ್ನು ನಿಮ್ಮ ಸಿನಿ ಅಡ್ಡ ನಿಮಗೆ ತಲುಪಿಸಲಿದೆ.
ಜ್ಯೋತಿ ಗೌಡ, ಮಂಡ್ಯ
-Ad-

Leave Your Comments