ಅಪ್ಪ -ಅಮ್ಮನನ್ನು ಒಟ್ಟಿಗೆ ತರುತ್ತಿದ್ದಾಳಾ ಕಿಚ್ಚನ ಮಗಳು ?!

ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ದೂರ ದೂರ ಆಗಿ ವರ್ಷವೇ ಉರುಳಿ ಹೋದವು. ಇಬ್ಬರೂ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದೂ ಆಯಿತು. ಆದರೆ ಕೋರ್ಟ್’ನಲ್ಲಿ ಇಬ್ಬರೂ ಒಂದೇ ಒಂದು ಬಾರಿಯೂ ವಿಚಾರಣೆಗೆ ಹಾಜರಾಗಲಿಲ್ಲ.
ಇದನ್ನು ನೋಡಿದ ಅಭಿಮಾನಿಗಳು, ಹೋ… ಇವರಿಬ್ಬರು ಮತ್ತೆ ಒಂದಾಗುತ್ತಾರೆ ಅಂತಲೇ ಅಂದುಕೊಂಡಿದ್ದರು . ಅದರೆ ಸುದೀಪ್ ಅಗಲೀ ಪ್ರಿಯಾ ಆಗಲೀ ಆ ಬಗ್ಗೆ ಇದುವರೆಗೂ ಎಲ್ಲೂ ಯಾವ ಹೇಳಿಕೆ ನೀಡಿರಲಿಲ್ಲ.
ಸುದೀಪ್’ಗೆ ಮಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇಂದು ಭಾನುವಾರ ಮಗಳ ಶಾಲೆಯಲ್ಲಿ ಕಾರ್ಯಕ್ರಮವಿತ್ತು. ಅಲ್ಲಿ ಸುದೀಪ್ ಹಾಗೂ ಪ್ರಿಯಾ ಒಟ್ಟಿಗೆ ಮಗಳ ಜೊತೆ ಕಾಣಿಸಿಕೊಂಡಿದ್ದಾರೆ. ಮಗಳಿಗೆ ಶಾಲೆಯಲ್ಲಿ ‘ಸ್ಕೂಲ್ ಪ್ರಿಫೆಕ್ಟ್’  ಸ್ಥಾನ  ಸಿಕ್ಕಿದೆ.
ಈ ವಿಚಾರವನ್ನು ಪ್ರಿಯಾ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದನ್ನು ಸುದೀಪ್’ಗೂ ಟ್ಯಾಗ್ ಮಾಡಿದ್ದಾರೆ. ಇವರಿಬ್ಬರನ್ನೂ ಒಟ್ಟಿಗೆ ನೋಡಿದ ಅಭಿಮಾನಿಗಳು, ಇವರಿಬ್ಬರೂ ಯಾವಾಗಲೂ ಹೀಗೆ ಒಟ್ಟಿಗೆ ಇರಲಿ ಅಂತ ಹಾರೈಸುತ್ತಿದ್ದಾರೆ. ciniadda.com ಕೂಡ ಸುದೀಪ್ -ಪ್ರಿಯ ಸದಾ ಒಂದಾಗಿ, ಸುಖವಾಗಿರಲೆಂದು ಆಶಿಸುತ್ತಿದೆ.
-Ad-

Leave Your Comments