ಹಾಡಿಗೂ ಸೈ..ಸೈ..ಸುದೀಪ್!! ಕಿಚ್ಚನ ಅಚ್ಚುಮೆಚ್ಚಿನ ಹಾಡುಗಳು ಯಾವ್ಯಾವುದು ಗೊತ್ತಾ..?

ಕನ್ನಡ ಸಿನಿ ಪ್ರೇಕ್ಷಕ ಆರಾಧಿಸುವ ಕಿಚ್ಚ ಸುದೀಪ್ ಹೆಬ್ಬುಲಿಯ ಯಶಸ್ಸಿನ ಖುಷಿಯಲ್ಲಿದ್ದಾರೆ. ತನ್ನನ್ನು ಪ್ರೀತಿಸುವ, ಅಭಿಮಾನಿಸುವ ಜನರಿಗಾಗಿ ಹಾಡಿನ ಖುಷಿಯನ್ನೂ ಭರಪೂರ ಕೊಟ್ಟಿದ್ದಾರೆ. ಅದು  ಜೀ ಕನ್ನಡ ವಾಹಿನಿಯ ಕಾರ್ಯಕ್ರಮದ ಮೂಲಕ.  ಸರಿಗಮಪ- 13 ಆಡಿಷನ್ ನಡೀತಿರೋದು ನಿಮಗೆ ಗೊತ್ತೇ ಇದೆ. ಇವತ್ತು ಅಂದ್ರೆ ಭಾನುವಾರ ಸಂಜೆ  ಪ್ರಸಾರವಾಗುವ ಎಪಿಸೋಡ್‍ನಲ್ಲಿ ಕಾಣಿಸಿಕೊಂಡು ಆಯ್ಕೆಯಾದ ಎಲ್ಲಾ ಸ್ಪರ್ಧಿಗಳಿಗೂ ಶುಭ ಹಾರೈಸಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ತಾವೆಂಥಾ  ಸಂಗೀತ ಪ್ರೇಮಿ, ಕಂಚಿನ ಕಂಠದ ಗಾಯಕ  ಅನ್ನೋದನ್ನು ಅದ್ಭುತವಾಗಿ ತೋರಿಸಿದ್ರು..

sudeep13ಸುದೀಪ್ ಧ್ವನಿ ಮರಳು ಮಾಡುವಂಥ ಸಮ್ಮೋಹಕ ಶಕ್ತಿವುಳ್ಳದ್ದು. ಕೇಳಿದ ತಕ್ಷಣ ಎದೆಯೊಳಗೆ ಇಳಿಯುವಂಥಾದ್ದು . ಸಂಗೊಳ್ಳಿ ರಾಯಣ್ಣ ಚಿತ್ರದ ಪ್ರಾರಂಭದಲ್ಲಿ ಬರುವ ಹಿನ್ನೆಲೆ ದನಿಯನ್ನು ಮರೆಯಲು ಸಾಧ್ಯವೇ ? ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಧ್ವನಿಗೆ  ಮಾರುಹೋಗ್ತೀವಲ್ಲ ಹಾಗೆ ಕನ್ನಡದಲ್ಲಿ ಅಣ್ಣಾವ್ರನ್ನ ಬಿಟ್ಟರೆ ಸುದೀಪ್ ಕಂಠಸಿರಿಗೆ ಮನಸೋಲದೆ ಬೇರೆ ದಾರಿಯಿಲ್ಲ.

ಉಪೇಂದ್ರ, ಪುನೀತ್ ರಾಜ್‍ಕುಮಾರ್, ಶಿವಣ್ಣ, ಶರಣ್ ಸೇರಿದಂತೆ ಸಾಕಷ್ಟು ಮಂದಿ ನಟನೆಯ ಜೊತೆಗೆ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇವರೆಲ್ಲರನ್ನು ನೋಡುತ್ತಿದ್ರೆ ನಮಗೆ ನೆನಪಾಗೋದು ಅಂದ್ರೆ ಶ್ರೀಗಂಧದ ನಾಡು ಕಂಡ ನಟಸಾರ್ವಭೌಮ ಅಂದ್ರೆ ಡಾ ರಾಜ್‍ಕುಮಾರ್ !! ಅವರ  ಭಾವಪೂರ್ಣ  ಗಾಯನಸುಧೆಗೆ  ವಿದ್ವಾಂಸರೇ ತಲೆದೂಗುತ್ತಿದ್ದರು.. ಅದೇ ಸಾಲಿನಲ್ಲಿ ಸಂಗೀತವನ್ನು ಸೊಗಸಾಗಿ ಕೇಳುತ್ತ ತಲೆದೂಗುವಂತೆ ಮಾಡುತ್ತಿದ್ದಾರೆ ಪಾರ್ಥ ಅಲಿಯಾಸ್ ಸುದೀಪ..

1322474879437458ಸುದೀಪ್ ಅಭಿನಯಿಸಿದ ಮೊದಲ ಸಿನಿಮಾ ಸ್ಪರ್ಶದಲ್ಲಿ ಕವನಗಳ ಮೂಲಕ  ಜನರಿಗೆ ನಾನು ಢಿಫರೆಂಟ್ ಅಂತ ತೋರಿಸಿದ್ದ ಅಭಿನಯ ಚಕ್ರವರ್ತಿ  ಸುದೀಪ್. ಮೈಆಟೋಗ್ರಾಫ್ ಸಿನಿಮಾದಲ್ಲಿ ನಾನೊಬ್ಬ ಭಾವನಾಜೀವಿ ಹಾಡುಗಾರ ಅನ್ನೋದನ್ನು ತೋರಿಸಿದ್ರು.. ಆ ಬಳಿಕ ನಿರ್ದೇಶನ ಮಾಡಿದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲೂ ಹಾಡುಗಳನ್ನು ವಿಭಿನ್ನವಾಗಿ ಜನರಿಗೆ ಕೇಳಿಸುವ ಮೂಲಕ ಸಂಗೀತದ ಬಗ್ಗೆ ತಮಗಿರೋ ಪ್ಯಾಶನ್ ಎಂಥಾದ್ದು ಅನ್ನೋದನ್ನು ತೋರಿಸಿದ್ರು..

sudeep12ಇದೀಗ ಮತ್ತೊಮ್ಮೆ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 13 ಕಾರ್ಯಕ್ರಮದ ಆರಂಭದಲ್ಲೇ ಕಾಣಿಸಿಕೊಂಡಿರುವ ಸುದೀಪ್, ಒಂದೊಂದೇ ಸಾಂಗ್ ಹಾಡುತ್ತಿದ್ರೆ ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಕರಡತಾನ ಮಾಡುವ ಮೂಲಕ ಶಹಬ್ಬಾಸ್‍ಗಿರಿ ಕೊಡುತ್ತಿದ್ರು.. ಇದೀಗ ತಾನೆ ಹೆಬ್ಬುಲಿ ಸಿನಿಮಾದ ಯಶಸ್ಸಿನಲ್ಲಿರುವ ಸುದೀಪ್, ಸಿನಿಮಾದ ಬಗ್ಗೆ ಮಾತನಾಡುತ್ತಾ ಹೆಬ್ಬುಲಿ ಚಿತ್ರದ ದೇವರೇ.. ಹಾಡನ್ನ ಅಭಿಮಾನಿಗಳಿಗಾಗಿ ಹಾಡಿದ್ರು.. ಅದೂ ಅಲ್ಲದೆ ಜೀ ವಾಹಿನಿಯಲ್ಲೇ ಸುದೀಪ್ ಪ್ರೊಡಕ್ಷನ್‍ನ ವಾರಸ್ದಾರ ಧಾರಾ ವಾಹಿ ಯಶಸ್ಸು ಕೂಡ ಸುದೀಪ್ ಮಂದಹಾಸವನ್ನು ಹೆಚ್ಚಾಗುವಂತೆ ಮಾಡಿದ್ದು ಸುಳ್ಳಲ್ಲ..

ಬಾನಿಗೊಂದು ಎಲ್ಲೆ ಎಲ್ಲಿದೆ ಅಂತಾ ಸುದೀಪ್ ಹಾಡುತ್ತಿದ್ದರೆ ಯಾವುದೇ ಪ್ರೊಫೆಷನಲ್ ಸಿಂಗರ್ ಕೂಡ ಕಿವಿನಿಮಿರಿಸಿ ಕೇಳುವಂತಿತ್ತು  ಗಾಯನ.. ಮಧ್ಯೆ ಹಾಡಿದ ಹಿಂದಿ ಸಾಂಗ್ ಕೂಡ ಅಲ್ಲಿದ್ದ ಹಾಡುಗಾರರನ್ನು ನಾಚಿಸುವಂತಿತ್ತು.. ಒಟ್ಟಾರೆ ಹೇಳಬೇಕಂದ್ರೆ ಈಗಾಗಲೆ ಹಿಂದಿ ತೆಲುಗು ತಮಿಳು ಭಾಷೆಯಲ್ಲಿ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿ ಅಭಿನಯ ಚಕ್ರವರ್ತಿ ಅನ್ನೋ ಬಿರುದು ಪಡೆದಿರುವ ನಟ ಹಾಡೋದ್ರಲ್ಲೂ ಸೈ ..ಸೈ..ಸುದೀಪ್  ಅಂತ ಮತ್ತೆ ಸಾಬೀತು ಮಾಡಿದ್ದಾರೆ.

ಇಂದು ಸಂಜೆ 7.30ಕ್ಕೆ ಸುದೀಪ್ ಹಾಡಿನ ಮೋಡಿ  ಸರಿಗಮಪ-೧೩ರಲ್ಲಿ ನೋಡಿ. ಅಲ್ಲಿವರೆಗೂ  https://www.facebook.com/ciniadda1/ ಪ್ರೋಮೋ ನೋಡಿ..

-Ad-

Leave Your Comments