ಕಿಚ್ಚ ಸುದೀಪ್ ಕಿರುತೆರೆಯ “ವಾರಸ್ದಾರ”?!

ಬೆಳ್ಳಿತೆರೆಯ ಬಾಂಡ್ ಕಿಚ್ಚ ಸುದೀಪ್ ಇದಾಗಲೇ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಅಭಿಮಾನಿಗಳ ದಂಡು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬಿಗ್ ಬಾಸ್ ನಲ್ಲಿ ಸುದೀಪ್ ಬರ್ತಾರೆ ಅನ್ನೋ ಕಾರಣಕ್ಕೇ ಟಿವಿಗೆ ಕಣ್ಣು ನೆಡೋ ಕೋಟ್ಯಂತರ ವೀಕ್ಷಕರಿದ್ದಾರೆ. ಈಗ ಕಿರುತೆರೆಯಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದಾರೆ ಸೂಪರ್ ಸುದೀಪ್ !! ಅದು ಜೀ  ಕನ್ನಡ ವಾಹಿನಿಯ  “ವಾರಸ್ದಾರ” ಧಾರಾವಾಹಿಯ ನಿರ್ಮಾಣದ ಮೂಲಕ.

0d7a9979

“ವಾರಸ್ದಾರ” ಬರುವುದು ಯಾವಾಗ ?

05

“ವಾರಸ್ದಾರ” ಇದೇ ಡಿಸೆಂಬರ್ 19ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ .

“ವಾರಸ್ದಾರ” ವಿಶೇಷ 

ಇದು ಕಿರುತೆರೆ ಧಾರಾವಾಹಿಯೇ ಆದರೂ ಬಹುತೇಕರು ಸಿನಿಮಾ ಕಲಾವಿದರು , ಹಾಗು ಸಿನಿಮಾ  ತಂತ್ರಜ್ಞರು. ಸುದೀಪ್ ಮೇಲಿನ ಅಭಿಮಾನದಿಂದ ಸಿನಿಮಾ ಮಂದಿ “ವಾರಸ್ದಾರ” ದಲ್ಲಿ ಭಾಗವಹಿಸಿದ್ದಾರೆ . ಒಂದು ಸಿನಿಮಾ ರೀತಿಯಲ್ಲೇ ನಿರ್ಮಾಣವಾಗುತ್ತಿರುವ “ವಾರಸ್ದಾರ” ಹಲವು ಪ್ರಥಮಗಳಿಗೆ ಕಾರಣವಾಗಲಿದೆ .

ನಟಿ ಯಜ್ಞಾ ಶೆಟ್ಟಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಟ ರವಿಚೇತನ್ , ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಸೇರಿದಂತೆ ಹಲವಾರು ಕಲಾವಿದರ ಸಂಗಮದಲ್ಲಿ ತೆರೆಗೆ ಬರುತ್ತಿದೆ “ವಾರಸ್ದಾರ”. ದ್ಯಾವ್ರೆ ,ಪ್ಲಸ್ ಥರಹದ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಗಡ್ಡ ವಿಜಿ ಈ ಧಾರಾವಾಹಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಡ್ರಾಮಾ ಜೂನಿಯರ್ಸ್ ಮೂಲಕ ನೋಡುಗರ ಮುದ್ದಿನ ಚಿನಕುರಳಿಯಾಗಿದ್ದ 5 ವರ್ಷದ  ಚಿತ್ತಾಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಸ್ವತಃ ಸುದೀಪ್ ಚಿತ್ತಾಲಿಯ ಅಭಿನಯಕ್ಕೆ ಮಾರು ಹೋಗಿ ಲೀಡ್ ರೋಲ್ಗೆ ಕರೆತಂದಿದ್ದಾರೆ . 

0d7a0013

ಕಥೆ 

ಶಿವಪುರ ಎಂಬ ಗ್ರಾಮದಲ್ಲಿ ನಡೆಯುವ ಕಥೆಯಿದು. ಆ ಗ್ರಾಮದ ಆಡಳಿತದ ಚುಕ್ಕಾಣಿಯನ್ನು “ವಾರಸ್ದಾರ” ಕುಟುಂಬ ಹಿಂದಿನಿಂದಲೂ ವಹಿಸಿಕೊಂಡು ಬಂದಿರುತ್ತದೆ . ಕುಟುಂಬದ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು  ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ. ಅಲ್ಲದೆ ದುರುಳ ವ್ಯಕ್ತಿಯೊಬ್ಬ  “ವಾರಸ್ದಾರ”ಪೀಠ ಅಲಂಕರಿಸುವುದಕ್ಕೆ ಕಾರಣವಾಗಿರುತ್ತದೆ. ಅದನ್ನು ತಪ್ಪಿಸಲು ಅಮ್ಮ ಒಂದು ಸುಳ್ಳು ಹೇಳುತ್ತಾಳೆ. ಆ ಸುಳ್ಳಿನ ಸುತ್ತ ನಡೆಯುವ ಕಥಾ ಹಂದರವೇ   “ವಾರಸ್ದಾರ” ತಿರುಳು.

ಈ ಕಥೆಗೆ ಸೂಕ್ತವಾದ ಲೊಕೇಶನ್ ಹುಡುಕಾಟದಲ್ಲಿದ್ದ ತಂಡಕ್ಕೆ ಚಿಕ್ಕಮಗಳೂರು ಸಮೀಪದ ಬೇಗೂರು ಎಂಬ ಕುಗ್ರಾಮ ಸಿಕ್ಕಿದೆ. ಯಾವುದೇ ಫೋನ್ ಸಂಪರ್ಕ ಕೂಡ ಇಲ್ಲದ ಗ್ರಾಮ ಬೇಗೂರಿನಲ್ಲಿ ತಂಡ ಬೀಡು ಬಿಟ್ಟಿದೆ. ಬಹುತೇಕ ಚಿತ್ರಣ ಇಲ್ಲಿಯೇ  ನಡೆಯುತ್ತಿದೆ.

ಈಗಾಗಲೇ ಡ್ರಾಮಾ ಜೂನಿಯರ್ಸ್ , ಕಾಮಿಡಿ ಕಿಲಾಡಿಗಳಂತ ಕಾರ್ಯಕ್ರಮದ ಮೂಲಕ ವೀಕ್ಷಕರನ್ನು ಮೆಚ್ಚಿಸಿರುವ ಜೀ ಕನ್ನಡ ವಾಹಿನಿಯ ಈ ಹೊಸ  ಧಾರಾವಾಹಿ ಮತ್ತಷ್ಟು ನೋಡುಗರನ್ನು ಸೆಳೆಯುವ ಸಾಧ್ಯತೆ ಹೆಚ್ಚಿದೆ.

0302

ಸುದೀಪ್ ಸಾಮಾನ್ಯವಾಗಿ ಸುಲಭಕ್ಕೆ ಯಾವುದನ್ನೂ ಒಪ್ಪದ ಶ್ರದ್ಧಾವಂತ ,ಬುದ್ಧಿವಂತ  ಕಲಾವಿದ.  ಹಾಲಿವುಡ್ ಅಂಗಳಕ್ಕೆ ಹಾರಿದರೂ ಮಿಂಚುವಂಥಾ ಪ್ರತಿಭೆ ಅವರದ್ದು .ಅವರ  ಹೊಸ ಪ್ರಯತ್ನದ “ವಾರಸ್ದಾರ” ವಿಶಿಷ್ಟವಾಗಿ, ವಿಭಿನ್ನವಾಗಿ ಪ್ರೇಕ್ಷರನ್ನು ತಲುಪಲಿ . ಮನೆ ಮನೆಯ ಮಾತಾಗಲಿ “ವಾರಸ್ದಾರ”.

-Ad-

Leave Your Comments