ಮತ್ತೆ ಮಗುವಾದ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ಬಗ್ಗೆ ಒಂದು ಅಪವಾದ ಇದೆ. ಅದೇನೆಂದರೆ ಆತ ಎಲ್ಲರ ಜೊತೆ ಬೆರೆಯುವುದಿಲ್ಲ ಅನ್ನುವುದು. ಇನ್ನು ಕೆಲವರು ದುರಹಂಕಾರಿ ಅಂತಲೂ ಕರೆಯುತ್ತಾರೆ. ಆದರೆ ಕಿಚ್ಚ ಮಗು ಮನಸ್ಸಿನ ನಾಯಕ ಅನ್ನುವುದನ್ನು ಅವರು ನಿರೂಪಿಸಿದ್ದಾರೆ. ಸದ್ಯ ಲಂಡನ್ನಿನಲ್ಲಿ ದಿ ವಿಲನ್ ಸಿನಿಮಾದ ಚಿತ್ರೀಕರಣದಲ್ಲಿರುವ ಸುದೀಪ್ ಮನಸ್ಸು ಮಕ್ಕಳಂತೆ ಅನ್ನುವುದು ಸಾಬೀತಾಗಿದ್ದರ ಹಿಂದೆ ಒಂದು ಕತೆ ಇದೆ.

ದಿ ವಿಲನ್ ಸಿನಿಮಾದ ನಿರ್ಮಾಪಕ ಮನೋಹರ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಅವರ ಜೊತೆಗೆ ಸುದೀಪ್ ಸುತ್ತಾಟ ನಡೆಸಿದ್ದಾರೆ. ಹಾಗೆ ಸುಮ್ಮನೆ ಟ್ರೇನಲ್ಲಿ ಸಾಗುತ್ತಾ ಮಾತುಕತೆ ನಡೆಸಿದ್ದಾರೆ. ಕಡೆಗೆ ಅಲ್ಲೊಂದು ಕಡೆ ಒಂದು ಚೆಂದದ ಮರ ಕಣ್ಣಿಗೆ ಬಿದ್ದಿದೆ. ಆಗ ಸುದೀಪ್ ಒಳಗಿದ್ದ ಮಗು ಮನಸ್ಸು ಜಾಗೃತವಾಗಿದೆ. ಸುದೀಪ್ ತಕ್ಷಣ ಮರ ಹತ್ತಿದ್ದಾರೆ. ಮರದ ಮೇಲೆ ಕೂತು ಒಂದು ಟೀ ಕೂಡ ಕುಡಿದಿದ್ದಾರೆ. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಸಿಆರ್ ಮನೋಹರ್.

ಸುದೀಪ್ ಮರಹತ್ತಿದ್ದರಿಂದ ಮನೋಹರ್ ಕೂಡ ಮರ ಹತ್ತಿದ್ದಾರೆ. ಇಬ್ಬರೂ ಮರದ ಮೇಲೆ ಕುಳಿತು ಟೀ ಕುಡಿಯುತ್ತಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಬಹುಶಃ ಸುದೀಪ್ ಹಲವು ದಶಕಗಳ ನಂತರ ಮರ ಹತ್ತಿದ್ದು ಅನ್ನಿಸುತ್ತದೆ. ಈ ಬಗ್ಗೆ ಸುದೀಪ್ ಸಣ್ಣ ಸಣ್ಣ ವಿಷಯಗಳು ತುಂಬಾ ಖುಷಿ ಕೊಡುತ್ತವೆ ಎಂದಿದ್ದಾರೆ.

-Ad-

Leave Your Comments