ವಿಲನ್, ಪೈಲ್ವಾನ್, ಸಿಸಿಎಲ್, ಬಿಗ್ ಬಾಸ್, ಹಾಲಿವುಡ್ ಚಿತ್ರ ರೈಸೆನ್ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸದ್ದಿಲ್ಲದೇ ಕಿಚ್ಚು ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಸುದೀಪ್ ಅವರ ಗೆಟಪ್ ಬಿಡುಗಡೆಯಾದ ನಂತರವೇ ಈ ವಿಷಯ ಗೊತ್ತಾಗಿದೆ. ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಸುದೀಪ್ ಗೆಸ್ಟ್ ಅಪಿಯರೆನ್ಸ್ ಆಗೋದು ಎಲ್ಲರಿಗೂ ಗೊತ್ತಿತ್ತು. ಆದರೆ ಕಿಚ್ಚುವಿನಲ್ಲಿ ಕಿಚ್ಚ ಕಾಣಿಸಿಕೊಳ್ತಿದ್ದಾನೆ ಅಂತಾ ಗೊತ್ತಿರಲಿಲ್ಲ. ಈಗ ಆ ವಿಷಯ ಬಹಿರಂಗವಾಗಿದ್ದು, ಅದರ ಜತೆಗೆ ಈ ಸಿನಿಮಾದಲ್ಲಿ ಸಮಾಜ ಸೇವೆ ಮಾಡುವ ವೈದ್ಯನಾಗಿ ಸುಮಾರು 10 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರಂತೆ. ಪ್ರದೀಪ್ ರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಾಡು ಉಳಿಸಿ ಎಂಬ ವಿಷಯದ ಆಧಾರದ ಮೇಲೆ ಈ ಚಿತ್ರ ನಿಂತಿದೆಯಂತೆ.
ಇತ್ತೀಚೆಗೆ ನಿಧನರಾದ ನಟ ಧ್ರವ ಶರ್ಮಾ ಈ ಚಿತ್ರದ ನಾಯಕರಾಗಿದ್ದು, ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜತೆಗೆ ಸಾಯಿಕುಮಾರ್, ಸುಚೇಂದ್ರ ಪ್ರಸಾದ್ ರಂತಹ ತಾರಾಗಣವೂ ಚಿತ್ರದಲ್ಲಿದ್ದು, ಇದೇ ತಿಂಗಳು 22ಕ್ಕೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ.