ನಟ ಸುದೀಪ್ ಜೆಡಿಎಸ್ ಸೇರುತ್ತಾರಾ.? 

ಕುಮಾರಣ್ಣನಿಗಾಗಿ ಬಾಣಸಿಗನಾದ ಕಿಚ್ಚ ಸುದೀಪ್
ಶನಿವಾರ ಅಷ್ಟೇ 59ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವೀಡಿಯೋ ಮೂಲಕ ಶುಭ ಕೋರಿದ್ರು. ಜೊತೆಗೆ ಮನೆಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ರು. ಅಹ್ವಾನ ಸ್ವೀಕರಿಸಿದ ಕುಮಾರಸ್ವಾಮಿ, ಭಾನುವಾರ ಮಧ್ಯಾಹ್ನ ಕಿಚ್ಚನ ನಿವಾಸಕ್ಕೆ ತೆರಳಿದ್ರು. ಈ ವೇಳೆ ಸ್ವತಃ ಒಳ್ಳೆ ಬಾಣಸಿಗನಾದ ಸುದೀಪ್, ಕೈಯಾರೆ ಅಡುಗೆ ಮಾಡಿ ಬಡಿಸಿದ್ರು.. ಆ ಬಳಿಕ ಕುಮಾರಸ್ವಾಮಿ ಜೊತೆ ಊಟ ಮಾಡುತ್ತಾ ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ ಅನ್ನೋದು ಗೊತ್ತಾಗಿದೆ.
ತೆನೆ ಹೊರಲು ಸಿದ್ಧ ಆರಡಿ ಬುಲೆಟ್?
ಸಿನಿಮಾ ಸ್ಟಾರ್ ಗಳು ಸಿನಿಮಾ ರಂಗದಿಂದ ಚುನಾವಣಾ ಅಖಾಡಕ್ಕೆ ಪ್ರವೇಶ ಮಾಡೋದು ಹೊಸದೇನಲ್ಲ. ಆದರೆ ಸಿನಿಮಾವನ್ನೇ ಪ್ರಾಣ ಎಂದಿರುವ ಸುದೀಪ, ರಾಜಕೀಯ ಪ್ರವೇಶ ಮಾಡೋದಿಲ್ಲ ಅಂತ ಸ್ಪಷ್ಟಪಡಿಸಿದ್ರು. ಆದರೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಎರಡು ತಾಸು ಚರ್ಚೆ ಮಾಡಲು ಇರೋದನ್ನು ನೋಡಿದ್ರೆ ತುಂಬ ಕುತೂಹಲ ಕೆರಳಿಸಿರೋದಂತು ಸತ್ಯ. ಕುಮಾರಸ್ವಾಮಿ ಕೂಡ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಅದೇ ರೀತಿ ನಟ ಸುದೀಪ್ ಕೂಡ ಗಂಟೆಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುವ ನಟನಾಗಿದ್ದು ಎರಡು ಗಂಟೆಗಳ ಕಾಲ ಇವರಿಬ್ಬರು ಚರ್ಚೆ ನಡೆಸಿದ್ದಾದರೂ ಏನು ಅಂತ ಪ್ರಶ್ನೆ ಮಾಡಿಕೊಳ್ಳಲು ಶುರುಮಾಡಿದ್ದಾರೆ.
ಉಪ್ಪಿ ಕುಮಾರಸ್ವಾಮಿ ನಡುವೆ ಬ್ರಿಡ್ಜ್ ಆದ್ರಾ ಕಿಚ್ಚ?
ನಟ ಉಪೇಂದ್ರ ಪ್ರಜಾಕೀಯ ಅನ್ನೋ ಪಕ್ಷ ಸ್ಥಾಪಿಸಿ ಚುನಾವಣಾ ಅಖಾಡದಲ್ಲಿ ಹೆಜ್ಜೆ ಇಡುತ್ತಿದ್ದಾರೆ‌ ಅಸಲಿಗೆ ಕಿಚ್ಚ ಸುದೀಪ್ ಹಾಗೂ ಸೂಪರ್ ಸ್ಟಾರ್ ಉಪ್ಪೇಂದ್ರೆ ತುಂಬಾ ಒಳ್ಳೆ ಸ್ನೇಹಿತರು. ಉಪೇಂದ್ರ ಅವರ ಪ್ರಜಾಕೀಯ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡುವ ಬಗ್ಗೆ ಮಾತುಕತೆ ನಡೆದಿದ್ಯಾ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ. ಇದಕ್ಕೆ ಸಂಬಂಧಪಟ್ಟವರೇ ಉತ್ತರ ನೀಡದ ಹೊರತು ಅನುಮಾನ ಬಗೆಹರಿಯೋದಿಲ.ciniadda.com   ಕೂಡ ಈ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದು, ಅದನ್ನೂ ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments