ಚುನಾವಣೆಗೂ ಮುನ್ನವೇ ನಡೆಯುತ್ತೆ ಕುರುಕ್ಷೇತ್ರ..!

ಕುರುಕ್ಷೇತ್ರ ಅಂದ್ರೆ ಇದ್ಯಾವುದೋ ಯುದ್ಧ ಅನ್ಕೊಬೇಡಿ.‌ ಇಲ್ಲಾ‌ ರಾಜಾಕೀಯ ಪಕ್ಷಗಳ ಹೊಲಸು ಬಡಿದಾಟವೂ ಅಲ್ಲ.. ಬದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಮ್ಯಾಟರ್. ಈ ಚಿತ್ರ ಯೋಜನೆಯಂತೆ ಎಲ್ಲಾ ಕೆಲಸವು ಮುಕ್ತಾಯ ಆಗಿದ್ರೆ ಸಂಕ್ರಾಂತಿಯಲ್ಲೇ ಕನ್ನಡಿಗರ ಮುಂದೆ ಅಬ್ಬರಿಸಬೇಕಿತ್ತು.. ಆದ್ರೆ ಕೆಲವೊಂದು ದೃಶ್ಯಗಳ ರೀ ಶೂಟಿಂಗ್, ಗ್ರಾಫಿಕ್ಸ್ ವರ್ಕ್ ಜಾಸ್ತಿ ಇದ್ದಿದ್ದರಿಂದ ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರ ಬಿಡುಗಡೆ ಮಾಡಲು ನಿರ್ಮಾಪಕ ಮುನಿರತ್ನ ನಿರ್ಧಾರ ಮಾಡಿದ್ರು.. ಆದ್ರೀಗ ಯುಗಾದಿಯೂ ಕಳೆದಿದೆ, ಇದೀಗ ದರ್ಶನ್ ಅಭಿಮಾನಿಗಳನ್ನು ಕಾಡುತ್ತಿರುವ ಒಂದೇ ಪ್ರಶ್ನೆ ಅಂದ್ರೆ ದಚ್ಚು ಕುರುಕ್ಷೇತ್ರ ನಡೆಯೋದು ಯಾವಾಗ ಅನ್ನೋದು..
ಸ್ಯಾಂಡಲ್ ವುಡ್ ನ ಬಿಗ್ ಬಿಜೆಟ್ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅನ್ನೋದು ಬಹಿರಂಗವಾಗಿದೆ. ಗಲ್ಲಾ ಪೆಟ್ಟಿಗೆ ಬಿಗ್ ಬಾಸ್ ದರ್ಶನ್ ನಟಿಸಿರೋ ಕುರುಕ್ಷೇತ್ರದ ಚಿತ್ರೀಕರಣ ಶೂಟಿಂಗ್ ಮುಗಿದಿದ್ದು, ಕುರುಕ್ಷೇತ್ರಕ್ಕೆ ಆಡಿಯೋ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.‌ ಈಗಾಗಲೇ ಡಬ್ಬಿಂಗ್ ಕೂಡ ಅಂತಿಮ ಹಂತ ತಲುಪಿದ್ದು, ದರ್ಶನ್ ಹಾಗೂ ನಟ ರವಿಶಂಕರ್ ಪಾತ್ರದ ಧ್ವನಿ ಜೋಡಣೆ ಕೆಲಸ ನಡೆಯುತ್ತಿದೆ ಅನ್ನೋದು ಚಿತ್ರರಂಗದ ಮಾಹಿತಿ. ಕುರುಕ್ಷೇತ್ರ ಚಿತ್ರದ ಡಬ್ಬಿಂಗ್ ಕಾರ್ಯಗಳು ಮುಗಿಯುತ್ತಿದ್ದಂತೆ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಈಗಾಗಲೇ ಟೀಸರ್‌ನಿಂದ ಕನ್ನಡಿಗರ ಗಮನ ಸೆಳೆದಿರುವ ಕುರುಕ್ಷೇತ್ರ ರಿಲೀಸ್‌ ಯಾವಾಗ ಅನ್ನೋ ಪ್ರಶ್ನೆಯನ್ನು ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಎದುರುನೋಡುತ್ತಿದೆ. ತೆರೆಯ ಮೇಲೆ ರವಿಚಂದ್ರನ್ ಸೇರಿದಂತೆ ಬಹು ತಾರಾಗಣವೇ‌ ಕಾಣಸಿಗಲಿದ್ದು, ಐತಿಹಾಸಿಕ ಪೌರಾಣಿಕ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೈದ್ರಾಬಾದ್‌ನಲ್ಲಿ ಕುರುಕ್ಷೇತ್ರ ಚಿತ್ರದ ಡಿಐ ಕೆಲಸ ಹಾಗೂ ಗ್ರಾಫಿಕ್ಸ್ ಗಳಿಗೆ ಫೈನಲ್ ಟಚ್ ಕೊಡುವ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಶೇಕಡಾ 90 ರಷ್ಟು ಕೆಲಸ ಮುಗಿಸಿಕೊಂಡಿರುವ ಕುರುಕ್ಷೇತ್ರ ಚಿತ್ರತಂಡ, ಕೆಲಸ ಕಂಪ್ಲೀಟ್ ಆಗ್ತಿದ್ದ ಹಾಗೆ ಸೆನ್ಸಾರ್ ಮಂಡಳಿ ಎದುರು ಚಿತ್ರವನ್ನು ಇಟ್ಟು ದಿನಾಂಕ ಫಿಕ್ಸ್ ಮಾಡುವ ಕೆಲಸ ಮಾಡಲಿದೆ.. ಒಟ್ಟಾರೆ   ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯೋಕೆ ಎಲ್ಲಾ ರೀತಿಯಿಂದಲೂ ಸಜ್ಜಾಗಿರುವ ದಚ್ಚು ಕುರುಕ್ಷೇತ್ರ ಚುನಾವಣೆಗೂ ಮುನ್ನವೇ ತೆರೆಗೆ ಬರುವುದು ಬಹುತೇಕ ಕನ್ಫರ್ಮ್..
-Ad-

Leave Your Comments