ಲೂಸ್ ಮಾದ ಯೋಗೀಶ್ ಹೊಸ ವಿಷ್ಯ ಗೊತ್ತಾಯ್ತಾ..

ಯೋಗಿ ,ಯೋಗೀಶ್ ಅನ್ನುವುದಕ್ಕಿಂತ ಲೂಸಾ ಮಾದ ಅಂದ್ರೆ ಸಿನಿರಸಿಕರ ಕಿವಿ ಅರಳೋದು ಗ್ಯಾರಂಟಿ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಲೂಸ್ ಮಾದನ  ನಟನೆಗೆ ಸೈ ಸೈ ಅಂದವರೇ ಹೆಚ್ಚು. ಇಂಥಾ ಮಾದ ಈಗ ಮದುವೆಗೆ ಸಜ್ಜಾಗುತ್ತಿದ್ದಾರೆ.

ಅಂದಹಾಗೆ ಯೋಗೀಶ್ ಬಾಲ್ಯದಲ್ಲೇ ತನ್ನ ಬದುಕಿನ ಸಂಗಾತಿಯನ್ನ ನಿಕ್ಕಿ ಮಾಡ್ಕೊಂಡಿದ್ರಂತೆ. ಆಕೆಗೂ ಯೋಗೀಶ್ ಅಂದ್ರೆ ಪಂಚ ಪ್ರಾಣ. ಬಾಲ್ಯದಲ್ಲೇ ಚಿಗುರಿದ ಪ್ರೀತಿ ಈಗ ಮದುವೆಯವರೆಗೂ ಬಂದಿದೆ. ವೃತ್ತಿ ಬೇರೆ ಬೇರೆಯಾದರು ಪ್ರೀತಿಸಿದ ಜೀವಗಳು ಬೇರೆಯಾಗಿಲ್ಲ.

ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಹಿತ್ಯ ಅರಸ್ ಲೂಸ್ ಮಾದನ ಕೈ ಹಿಡಿಯಲು ಸಿದ್ದವಾಗಿರುವ ವಧು. ಹಿಂದೆ ಇವರಿಬ್ಬರ ಲವ್ ಸ್ಟೋರಿ ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿತ್ತು. ಅದೀಗ ನಿಜವಾಗಿದೆ. ಮುಂದಿನ ತಿಂಗಳು ಅಂದ್ರೆ ಜೂನ್ 11ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರಂತೆ.

ಇದೇ ವರ್ಷದ ನವೆಂಬರ್ ಎರಡನೇ ತಾರೀಕು ಹಿರಿಯರ ಸಾಕ್ಷಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರಂತೆ. ನಾವು ಸದ್ಯಕ್ಕೆ ಇಲ್ಲಿಂದಲೇ ಶುಭ ಹಾರೈಸೋಣ. ಮದುವೆಗೆ ಆಹ್ವಾನ ಕೊಟ್ರೆ ಅಭಿಮಾನಿಗಳಿಗೆ ಸುದ್ದಿ ಮುಟ್ಟಿಸೋಕೆ ನಾವಂತೂ ಇದ್ದೇ ಇರ್ತೀವಿ.

-Ad-

Leave Your Comments