ಬಿಗ್ ಬಾಸ್ ಮನೆಯಲ್ಲಿ ಪ್ರೇಮಪಯಣ ಶುರು

ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳಲ್ಲೂ ಒಂದಲ್ಲ ಒಂದು ಜೋಡಿ ಪ್ರೇಮ ಪಾಶಕ್ಕೆ ಸಿಲುಕುತ್ತಿತ್ತು. ಆದ್ರೆ ಈ ಬಾರಿ ಎರಡು ಜೋಡಿಗಳು ಪ್ರೇಮ ಪ್ರಣಯ ಎನ್ನುತ್ತಿದ್ದು  ಮೇಲ್ನೋಟಕ್ಕೆ  ಅಂತರ ಕಾಯ್ದುಕೊಂಡಿದ್ದಾರೆ. ಅಂದರೆ ಮನಸ್ಸಿನ ತುಮುಲಗಳನ್ನು ಬದಿಗೊತ್ತಿ ಸಮಾಜದಲ್ಲಿ ತಮಗಿರುವ ಸ್ಥಾನಮಾನಗಳಿಗೆ ಪೆಟ್ಟು ಬಿದ್ದರೆ ನಷ್ಟ ಉಂಟಾಗಲಿದೆ ಅನ್ನೋ ಅರಿವಿನಿಂದ ಉಕ್ಕಿ ಬರುತ್ತಿರುವ ಪ್ರೀತಿಯನ್ನು ತಣಿಸಿಕೊಂಡು ಕಾಲ ಕಳೆಯುತ್ತಿದ್ದಾರೆ.
ಜೆಕೆ ವಿತ್ ಶೃತಿ, ಚಂದನ್ ವಿತ್ ನಿವೇದಿತಾ ಗೌಡ 
ಹೌದು, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡು, ಹೆಸರು ಮಾಡಿರುವ ಜಯರಾಮ್ ಕಾರ್ತಿಕ್ ಗೆ ಮುಂಬೈ ಮೂಲದ ಬೆಡಗಿ, ಸಿಂಗರ್ ಶೃತಿ ಪ್ರಕಾಶ್ ಮೇಲೆ ಮನಸ್ಸಾಗಿದೆ. ಆದರೆ ಎಲ್ಲೂ ತೋರಿಸಿಕೊಳ್ಳದೆ ಎಲ್ಲರ ಜೊತೆ ಇರುವ ರೀತಿಯಲ್ಲೇ ಇದ್ದೇನೆ ಎಂದು ತೋರಿಸಿಕೊಳ್ಳುವ  ಪ್ರಯತ್ನ ನಡೆಸುತ್ತಿರುವುದು ಗೊತ್ತಾಗ್ತಿದೆ. ಅದೇ ರೀತಿ ರ‌್ಯಾಪ್ ಸ್ಟಾರ್  ಚಂದನ್ ಶೆಟ್ಟಿ ಗೆ ಫಿದಾ ಆಗಿರುವ ಮೈಸೂರಿನ ಬ್ಯೂಟಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕೂಡ ಮನಸೋತಿರೋದು ಮುಚ್ಚಿಟ್ಟಿರುವ ಅಸಲಿ ಕಹಾನಿ. ಯಾವಾಗ ಬಿಗ್ ಬಾಸ್ ಜೋಡಿ ಬಂಧನ ಟಾಸ್ಕ್ ಕೊಟ್ಟರೂ ಆಗಿನಿಂದಲೇ ಇಬ್ಬರ ನಡುವೆ ಆಪ್ತತೆ ಹೆಚ್ಚಾಗಿ ತುಂಬಾ ಸನಿಹದಲ್ಲಿ ಬಂದು ನಿಂತಿದ್ದಾರೆ. ಆದರೆ ಚಂದನ್ ಶೆಟ್ಟಿ ಬುದ್ಧಿವಂತ ಸ್ಪರ್ಧಿ ಆಗಿದ್ದು ಮುಂದಾಲೋಚನೆಯಿಂದ ಯಾವುದೇ ಭಾವನೆಯನ್ನೂ ವ್ಯಕ್ತಪಡಿಸುತ್ತಿಲ್ಲ.
ಈ ರೀತಿ ಪ್ರೇಮಪಾಶಕ್ಕೆ ಕಾರಣ ಏನು..? 
ವಯಸ್ಸಿಗೆ ಬಂದಿರುವ  ಹುಡುಗ- ಹುಡುಗಿ ಪ್ರೀತಿಸೋದು ಸಾಮಾನ್ಯ. ಆದರೆ ಬಿಗ್ ಬಾಸ್ ಮನೆಯಲ್ಲಿ ಆಗೋ ಪ್ರೇಮ ಹೊರಕ್ಕೆ ಬಂದ ಬಳಿಕ ಉಳಿಯುತ್ತಾ ಅನ್ನೋದೆ ಪ್ರಮುಖ ಪ್ರಶ್ನೆ. ಯಾಕಂದ್ರೆ ಹಿಂದಿನ ಹಲವು ಸೀಸನ್ ಗಳಲ್ಲಿ ಈ ಬಾರಿಗಿಂತಲೂ ಸಾಕಷ್ಟು ಪ್ರೇಮ ಕಥೆ ನಡೆದಿತ್ತು . ಆದರೆ ಮನೆಯಿಂದ ಹೊರಬಂದ ಬಳಿಕ ಎಲ್ಲವನ್ನೂ ಮರೆತು ವಿ  ಆರ್ ಜಸ್ಟ್ ಫ್ರೆಂಡ್ಸ್ ಅಂತಾ ತೇಪೆ ಹಾಕಿದ್ರು. ಇದಕ್ಕೆ ಪ್ರಮುಖ  ಕಾರಣ ಅಂದ್ರೆ ಒತ್ತಡ. ಹೊರಪ್ರಪಂಚದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಬಿಗ್ ಬಾಸ್ ಮನೆಯಲ್ಲಿ ಸಿಗುವುದಿಲ್ಲ. ಮನರಂಜನೆ, ಸುದ್ದಿ, ತರಲೆ  ಆಟಗಳು, ಪ್ರವಾಸ, ಪಾರ್ಟಿ ಅಂದುಕೊಂಡು ಜನ ಒತ್ತಡದ ಜೀವನದಿಂದ ಹೊರ ಬರುತ್ತಾರೆ. ಆದರೆ ಇದೆಲ್ಲವನ್ನೂ ಸಹಿಸಿಕೊಂಡು ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳು ಅನಿವಾರ್ಯ ಕಾರಣಕ್ಕಾಗಿ ಒಬ್ಬರ ಬಳಿ ತುಂಬಾ ಆತ್ಮೀಯವಾಗಿ  ವರ್ತಿಸುತ್ತಾರೆ. ಆದರೆ ಹೊರಪ್ರಪಂಚಕ್ಕೆ‌ ಬಂದ ಬಳಿಕ ಅವರಿಗೆ ವಾಸ್ತವದ ಬದುಕು ಅರ್ಥ ಆಗೋದ್ರಿಂದ ಬಿಗ್ ಬಾಸ್ ಮನೆಯ ಲವ್ ಕಹಾನಿ ಮರೆತು ಬಿಡ್ತಾರೆ. ಲವ್ ಮಾಡುವುದು ತಪ್ಪಲ್ಲ ಎಂದ ಮೇಲೆ ಮದ್ವೆ ಆದರೂ ತಪ್ಪಲ್ಲ. ಮೊದಲೇ ಮೂರು ತಿಂಗಳು ಜೊತೆಯಲ್ಲಿ ಜೀವನ ಮಾಡಿರೋದ್ರಿಂದ ಅರ್ಥ ಮಾಡಿಕೊಳ್ಳೋದು ಸುಲಭ ಆಗಿರುತ್ತದೆ.. ಯಾವ ಬಿಗ್ ಬಾಸ್ ಜೋಡಿ ಮದುವೆ ಆಗುತ್ತೆ ಅನ್ನೋದೆ ಎಲ್ಲರ ಕುತೂಹಲ..
-Ad-

Leave Your Comments