ಮಾರ್ಚ್ 22 : ಅನಂತ್ ನಾಗ್ ಜೋಡಿಯಾಗಿ ಲಕ್ಷ್ಮಿ ಇಲ್ಲವೆಂದರೆ ಮತ್ತಿನ್ಯಾರು ?

ಒಂದು ಕಾಲದಲ್ಲಿ ಹರೆಯದ ಹೃದಯಗಳನ್ನು ಹುಚ್ಚೆಬ್ಬಿಸಿದ್ದ ಸೂಪ್ ಜೋಡಿ ಅನಂತ್‍ನಾಗ್ ಮತ್ತು ಲಕ್ಷ್ಮಿ ಅವರದ್ದು. ಇವರು ನಟಿಸಿದ್ದ ಚಿತ್ರಗಳನ್ನು ನೋಡಿದ ಆ ಕಾಲದ ಯುವಕ ಯುವತಿಯರು ಅವರ ಜಾಗದಲ್ಲಿ ತಮ್ಮನ್ನೇ ಕಲ್ಪಿಸಿಕೊಂಡು ಪುಳಕಿತರಾಗುತ್ತಿದ್ದರು. ಈ ಜೋಡಿಯನ್ನ ತೆರೆ ಮೇಲೆ ನೋಡಿದರೆ ಈವತ್ತಿನ ಯುವ ಸಮುದಾಯಕ್ಕೂ ಅಂಥಾದ್ದೊಂದು ರೋಮಾಂಚನವಾದರೆ ಅಚ್ಚರಿಯೇನಿಲ್ಲ!
ಹೀಗೆ ಅನಂತನಾಗ್ ಮತ್ತು ಲಕ್ಷ್ಮಿ ಜೋಡಿಗೆ ಮಾರು ಹೋದವರಿಗೆಲ್ಲ ಕೂಡ್ಲು ರಾಮಕೃಷ್ಣ ನಿರ್ದೇಶನದ ಮಾರ್ಚ್ 22 ಚಿತ್ರದ ಕಡೆಯಿಂದ ಶುಭ ವಾರ್ತೆಯೊಂದು ಬಂದಿತ್ತು. ಈ ಚಿತ್ರದ ಮುಖ್ಯಭೂಮಿಕೆಯಲ್ಲಿರುವ ಅನಂತ್ ನಾಗ್ ಅವರಿಗೆ ಲಕ್ಷ್ಮಿ ಜೋಡಿಯಾಗಿ ನಟಿಸುತ್ತಾರೆಂಬ ಸುದ್ದಿ ಹಬ್ಬಿಕೊಂಡಿತ್ತು. ಆದರೀಗ ಅದು ಸುಳ್ಳಾಗಿದೆ. ಲಕ್ಷ್ಮಿ ಅವರ ಜಾಗಕ್ಕೆ ಅವರದ್ದೇ ಕಾಲಘಟ್ಟದಲ್ಲಿ ಭಾರೀ ಹೆಸರು ಮಾಡಿದ್ದ ನಟಿ ಗೀತಾ ಬರುವುದು ಪಕ್ಕಾ ಆದಂತಿದೆ.

ananthnag geeta ಗೀತಾ ಅವರು ಈ ಚಿತ್ರದಲ್ಲಿ ಅನಂತ್ ನಾಗ್ ಅವರಿಗೆ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಸದ್ಯ ಅವರು ಸದರಿ ಚಿತ್ರಕ್ಕೆ ಒಳಿತಾಗಲೆಂದು ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರಂತೆ. ಅವರು ಬಂದ ನಂತರ ಕೆಲವೇ ದಿನಗಳಲ್ಲಿ ಚಿತ್ರೀಕರಣ ಚಾಲೂ ಆಗಲಿದೆ.
ದುಬೈನಲ್ಲಿ ನೆಲೆಸಿರುವ ಅಪ್ಪಟ ಕನ್ನಡಿಗ ಹರೀಶ್ ಶೇರಿಗಾರ್ ನಿರ್ಮಾಣದ ಈ ಚಿತ್ರ ಜಲಜಾಗೃತಿಯನ್ನು ಜೀವಾಳವಾಗಿಸಿಕೊಂಡ ಒಂದು ಸವಾಲಿನ, ವಿಭಿನ್ನ ಕಥೆ ಹೊಂದಿದೆ. ಕೂಡ್ಲು ರಾಮಕೃಷ್ಣ ಯಾವತ್ತೋ ರೆಡಿ ಮಾಡಿಕೊಂಡಿದ್ದ ಕಥೆ ಇದು. ಆದರೆ ಅದು ಹಾಗೆಯೇ ಉಳಿಯಲು ಕಾರಣ ನಿರ್ಮಾಪಕರು ಸಿಗದಿದ್ದದ್ದು. ಇಂಥಾ ಸಮಸ್ಯೆಯಿಂದಲೇ ಅದೆಷ್ಟು ಚೆಂದದ ಕಥೆಗಳು ಸತ್ತು ಹೋಗಿವೆಯೋ? ಆದರೆ ಈ ಕಥೆಯೂ ಉಸಿರು ಕಳಕೊಳ್ಳುವ ಘಳಿಗೆಯಲ್ಲಿಯೇ ಸಾಥ್ ನೀಡಿದವರು ಹರೀಶ್ ಶೇರಿಗಾರ್. ಇದೇ ಅವರ ಚಿತ್ರ ಪ್ರೀತಿಯನ್ನು ತೋರಿಸುತ್ತದೆ. ಕನ್ನಡ ಚಿತ್ರಗಳ ಅತೀ ವ್ಯಾಮೋಹ ಹೊಂದಿರುವ ಇವರು ಚೆಂದದ ಗಾಯಕರೂ ಹೌದು. ಇದೀಗ ಅವರು ಈ ಚಿತ್ರವನ್ನು ಭಾರೀ ಮಹತ್ವಾಕಾಂಕ್ಷೆ ಇಟ್ಟುಕೊಂಡು ನಿರ್ಮಿಸುತ್ತಿದ್ದಾರೆ.

-Ad-

Leave Your Comments