೧ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾಭಾರತ..!

ಕನ್ನಡ ಸಿನಿಮಾ ರಂಗ ಭಾರತದ ಉಳಿದ ಯಾವುದೇ ಸಿನಿಮಾ ರಂಗಕ್ಕೂ ಕಡಿಮೆ ಇಲ್ಲ ಅನ್ನೋದನ್ನು ಇತ್ತೀಚಿಗೆ ಸಾಬೀತು ಮಾಡುವ ಕಾಲ ಸನಿಹವಾಗ್ತಿದೆ.. ಕನ್ನಡದ ಖ್ಯಾತ ನಿರ್ಮಾಪಕ ಕಮ್ ಶಾಸಕ ಮುನಿರತ್ನ ತೆಲುಗಿನ ಬಾಹುಬಲಿ ಚಿತ್ರ ಮೀರಿಸುವಂತೆ ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ಮಾಡುತ್ತೇನೆ ಅಂತಾ ಘೋಷಣೆ ಮಾಡಿದ್ರು.. ಇದೀಗ ಅದನ್ನೂ ಮೀರಿಸುವ ಮತ್ತೊಂದು ಐತಿಹಾಸಿ ಕಥೆಯುಳ್ಳ ಮಹಾಭಾರತ ಸಿನಿಮಾ ನಿರ್ಮಾಣಕ್ಕೆ ಸಿದ್ದವಾಗಿದೆ..

ಹೌದು, ಕರ್ನಾಟಕ ಮೂಲದ ದುಬೈನಲ್ಲಿ ಉದ್ಯಮಿ ಆಗಿರುವ ಎನ್‌ಆರ್‌ಐ ಬಿ ಆರ್ ಶೆಟ್ಟಿ ಮಹಾಭಾರತ ಸಿನಿಮಾ ನಿರ್ಮಾಣ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ.. ಈ ಸಿನಿಮಾಗೆ ಬರೋಬ್ಬರಿ ೧ ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲು ನಾನು ಸಿದ್ದ ಅಂತಾ ಘೋಷಣೆ ಮಾಡಿದ್ದಾರೆ.. ಈ ಸಿನಿಮಾ ೨೦೧೮ರಲ್ಲಿ ಸೆಟ್ಟೇರಲಿದ್ದು ೨೦೨೦ಕ್ಕೆ ತೆರಮೆಲೆ ಅಪ್ಪಳಿಸಲಿದೆ..

ಆಸ್ಕರ್ ಪುರಸ್ಕೃತರಿಂದ ಕೂಡಿದೆ ಚಿತ್ರತಂಡ..!

ಹೌದು, ಸಾವಿರ ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ಅಂದ ಮೇಲೆ ದೊಡ್ಡ ದೊಡ್ಡ ತಾರಾಗಣವೇ ಇರಲಿದೆ ಅನ್ನೋದು ನಮ್ಮ ನಿಮ್ಮ ಲೆಕ್ಕಾಚಾರ.. ಅದಕ್ಕಿಂತ ಮುಖ್ಯವಾಗಿ ಈ ಸಿನಿಮಾ ತಂತ್ರಜ್ಞರ ತಂಡದಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪುರಸ್ಕೃತರು ಇರಲಿದ್ದಾರೆ ಎನ್ನುವುದು ಮೊದಲ ಮಾಹಿತಿ.. ಆ ಬಳಿಕ ನಿಧಾನವಾಗಿ ಎಲ್ಲಾ ಒಂದೊಂದೆ ಮಾಹಿತಿಯನ್ನು ಬಿಡುಗಡೆ ಮಾಡಲಿದ್ದಾರೆ..

೨೦೨೦ಕ್ಕೆ ಮಹಾಭಾರತ ಭಾಗ-೧, ೯೦ ದಿನದಲ್ಲಿ ಭಾಗ-೨

ಇದು ಬಾಹುಬಲಿ ಸಿನಿಮಾ ರೀತಿಯಲ್ಲೇ ಎರಡು ಭಾಗಗಲ್ಲಿ ಬರುವುದು ಪಕ್ಕಾ ಆಗಿದೆ.. ೨೦೧೮ರಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿ ೨೦೨೦ರಲ್ಲಿ ಚಿತ್ರ ಬಿಡುಗಡೆಯಾಗಲಿದೆ.. ಆ ಬಳಿಕ ಅಂದ್ರೆ ಪಾರ್ಟ್ – ೧ ಸಿನಿಮಾ ರಿಲೀಸ್ ಆದ ಕೇವಲ ೯೦ ದಿನಗಳಲ್ಲಿ ಮಹಾಭಾರತ ಪಾರ್ಟ್ ೨ ಸಿನಿಮಾ ಕೂಡ ಜನರ ಮುಂದೆ ಬರಲಿದೆ.. ಜೊತೆಗೆ ಕನ್ನಡ ಭಾಷೆ ಸೇರಿದಂತೆ ಭಾರತದ ಹಲವು ಭಾಷೆಗಳೂ ಹಾಗೂ ವಿಶ್ವದ ೧೦೦ ಭಾಷೆಗಳಲ್ಲಿ ಸಿನಿಮಾ ಬರಲಿದೆ..

ಮೋಹನ್‌ಲಾಲ್, ಶಾರೂಕ್ ಫಿಕ್ಸ್.. ಶ್ರೀಕುಮಾರನ್ ಆಕ್ಷನ್ ಕಟ್..!

ಈ ಐತಿಹಾಸಿ ಅದ್ಧೂರಿ ಬಜೆಟ್‌ನ ಸಿನಿಮಾವನ್ನು ಮಲೆಯಾಳಂನ ಖ್ಯಾ ನಿರ್ದೇಶಕ ಶ್ರೀಕುಮಾರ್ ಮೆನನ್ ನಿರ್ದೇಶನ ಮಾಡಲಿದ್ದಾರೆ.. ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಹಾಗೂ ಮಲಯಾಳಂನ ಲೀಡ್ ಆಕ್ಟರ್ ಮೋಹನ್ ಲಾಲ್ ಪ್ರಮುಖ ಪಾತ್ರಗಳಿಗೆ ನಿಕ್ಕಿಯಾಗಿದ್ದು, ಉಳಿದ ಪಾತ್ರಗಳಿಗೆ ಇನ್ನಷ್ಟೇ ಆಯ್ಕೆ ಮಾಡಬೇಕಿದೆ.. ಭೀಮನನ್ನು ಮುಖ್ಯಮಾಡಿಕೊಂಡು ಮೊದಲ ಭಾಗ ಚಿತ್ರೀಕರಣವಾದ್ರೆ, ಇನ್ನೊಂದು ಭಾಗದಲ್ಲಿ ಪಾಂಡವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ..

ಜೋಮ, ಮಂಡ್ಯ

-Ad-

Leave Your Comments