ಹೊಟ್ಟೆ ಹುಣ್ಣಾಗಿಸಿದ ಕಾಮಿಡಿ ಕಿಲಾಡಿಗಳ “ಮಹಾಸಂಗಮ “

 ಕಾಮಿಡಿ ಕಿಲಾಡಿಗಳು

ಕರುನಾಡಿನ ಹೆಮ್ಮೆಯ ಕಾರ್ಯಕ್ರಮವೆಂದೇ ಕರೆಯಬಹುದು.. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಸಾಕಷ್ಟು ಮನರಂಜನೆ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿವೆ.. ಇದೀಗ ಮುಂಚೂಣಿಯಲ್ಲಿರುವ ಕಾರ್ಯಕ್ರಮ ಎಂದರೆ ಜೀ ಕನ್ನಡ ವಾಹಿನಿಯಲ್ಲಿ ವಾರಂತ್ಯದಲ್ಲಿ ಜನರಿಗೆ ಭರ್ಜರಿ ನಗೆ ಉಣಿಸುತ್ತಿರುವ ಕಾಮಿಡಿ ಕಿಲಾಡಿಗಳು.. ಕಳೆದ ವಾರ ಕಲ್ಪತರು  ನಾಡು ತುಮಕೂರಿನಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಜೊತೆ ಸೇರಿಕೊಂಡು ಮಹಾಸಂಗಮ ಅನ್ನೋ ಅದ್ಧೂರಿ ಕಾರ್ಯಕ್ರಮ ನಡೆಸಿದ್ರು.. ಈ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ಉಣಬಡಿಸಿದ ಕಾಮಿಡಿ ರಸದೌತಣ ಹೀಗಿತ್ತು..

ಆಹಾ ..ಹಾಸ್ಯ !

mahasangama drama

ಮೊದಲಿಗೆ ಹಾಸ್ಯ ಕಲಾವಿದರಾದ ಕೆ ಆರ್ ಪೇಟೆ ಶಿವರಾಜು ಹೆಣ್ಣು ಪಾತ್ರ ಹಾಗೂ ದಾವಣಗೆರೆ ಗೋವಿಂದೇಗೌಡ ಗಂಡ ಹೆಂಡತಿ ಅನ್ನೋ ಪಾತ್ರ ನಿರ್ವಹಿಸಿದ್ರು.. ಅಬ್ಬೆಪಾರಿ ಗಂಡ ನಾಟಿ ಹೆಂಡ್ತಿ.. ಈಕೆಗೆ ಹುಡುಗರ ಮೇಲೆ ಸಿಕ್ಕಾಪಟ್ಟೆ ಆಸೆ.. ಗಂಡ ಸಿನಿಮಾಗೆ ಕರ್ಕೊಂಡು ಹೋದ್ರೆ ಸುರಿಯಯುವ ಮಳೆಯ ನಡುವೆ ಐಸ್‍ಕ್ರೀಮ್ ಕೇಳಿ ಪಕ್ಕದಲ್ಲಿ ನಿಂತಿದ್ದ ಹುಡುಗರನ್ನು ತಬ್ಬಿಕೊಳ್ಳುವ ಚಪಲ.. ಹುಡುಗರು ಲಡ್ಡು ಬಂದು ಬಾಯಿಗೆ ಬಿದ್ದರೆ ಸುಮ್ನೆ ಬಿಡ್ತಾರಾ..? ಸಿಕ್ಕಿದ್ದೇ ಚಾನ್ಸ್ ಅಂತ ತಬ್ಬಿಕೊಂಡ್ರು.. ಆಮೇಲೆ ಆಕೆ ಹೇಳೋದೇನು.. ನನಗೆ ಮಳೆಯ ಸಿಡಿಲು ಗುಡುಗು ಅಂದ್ರೆ ಭಯ ಹಾಗಾಗಿ ತಬ್ಬಿಕೊಂಡು ಬಿಡ್ತೀನಿ ಅಂತಾ.. ನಾಟಿ ದಾಂಪತ್ಯ ದೃಶ್ಯರೂಪ ತುಮಕೂರು ಜನರಷ್ಟೇ ಅಲ್ಲದೆ ಇಡೀ ಕರ್ನಾಟಕ ಜನರನ್ನು ಹೊಟ್ಟೆ ಉಣ್ಣಾಗುವಂತೆ ನಗೆಗಡಲಲ್ಲಿ ತೇಲಿಸಿಬಿಡ್ತು.. ಸರಿಗಮಪ ತೀರ್ಪುಗಾರರಾದ ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು..

ಮಾಚಗೋನಹಳ್ಳಿಯ ಮಜಾ !

mahasangama drama1

 

ಮತ್ತೊಂದು ಭಾಗದಲ್ಲಿ ಮಂಡ್ಯದ ಮಾಚಗೋನಹಳ್ಳಿಯ ಪ್ರತಿಭೆ ಮುತ್ತುರಾಜ ಹೆಣ್ಣಿನ ಪಾತ್ರ ನಿರ್ವಹಣೆ ಮಾಡಿದ್ರೆ, ಗೋಕಾಕ್‍ನ ಪ್ರವೀಣ್ ಕುಮಾರ್ ಗಂಡನ ಪಾತ್ರ ನಿರ್ವಹಿಸಿದ್ರು.. ಗಂಡ ಕುಡಿತದ ಚಟಕ್ಕೆ ಬಿದ್ರೆ, ಸಂಸಾರದಲ್ಲಿ ಗಂಡ ಹೆಂಡತಿ ದಾಂಪತ್ಯ ಹೇಗಿರುತ್ತೆ ಅನ್ನೋ ಥೀಮ್ ಮೇಲೆ ದೃಶ್ಯಗಳನ್ನು ಕಟ್ಟಲಾಗಿತ್ತು.. ಈ ನಡುವೆ ಕುಡಿದ ಅಮಲಿನಲ್ಲಿ ಗಂಡ ಪ್ರವೀಣ, ದೇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರತ್ಯಕ್ಷವಾಗುವಂತೆ ಮಾಡುತ್ತಾನೆ.. ಆ ದೇವರ ರೂಪದಲ್ಲಿ ಬಂದಿದ್ದೇ ಬೆಳಗಾವಿಯ ಸಂಜು ಬಸಯ್ಯ.. ಆಹಾ..! ಈ ಮೂವರು ಸೇರಿಕೊಂಡು ಕುಡುಕ ಸಂಸಾದರಲ್ಲಿ ದೇವರ ಪಾತ್ರ.. ನಗುವುದೇ ನಿಜವಾದ ಸ್ವರ್ಗ ಅನ್ನೋದನ್ನು ಜನರಿಗೆ ತೋರಿಸಿದ್ರು.. ಕೊನೆಯಲ್ಲಿ ಹೆಂಡತಿ ಗಂಡನಿಗೆ ಬಾರಿಸುವ ವೇಳೆ ನಡೆಯುವ ಸಂವಾದ ಜನರಿಗೆ ಸಂತಸ ಉಂಟು ಮಾಡಿದ್ರೆ, ಕುಡಿತದಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಜನರಿಗೆ ಸಂದೇಶ ನೀಡಿದ್ರು..

mahasangama 1

ಇನ್ನು ಬಾಯಿ ಬಡುಕಿ ಅಂತಾನೇ ಫೇಮಸ್ ಆಗಿರೋ ಹುಬ್ಬಳ್ಳಿ ನಯನಾ ಹಾಗೂ ಮಂಗಳೂರಿನ ಅನೀಶ್ ಅತ್ತೆ ಮಾವನಾಗಿದ್ರೆ, ಮೂಡಿಗೆರೆ ಮಿಂಚುಳ್ಳಿ ದಿವ್ಯಾ ಹಾಗೂ ತುಮಕೂರಿನ ಲೋಕೇಶ್ ಗಂಡ ಹೆಂಡ್ತಿ.. ಅತ್ತೆ ಮಾವ ಅಂದ್ರೆ ಅಳಿಯ ಮಗಳಿಗೆ ಚಿಂತೆ. ಯಾಕಂದ್ರೆ  ಅತ್ತೆ ಮಾವನಿಗೆ ಅಳಿಯನ ಮನೆ ಲೂಟಿ ಮಾಡುವುದೇ ಕಾಯಕ.. ಅತ್ತೆ ಮಾವನಿಂದ ಮನೆಯ ವಸ್ತುಗಳನ್ನು ಪಾರು ಮಾಡುವುದು ಅಳಿಯನ ಕೆಲಸ.. ಈ ನಡುವೆ ನಡೆಯುವ ಸಂಭಾಷಣೆ  ಅದ್ಬುತ.. ಅದ್ರಲ್ಲೂ ಭಿಕ್ಷುಕ ಅತ್ತೆ ಮಾವನ ಕಾಟಕ್ಕೆ ಅಳಿಯ ರೋಸಿ ಹೋಗಿದ್ದು ಮಾತ್ರ ನಕ್ಕು ನಕ್ಕು ಹೊಟ್ಟೆ ನೋವು ತರಿಸ್ತು.. ಅಳಿಯನ ಮನೆಯಲ್ಲೇ ಕಳ್ಳತನ ಮಾಡುವ ಕಳ್ಳ ಕಳ್ಳಿ ಆಕ್ಟಿಂಗ್ ಸೂಪರ್.. ಅಳಿಯ ಮಲ್ಗಿದ್ದಾನೆ ಅಂತಾ ಕಳ್ಳತನಕ್ಕೆ ಮುಂದಾಗೋದು, ಆದ್ರೆ ಅಳಿಯ ಇವರನ್ನೇ ಯಾಮಾರಿಸಿ ಕಳ್ಳತನ ಮಾಡುವಾಗ ಅತ್ತೆ ಮಾವನನ್ನು ಹಿಡಿಯುವುದು ಸೂಪರ್.. ಕೊನೆಯಲ್ಲಿ ಅಳಿಯ ನಿದ್ರೆ ಮಂಪರಿನಲ್ಲೆ ಎದ್ದು ಹೊಡೆದ ಹಾಗೆ ಅತ್ತೆ ಮಾವನಿಗೆ ಹಿಡಿದು ರುಬ್ಬವ ದೃಶ್ಯ ಜನ ಎದ್ದೆದ್ದು ಕುಣಿಯುವಂತೆ ಮಾಡ್ತು..

mahasangama vijaya prakash

ಕೊನೆಯಲ್ಲಿ ಸಖತ್ ಟ್ಯಾಲೆಂಟ್ ಬಳಸಿ ಹಾಸ್ಯ ಕಲಾವಿದರು ಆಕ್ಟಿಂಗ್ ಮಾಡಿದ್ರು.. ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸರಿಗಮಪ ತಂಡವನ್ನೇ ವಸ್ತುವನ್ನಾಗಿ ಬಳಸಿಕೊಂಡು ಬೇಜಾನ್ ನಗಿಸಿದ್ರು.. ನಯನಾ ಆಂಕರಿಂಗ್ ಮಾಡುತ್ತಾ ಅನುಶ್ರೀಯನ್ನು ಅನುಕರಣೆ ಮಾಡುತ್ತಾ, ನಾನು ಬ್ರಾಂಡಿಂಗ್ ಹೆಸರು ಹೇಳಿದ್ರೆ ಸೀರೆ ಕೊಡ್ತಾರಾ.. ಹಾಗಿದ್ರೆ ನಂಗೊಂದು ನನ್ನ ಅಮ್ಮನಿಗೆ ಒಂದು ಅಂತಾ ಟಾಂಗ್ ಕೊಟ್ರು.. ಗಾಯಕ ವಿಜಯ್ ಪ್ರಕಾಶ್ ಪಾತ್ರವನ್ನು ಕೆ ಆರ್ ಪೇಟೆ ಶಿವರಾಜ್ ಮಾಡಿ, ವಿಜಯ್ ಪ್ರಕಾಶ್ ಅಭಿನಯವನ್ನು ಒಂದಿಂಚು ಮಿಸ್ ಮಾಡದೆ ನಟಿಸಿದ್ರು.. ಜನರನ್ನು ರಂಜಿಸಿದ್ರು.. ಇನ್ನು ಸರಿಗಮಪ ಸೆಟ್‍ನಲ್ಲಿ ಅರ್ಜುನ್ ಜನ್ಯರನ್ನು ಪ್ರಿಯತಮ ಅಂತಾ ಗೋಳುಯ್ಕೊಳೋ ಅರ್ಜುನ್ ಜನ್ಯ ಪಾತ್ರವನ್ನು ತುಮಕೂರು ಲೋಕೇಶ್ ಮಾಡಿದ್ರು.. ಅನುಶ್ರೀ ಪಾತ್ರಧಾರಿ ನಯನಾ ಡೈಲಾಗ್‍ಗಳು ಅಬ್ಬಬ್ಬಾ.. ಬೆಕ್ಕು ಹಾಲ್ಹತ್ರ ಬಂದಿಲ್ಲ ಅಂದ್ರೆ ಏನಂತೆ ಹಾಲೇ ಬೆಕ್ಕ ಹತ್ರ ಹೋಗುತ್ತೆ ಅಂದ್ರೆ ಆರೂ ಜನ ಜಡ್ಜ್ ಗಳೂ  ಸೇರಿದಂತೆ ಜನರಲ್ಲಿ ಉರುಳಾಡುವಷ್ಟು ನಗೆ.. ಮಹಾಗುರು ರಾಜೇಶ್ ಕೃಷ್ಣನ್ ಪಾತ್ರವನ್ನು ಹಿತೇಶ್ ಕುಮಾರ್ ಮಾಡಿದ್ರು.. ಅವರ ನಡುವೆ ನಡೆಯುವ ಸಣ್ಣಪುಟ್ಟ ಚರ್ಚೆಗಳನ್ನು ಹಾಸ್ಯದ ಮೂಲಕ ಹೇಳಿದ್ದು, ಚೋಟು ಪುಟಾಣಿ ಆದ್ಯ ಪಾತ್ರವನ್ನು ಬೆಳಗಾವಿಯ ಸಂಜುಬಸಯ್ಯ ಮಾಡಿದ್ದು, ಮಧ್ಯೆ ಮಧ್ಯೆ ನಟ ಜಗ್ಗೇಶ್ ಮಸಾಲಾ ಡೈಲಾಗು.. ಒಂದೇ ಎರಡೇ.. ಉಸ್ಸಪ್ಪಾ.. ನಕ್ಕು ನಕ್ಕು ಸುಸ್ತಾಯ್ತು.. ಡೂಪ್ಲಿಕೇಟ್ ಜಡ್ಜ್ ಗಳ  ಜೊತೆ ನಡೆದ ಸಂಭಾಷಣೆ ಅದ್ಬುತ.. ಕೊನೆಯಲ್ಲಿ ರಿಯಲ್ ಜೊತೆ ರೀಲ್‍ಗಳು ಸ್ಟೇಜ್ ಮೇಲೆ ರ್ಯಾಂಪ್ ವಾಕ್ ಮಾಡಿದ್ದು ಅಭಿನಯಕ್ಕೆ ಸಾಥ್ ಕೊಟ್ಟ ಆಗಿತ್ತು..

ವಾರಪೂರ್ತಿ ದುಡಿಮೆಗೆ ಹಚ್ಚಿಕೊಳ್ಳುವ ಜನರು ವಾರಾಂತ್ಯದಲ್ಲಿ ಇದೊಂದು ಪ್ರೋಗ್ರಾಂ ನೋಡಿದ್ರೆ ಎಲ್ಲ ಆಯಾಸಗಳು   ದೂರ ಓಡಿ ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ಜೊತೆಗೆ ನಕ್ಕಷ್ಟು ನಿಮ್ಮ ಆರೋಗ್ಯವೇ ವೃದ್ಧಿಯಾಗುತ್ತದೆ ಏನಂತೀರಿ?

ಸರ್ವಸಮರ್ಥ, ನಾಗಮಂಗಲ

 

-Ad-

Leave Your Comments