ಪವರ್ ಸ್ಟಾರ್ ಬಗ್ಗೆ ಪ್ರಿನ್ಸ್ ಹೇಳಿದ್ದೇನು ?

ಬೆಂಗಳೂರು ಈಗ ಎಲ್ಲಾ ಪ್ರಮುಖ ಭಾಷೆಯ ಸಿನಿಮಾ ಮಂದಿಗೂ ಬೇಕೇ ಬೇಕು . ಅದರಲ್ಲೂ ಹಿಂದಿ ,ತಮಿಳು,ತೆಲುಗು ಚಿತ್ರರಂಗಕ್ಕಂತೂ ಬೆಂಗಳೂರು ಹೂಡಿದ ಹಣವನ್ನ ಮರಳಿ ಪಡೆಯೋಕೆ ಹೇಳಿ ಮಾಡಿಸಿದ ಊರು. ತಮ್ಮ ಸಿನಿಮಾ ಪ್ರಚಾರಕ್ಕೆ ಮೆಗಾಸ್ಟಾರ್ ಸೂಪರ್ಸ್ಟಾರ್ ಗಳು ತಪ್ಪದೆ ಬರುತ್ತಿದ್ದಾರೆ . ಅದೇ ಹಾದಿಯಲ್ಲಿ ಸೂಪರ್ಸ್ಟಾರ್ ಮಹೇಶ್ ಬಾಬು ಕೂಡ ತಮ್ಮ  ಸ್ಪೈಡರ್ ಸಿನಿಮಾ ಪ್ರಮೋಷನ್ ಗೆ ಬೆಂಗಳೂರಿಗೆ ಬಂದಿದ್ದಾರೆ . ಸ್ಯಾಂಡಲ್ವುಡ್ ಗೆಳೆಯನ ಬಗ್ಗೆಯೂ ಮಾತನಾಡಿದ್ದಾರೆ.
ಎಲ್ಲಿ ಸುದ್ದಿಗೋಷ್ಠಿ ?
ಮಹೇಶ್ ಬಾಬು ಅಭಿನಯದ ಸ್ಪೈಡರ್ ಚಿತ್ರ ಈ ವಾರ  ರಿಲೀಸ್ ಆಗಲಿದೆ. ಆದಕಾರಣ

ಫ್ರಿನ್ಸ್ ಮಹೇಶ್  ಬಾಬು. ಹಾಗೂ ನಟಿ ರಾಕುಲ್ ಪ್ರೀತ್ ಸಿಂಗ್ ಲಿ ಮೆರಿಡಿಯನ್ ಹೊಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಸ್ಪೈಡರ್ ಗೆ ಎಲ್ಲರ ಬೆಂಬಲವನ್ನು ಕೋರಿದರು .
ಪ್ರಿನ್ಸ್ ಮಹೇಶ್ ಬಾಬು ಪವರ್ಸ್ಟಾರ್ ಮಧ್ಯೆ ಏನಿದೆ ?
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸ್ಯಾಂಡಲ್ವುಡ್ ನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನನ್ನ ಬೆಸ್ಟ್ ಫ್ರೆಂಡ್ ಅಂತ ತುಂಬಾ ಖುಷಿಯಾಗಿ ಹೇಳಿಕೊಂಡ್ರು.
ಮುರುಗದಾಸ್ ನಿರ್ದೆಶನದ ಸ್ಪೈಡರ್ ಸಿನಿಮಾ ೨೦೧೫ರಲ್ಲಿ  ಶುರುವಾಗಿದ್ದು ಇದೀಗ ತೆರೆಗೆ ಸಿದ್ದವಾಗಿದೆ. ಎರಡು ವರುಷಗಳ ಪರಿಶ್ರಮಕ್ಕೆ ಪ್ರೇಕ್ಷಕ ಹೇಗೆ ಫಲ ನೀಡಲಿದ್ದಾನೆ ನೋಡೋಣ.
-Ad-

Leave Your Comments