“ಮಜಾ ಟಾಕೀಸ್” ನಲ್ಲಿ ಭುವನ್ -ಸಂಜನಾ ಮದುವೆ?!

ಮಜಾ ಟಾಕೀಸ್ : ಕನ್ನಡದ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರತಿ ಶನಿವಾರ -ಭಾನುವಾರ ಮೂಡಿ ಬರುತ್ತಿರುವ ಯಶಸ್ವಿ ಕಾರ್ಯಕ್ರಮ. ಡಬಲ್ ಸೆಂಚುರಿ ಬಾರಿಸಿ ಇದೀಗ ಮೂರನೇ ಸೆಂಚುರಿ ಕಡೆಗೆ ಮಜಮಜವಾಗಿ ದೌಡಾಯಿಸುತ್ತಿದೆ. ಪಟ್ ಪಟ್ ಅಂತ ಮಾತಿನಲ್ಲೇ ಸಿಡಿಮದ್ದು ಸಿಡಿಸುವ ಮಾತಿನ ಮಲ್ಲ, ಟೈಮಿಂಗ್ ಕಿಂಗ್ ಸೃಜನ್ ಲೋಕೇಶ್ ಈ ವಾರದ ಮಜಾಟಾಕೀಸ್ ನಲ್ಲಿ ಮದುವೆ ಮಜಾ ತೋರಿಸೋದಿಕ್ಕೆ ಹೊರಟಿದ್ದಾರೆ.

_T7A6639 (1)

ಯಾರದೀ ಮದುವೆ?

ಕಡೆಯ ಕಡೆಯ ಕಂತಿನಲ್ಲಿ ಸಕ್ಕತ್ ಟಿಆರ್ಪಿ ಬಾಚಿಕೊಂಡ ಬಿಗ್ ಬಾಸ್ ಮನೆಯ ಪ್ರಥಮ್ , ಕಿರಿಕ್ ಕೀರ್ತಿ, ಮೋಹನ್ ,ಓಂಪ್ರಕಾಶ್, ಕಾವ್ಯಶಾಸ್ತ್ರಿ, ಕಾರುಣ್ಯ ಎಲ್ಲಾ ಸೇರಿ ನಗ್ತಾ ನಗ್ತಾ ಮದುವೆಯಲ್ಲಿ ಭಾಗಿಗಳಾದರು . ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಅನ್ನಿಸಿಕೊಂಡಿದ್ದ ಭುವನ್ ಸಂಜನಾ ಮದುವೆಯಾದ ಜೋಡಿಗಳು.

ಮದುವೆ ಮಾಡಿಸಿದ್ದು ಯಾರು ?

_T7A6550

ಸೃಜನ್  ಮಜಾ ಟಾಕೀಸ್ ನ ಪ್ರತಿ ಸಂಚಿಕೆಯಲ್ಲ್ಲೂ ಟಿವಿ ,ಸಿನಿಮಾ ತಂಡಗಳನ್ನ ಕರೆಸಿ ವಿಭಿನ್ನ ರೀತಿಯಲ್ಲಿ ಕಾಮಿಡಿ ಕಟ್ಟಿ ನೋಡೋ ಅಭಿಮಾನಿಗಳು ಕಿಲಕಿಲ …ಕುಲುಕುಲು..ಹಹಹ…ಅಂತ ನಗೆ ಉಕ್ಕಿಸೋದನ್ನ ನೋಡ್ತಾನೆ ಇದ್ದೀರಿ . ಈ ವಾರದ ಸಂಚಿಕೆಯಲ್ಲಿ  ಬಿಗ್ ಬಾಸ್ ಮನೆಯಲ್ಲಿ ತರಹೇವಾರಿ ಆಟ ಆಡಿದವರನ್ನೆಲ್ಲ ಕಲೆಹಾಕಿ ಮದುವೆಯ ಮಜಾ ಕೊಡೋದಿಕ್ಕೆ ತಂಡದ  ತಯಾರಿ ಜೋರಾಗಿದೆ. ಭುವನ್ -ಸಂಜನಾ ಮದುವೆ  ಸೀನ್ ಕ್ರಿಯೇಟ್ ಮಾಡಿ ಪ್ರಪೋಸ್ ಮಾಡೋದ್ರಿಂದ ಹಿಡಿದು ಮಾಂಗಲ್ಯ ಕಟ್ಟೋವರೆಗೂ ನಾ ಹೇಳಿದ ಹಾಗೆ ಕೇಳ್ಬೇಕ್ ಅಂತ ಪೌರೋಹಿತ್ಯ ವಹಿಸಿರೋದು ಓಂ ಪ್ರಕಾಶ್

ಸುದ್ದಿ ಮೂಲಗಳ ಪ್ರಕಾರ ಭುವನ್ ಸಂಜನಾಗೆ ತಾಳಿ ಕಟ್ಟಿದ್ದು ನಿಜಾನೇ . ಮಾಂಗಲ್ಯ ಅಂದ್ರೆ ಆಟದ ವಸ್ತು ಅಲ್ಲವಲ್ಲ . ಹಿಂದಿಯ ಕೆಲವು ಕಾರ್ಯಕ್ರಮಗಳಲ್ಲಿ ತೆರೆಯ ಮೇಲೆ ಪಾಪ್ಯುಲರ್ ಆಗಿರೋ ಲವರ್ಸ್ ನ ಅಲ್ಲೇ ಮದುವೆ ಮಾಡಿಸಿರೋದು ಉಂಟು. ಅಲ್ಲಿ ಆಗಿದ್ದು ಮದುವೆಯ ನಾಟಕ ಅಷ್ಟೇ ಅಂತಾರೋ ಅಥವಾ ಮಾಂಗಲ್ಯ ಕಟ್ಟಿ ಆದ ಮೇಲೆ ಮುಗೀತಲ್ಲ ನಾವು ದಂಪತಿಗಳು ಅಂತಾರೋ ಭುವನ್-ಸಂಜನಾ ಕಾದು  ನೋಡಬೇಕು.

_T7A6577

ಮಜಾ ಟಾಕೀಸ್ ಭುವನ್ – ಸಂಜನಾ ಮದುವೆಯ  ತುಣುಕನ್ನ ಬಿಟ್ಟು ಕುತೂಹಲ ಹುಟ್ಟಿಸಿರೋದು ನಿಜ. ಹೊಗೊಳೊವ್ರು  ತೆಗಳೊವ್ರು ಎಲ್ಲರು ಈ ವಾರದ ಸಂಚಿಕೆ ಮೇಲೆ ಕಣ್ಣು ನೆಡೋದಂತೂ ಗ್ಯಾರಂಟಿ .

-Ad-

Leave Your Comments