ರೋ ..ರೋಮಿಯೋಗೆ ಹೆಜ್ಜೆ ಹಾಕಿದ ಮಾಲಾಶ್ರೀ -ಅಂಬರೀಷ್ !

ರೋ ..ರೋಮಿಯೋ ಪುನೀತ್ ಹಾಡಿದ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದೇ ಹಾಡಿಗೆ ಇಂದು ಅಂಬರೀಷ್ -ಮಾಲಾಶ್ರೀ ಕುಣಿದು ಕುಪ್ಪಳಿಸಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ  ತೆರೆಗೆ ಬರುತ್ತಿರುವ ಉಪ್ಪು ಹುಳಿ ಖಾರ ಸಿನಿಮಾದ ಮಾಲಾಶ್ರೀ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದ ರೆಬೆಲ್ ಸ್ಟಾರ್ ಅಂಬರೀಷ್ ರೋ ..ರೋಮಿಯೋ ಎಂದಿದ್ದಾರೆ.

ಗುಂಡಿಗೆ ಕಲ್ ಗಂಡೇ ನಾ ನಿನ್ ಥರ ನಾ ಒಂಥರಾ ಅಲ್ಲ ಅಂತ ಹದಿನಾರು ವರುಷದ ಹಿಂದೆ ಮಾಲಾಶ್ರೀ ಜೊತೆಯಲ್ಲಿ ಡಾನ್ಸ್ ಮಾಡಿದ್ದರು ಅಂಬಿ.  ಮತ್ತೆ ಅದೇ ಉತ್ಸಾಹದಲ್ಲಿ ಉಪ್ಪು ಹುಳಿ ಖಾರದ ಹಾಡಿಗೆ ನೃತ್ಯ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭ ಕೂಡ ಕೋರಿ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದಾರೆ. ಇದು ಅಭಿಮಾನಿಗಳಿಗಂತೂ ಭರ್ಜರಿ ಖುಷಿಕೊಟ್ಟಿದೆ. ಅಷ್ಟೇ ಅಲ್ಲ ರೋ ..ರೋಮಿಯೋ ಹಾಡು ಯಾರೇ ಕೇಳಿದ್ರು ಮೈ ಕೈ ತಂತಾನೇ ಕುಣಿತಕ್ಕೆ ಸಜ್ಜುಗೊಳ್ಳೋದು ದಿಟ .

ಇಮ್ರಾನ್ ಸರ್ದಾರಿಯಾ ನಿರ್ದೇಶನದ  ಉಪ್ಪು ಹುಳಿ ಖಾರ ಪ್ರೇಕ್ಷಕರಿಗೆ ರುಚಿ ನೀಡಲಿದೆ ಎನ್ನುವ ಭರವಸೆ ಚಿತ್ರ ತಂಡಕ್ಕಿದೆ. ಮಾಲಾಶ್ರೀ ,ಅನುಶ್ರೀ ,ಶರತ್ ,ಜಯಶ್ರೀ ಪ್ರಮುಖ ಪಾತ್ರದಲ್ಲಿದ್ದಾರೆ . ರಾಜ್ಯಾದ್ಯಂತ ಇದೇ 24ಕ್ಕೆ ಉಪ್ಪು ಹುಳಿ ಖಾರ ತೆರೆಕಾಣಲಿದೆ.

-Ad-

Leave Your Comments